ಪುಣೆ:
ಟ್ರಕ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ 9 ಮಂದಿ ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಪುಣೆ-ಸೊಲ್ಲಾಪುರ ಹೆದ್ದಾರಿಯಲ್ಲಿ ಬರುವ ಕದಂವಕ್ ವಸ್ತಿ ಗ್ರಾಮದ ಬಳಿ ನಡೆದಿದೆ.
ಶುಕ್ರವಾರ ತಡರಾತ್ರಿ ಈ ಅಪಘಾತ ಸಂಭವಿಸಿದ್ದು, ಅಕ್ಷಯ್ ಭರತ್ ವೈಕರ್, ವಿಶಾಲ್ ಸುಭಾಷ್ ಯಾದವ್, ನಿಖಿಲ್ ಚಂದ್ರಕಾಂತ್, ನೂರ್ ಮಹಮ್ಮದ್ ಅಬ್ಬಾಸ್ ದಯಾ, ಪರ್ವೇಜ್ ಅತ್ತರ್, ಶುಭಂ ರಾಮ್ದಾಸ್ ಭಿಸೆ, ಅಕ್ಷಯ್ ಚಂದ್ರಕಾಂತ್, ದತ್ತ ಗಣೇಶ್ ಯಾದವ್, ಜುಬೇರ್ ಅಜೀಜ್ ಮುಲಾನಿ ಮೃತ ಕಾಲೇಜು ವಿದ್ಯಾರ್ಥಿಗಳು. ಇವರೆಲ್ಲರೂ ಪುಣೆಯ ಯಾವತ್ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ.
Maharashtra: 9 people, in a car, died in a collision with a truck on Pune-Solapur highway near Kadamwak Wasti village in Pune, late last night. All the deceased were residents of Yavat village of Pune. pic.twitter.com/CVihgprc92
— ANI (@ANI) July 19, 2019
ವಿದ್ಯಾರ್ಥಿಗಳು ಪುಣೆಯಿಂದ ರಾಯ್ಗಢ್ಗೆ ತೆರಳಿದ್ದು, ಬಳಿಕ ತಡರಾತ್ರಿ ಪುಣೆಗೆ ಹಿಂದಿರುಗುತ್ತಿದ್ದರು. ಕದಮ್ವಾಕ್ ವಸ್ತಿ ಗ್ರಾಮದ ಬಳಿ ಬರುತ್ತಿದ್ದಂತೆಯೇ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಬಳಿಕ ಎದುರಿನಿಂದ ಬರುತ್ತಿದ್ದ ಟ್ರಕ್ಗೆ ವೇಗವಾಗಿ ಹೋಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ 9 ವಿದ್ಯಾರ್ಥಿಗಳೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಸಂಬಂಧ ಪುಣೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ