ಬೆಂಗಳೂರು:
ನಾನು ಜೆಡಿಎಸ್ ಪಕ್ಷವನ್ನು ಬಿಡಲಿಲ್ಲ, ಅವರೇ ನನ್ನನ್ನು ಡಿಸ್ಮಿಸ್ ಮಾಡಿದರು ಎಂದು ತಾವು ಜೆಡಿಎಸ್ ತೊರೆದ ಹಿಂದಿನ ಕಾರಣವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಬಹಿರಂಗಗೊಳಿಸಿದ್ದಾರೆ.
ಅತೃಪ್ತ ಶಾಸಕರನ್ನ ಬಿಜೆಪಿ ಆಮಿಷವೊಡ್ಡಿ ಕರೆದುಕೊಂಡು ಹೋದರು ಎಂಬ ವಿಚಾರ ಸದನದಲ್ಲಿ ಇಂದು ಸಿಕ್ಕಾಪಟ್ಟೆ ಚರ್ಚೆಗೆ ಒಳಗಾಯಿತು. ಈ ವೇಳೆ ಮಾತನಾಡಿದ ಸಿಟಿ ರವಿ, 2006ರಲ್ಲಿ ಸಿದ್ದರಾಮಯ್ಯನವರು ಜನತಾ ದಳದ ಉಪಮುಖ್ಯಮಂತ್ರಿಯಾಗಿದ್ದರು. ಅವರನ್ನು ಏನು ಕೊಟ್ಟು ಕರೆದುಕೊಂಡು ಹೋಗಿದ್ದೀರಿ ಎಂದು ನಾವು ಕೇಳಿಲ್ಲ ಎಂದು ಸಿಟಿ ರವಿ ಕಾಂಗ್ರೆಸ್ ನಾಯಕರ ಆಪರೇಷನ್ ಕಮಲದ ಆರೋಪಕ್ಕೆ ತಿರುಗೇಟು ನೀಡಿದರು.
ಈ ಪ್ರಶ್ನೆಗೆ ಉತ್ತರ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಸಿಟಿ ರವಿಗೆ ಸರಿಯಾದ ಮಾಹಿತಿ ಇಲ್ಲ ಅನಿಸುತ್ತದೆ. ನಾನು ಜೆಡಿಎಸ್ ಪಕ್ಷವನ್ನ ಬಿಡಲಿಲ್ಲ. ಜೆಡಿಎಸ್ನಿಂದ ನನನ್ನು ಉಚ್ಛಾಟನೆ ಮಾಡಿದರು. ಧರಂಸಿಂಗ್ ಅವರು ನನನ್ನು ಡಿಸಿಎಂ ಸ್ಥಾನದಿಂದ ವಜಾ ಮಾಡಿದರು. ಕೂಡಲೇ ನಾನು ಹೋಗಿ ಕಾಂಗ್ರೆಸ್ ಪಕ್ಷ ಸೇರಿಲ್ಲ. ಬದಲಾಗಿ ಅಹಿಂದ ಸಂಘಟನೆ ಮಾಡುತ್ತಿದ್ದೆ. 2005ರಲ್ಲಿ ಪ್ರಾರಂಭಿಸಿ ಸುಮಾರು 1 ವರ್ಷದ ಸಂಘಟನೆ ಮಾಡಿದ ಬಳಿಕ 2006ರಲ್ಲಿ ಕಾಂಗ್ರೆಸ್ ಸೇರಿದೆ. ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
