ಹರಪನಹಳ್ಳಿ
ತಾಲ್ಲೂಕಿನಲ್ಲಿ ತುಂಗಭದ್ರ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಪಟ್ಟಣಕ್ಕೆ ನೀರು ಪೂರೈಸುವ ಗರ್ಭಗುಡಿ ಬಳಿಯಿರುವ ಜಾಕ್ವೆಲ್ ರಸ್ತೆ ನದಿ ನೀರಿಂದ ಮುಳುಗಿದೆ ಇದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಚಂದ್ರನಾಯ್ಕ್ ತಿಳಿಸಿದ್ದಾರೆ.
ನದಿ ನೀರು ಇಳಿಮುಖವಾಗುವವರೆಗೂ ನೀರು ಸರಬರಾಜು ಸಮಸ್ಯೆಯಾಗಲಿದೆ. ಶುದ್ಧಿಕರಣ ಘಟಕದಿಂದ ಈಗಾಗಲೇ ಪೂರೈಕೆಯಾಗಿರುವ ನದಿ ನೀರನ್ನು ಕಾಯಿಸಿ ಆರಿಸಿ ಕುಡಿಯಲು ಉಪಯೋಗಿಸಬೇಕು ಎಂದು ಮನವಿ ಮಾಡಿದ್ದಾರೆ.ಜಾಕ್ವೆಲ್ಗೆ ಶಾಸಕರಾದ ಜಿ.ಕರುಣಾಕರರೆಡ್ಡಿ, ಶ್ರೀರಾಮುಲು, ಸೋಮಶೇಖರರೆಡ್ಡಿ ಹಾಗೂ ಅಧಿಕಾರಿಗಳು ಬೇಟಿ ನೀಡಿ ಪರಿಶೀಲಿಸಿದರು ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
