ಬರಗೂರು
ಬೇಸಿಗೆ ಕಾಲದಲ್ಲಿ ಮೊಟ್ಟೆಯಿಟ್ಟು ಮಳೆಗಾಲದಲ್ಲಿ ಲಾರ್ವ ಉತ್ಪತ್ತಿಯಿಂದ ಸೊಳ್ಳ್ಳೆಗಳು ಉಂಟಾಗಿ ರೋಗಹರಡಲು ಪ್ರಾರಂಭವಾಗುವುದು ಎಂದು ಸರ್ಕಾರಿ ಆಸ್ಪತ್ರೆಯ ಡಾ.ನಂದೀಶ್ ತಿಳಿಸಿದರು.ಸಿರಾ ತಾಲ್ಲೂಕು ಹುಲಿಕುಂಟೆ ಹೋಬಳಿಯ ಬರಗೂರಿನಲ್ಲಿ ಏರ್ಪಡಿಸಿದ್ದ ಡೆಂಗ್ಯೂ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನೆ ಸುತ್ತಮುತ್ತ ಖಾಲಿ ಪ್ರದೇಶದಲ್ಲಿ ಯಾವುದೇ ಟೈರ್, ತೆಂಗಿನ ಚಿಪ್ಪು, ಪ್ಲಾಸ್ಟಿಕ್ ಬಾಟಲ್‍ಗಳನ್ನು ಬಿಡದೆ ನಾಶ ಮಾಡಿ, ಸೊಳ್ಳೆ ಮೊಟ್ಟೆ ಇಡುವುದನ್ನು ತಪ್ಪಿಸಿ, ಕಾಯಿಲೆಯನ್ನು ತಡೆಗಟ್ಟಿ ಎಂದರು.ಬರಗೂರು ಗ್ರಾ.ಪಂ ಪಿಡಿಓ ಅನಿತಾ ಮಾತನಾಡಿ, ಪ್ರತಿಯೊಂದು ಮನೆಯವರು ನಮ್ಮ ಸಿಬ್ಬಂದಿಗೆ ಸಹಕಾರ ಸಹಾಯ ಮಾಡಿದಾಗ ಮಾತ್ರ ಗ್ರಾಮ ಸ್ವಚ್ಛತೆ ಕಾಣಲು ಸಾಧ್ಯ ಎಂದರು.
ಕರವೇ ಅಧ್ಯಕ್ಷ ಲತೀಫ್, ಆಂಜನೇಯ ಸ್ವಾಮಿ ಪ್ರೌಢಶಾಲಾ ದೈಹಿಕ ಶಿಕ್ಷಕ ಚಂದ್ರಶೇಖರ್, ಡಾ.ರಾಜು, ಹಿರಿಯ ಪುರುಷ ಆರೋಗ್ಯ ಸಹಾಯಕ ಭೀಮಣ್ಣ, ಪುಟ್ಟರಾಜು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಲತಾ, ತ್ರಿವೇಣಿ, ಕಿರಿಯ ಪುರುಷ ಆರೋಗ್ಯ ಸಹಾಯಕ ಕೆಎನ್ ಮನುಕಿರಣ್, ಪ್ರೇಮ, ಗ್ರಾಮಸ್ಥರು, ಆಂಜನೇಯಸ್ವಾಮಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








