ಪಾವಗಡ
2016-17 ನೇ ಸಾಲಿನ ಶೇಕಡ 3 ರ ಅನುದಾನದಲ್ಲಿ ಸ್ವಯಂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಸಹಾಯ ಧನ ನೀಡಲಾಗುತ್ತಿದ್ದು, ಫಲಾನುಭವಿಗಳು ದುರುಪಯೋಗ ಮಾಡದೆ ಸದುಪಯೋಗ ಮಾಡಿಕೊಳ್ಳಬೇಕೆಂದು ನಾಗಲಮಡಿಕೆ ಜಿಲ್ಲಾ ಪಂಚಾಯಿತಿ ಸದಸ್ಯ ಚನ್ನಮಲ್ಲಯ್ಯ ತಿಳಿಸಿದರು.
ಅವರು ಶನಿವಾರ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ವಿಕಲಚೇತನರಿಗೆ ಸೌಲಭ್ಯ ವಿತರಣಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ನಾಗಲಮಡಿಕೆ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಶೇಕಡ 3 ರ ಅನುದಾನದಲ್ಲಿ 19 ವಿಕಲಚೇತನ ಫಲಾನುಭವಿಗಳಿಗೆ 1 ಲಕ್ಷ 51 ಸಾವಿರ ರೂ. ಗಳನ್ನು ವಿತರಿಸಲಾಗುತ್ತಿದೆ.
ಇನ್ನೂ ಮುಂದಿನ ದಿನಗಳಲ್ಲಿ ಶೇಕಡ 5 ರಷ್ಟು ಹೆಚ್ಚಳವಾಗಿದ್ದು, ವಿದ್ಯಾಭ್ಯಾಸ ಮತ್ತು ವೈದ್ಯಕೀಯ ಹಾಗೂ ಸ್ವಯಂ ಉದ್ಯೋಗ ಕಲ್ಪಿಸಲು ಮುಂದಾಗುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಸಿಡಿಪಿಓ ಶಿವಕುಮಾರ್, ಎಂಆರ್‍ಡಬ್ಲ್ಯು ಮೈಲಾರಪ್ಪ, ವಿ.ಆರ್.ಡಬ್ಲ್ಯು ಪ್ರಭಾಕರ್ ರೆಡ್ಡಿ, ಆದಿಲಕ್ಷ್ಮೀ, ಗೋಪಾಲ್, ಫಲಾನುಭವಿಗಳ ಪೋಷಕರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
