ಅಜಂ ಖಾನ್ ವಿರುದ್ಧ 27 ಎಫ್ ಐ ಅರ್ ದಾಖಲು ..!!

ರಾಂಪುರ್ :

     ಉತ್ತರ ಪ್ರದೇಶದ ವಿವಾದಾತ್ಮಕ ಸಂಸದ ಎಂದೇ ಖ್ಯಾತಿ ಗಳಿಸಿರುವ ಆಜಂ ಖಾನ್ ಅವರು ತಮ್ಮ ವಿಶ್ವವಿದ್ಯಾಲಯ ಸ್ಥಾಪನೆಗಾಗಿ  ರೈತರ ಭೂಮಿಯನ್ನು ಅಕ್ರಮವಾಗಿ ಕಸಿದುಕೊಂಡಿದ್ದಾರೆ ಎಂದು ಕೇವಲ ಒಂದು ತಿಂಗಳ ಅವಧಿಯಲ್ಲಿ 27 ಎಫ್‌ಐಆರ್ ಗಳು  ದಾಖಲಾಗಿದೆ ಎಂದು ಉ.ಪ್ರದೇಶ ಪೊಲೀಸ್ ಇಲಾಖೆ ಸ್ಪಷ್ಟವಾಗಿ ಹೇಳಿದೆ.

      ಅಖಿಲೇಶ್ ಯಾದವ್ ನೇತೃತ್ವದ ಸರ್ಕಾರವಿದ್ದಾಗ ಕ್ಯಾಬಿನೆಟ್ ಮಂತ್ರಿಯಾಗಿದ್ದ ಅಜಮ್ ಖಾನ್, 2006 ರಲ್ಲಿ ಅಸ್ತಿತ್ವಕ್ಕೆ ಬಂದ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ ಸ್ಥಾಪಕ ಮತ್ತು ಕುಲಪತಿಯೂ ಆಗಿದ್ದಾರೆ ಈಗ ಅವರ ಕೊರಳಿಗೆ ಸುತ್ತಿಕೊಳ್ಳುತ್ತಿರುವ ಉರುಳು ಸಹ ಅದೇ ಅಕ್ರಮ ಭೂ ಒತ್ತುವರಿ ಪ್ರಕರಣದಲ್ಲಿ ರಾಂಪುರದಲ್ಲಿ ಅಜಂ ಖಾನ್ ವಿರುದ್ಧ 27 ಎಫ್ ಐ ಆರ್ ದಾಖಲಾಗಿವೆ.

    ಈ ಪ್ರಕರಣಗಳನ್ನು ಭಾರತೀಯ ದಂಡ ಸಂಹಿತೆ ಸೆಕ್ಷನ್ 323 , 342 , 447 , 389 ಅಡಿಯಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

     3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡಿರುವ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯವು 121 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿದೆ ಎಂದು ತನ್ನ ವೆಬ್‌ಸೈಟ್ ತಿಳಿಸಿದೆ. ಭೂ ಕಬಳಿಕೆ ಎಫ್‌ಐಆರ್‌ಗಳಲ್ಲದೆ, ರಾಂಪುರ್ ಪೊಲೀಸರು ಜೂನ್ 16 ರಂದು ವಿಶ್ವವಿದ್ಯಾಲಯದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು. 250 ವರ್ಷಗಳಷ್ಟು ಹಳೆಯದಾದ ರಾಂಪುರ್ ಮೂಲದ ಓರಿಯಂಟಲ್ ಕಾಲೇಜಿನ ಪ್ರಾಂಶುಪಾಲರು, ಈ ಹಿಂದೆ ಮದ್ರಸಾ ಅಲಿಯಾ ಎಂದು ಕರೆಯಲಾಗುತ್ತಿತ್ತು, 9,000 ಕ್ಕೂ ಹೆಚ್ಚು ಪುಸ್ತಕಗಳು ಕದ್ದು ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಸಾಗಿಸಲಾಗಿದೆ ಎಂದು ಆರೋಪಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link