ಬೆಂಗಳೂರು
ನೆರೆಯ ಆಂಧ್ರದಿಂದ ಖರೀದಿಸಿಕೊಂಡು ಬಂದು ಚಿಕ್ಕ ಪ್ಯಾಕೆಟ್‍ಗಳಾಗಿ ಕಟ್ಟಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿ 2 ಕೆಜಿ ಗಾಂಜಾವನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬನ್ನೇರುಘಟ್ಟದ ದೇವರಚಿಕ್ಕನಹಳ್ಳಿಯ ಜಗನ್ ಆರ್(33)ಬಂಧಿತ ಆರೋಪಿಯಾಗಿದ್ದಾನೆ, ಬಂಧಿತನಿಂದ 1 ಸಾವಿರ ನಗದು ಸೇರಿ 1ಲಕ್ಷ ಮೌಲ್ಯದ 2 ಕೆ.ಜಿ ಗಾಂಜಾ, ಮೊಬೈಲ್‍ನನ್ನು ವಶಪಡಿಸಿಕೊಳ್ಳಲಾಗಿದೆ.ಹೊಂಗಸಂದ್ರದ ದೇವರಚಿಕ್ಕನಹಳ್ಳಿ ರಸ್ತೆಯ ಪ್ರಭಾವತಿ ಸ್ಕ್ವೇರ್ ಅಪಾರ್ಟ್‍ಮೆಂಟ್ ಬಳಿ ಆರೋಪಿಯು ಗಾಂಜಾ ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಆರೋಪಿಯು ಬೇರೆ ಕಡೆಯಿಂದ ಗಾಂಜಾ ಖರೀದಿಸಿಕೊಂಡು ಬಂದು ಚಿಕ್ಕ ಪ್ಯಾಕೇಟ್‍ಗಳಾಗಿ ಕಟ್ಟಿ ಐಟಿ ಉದ್ಯೋಗಿಗಳು ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ತನಿಖೆಯಲ್ಲಿ ಕಂಡುಬಂದಿದ್ದು ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.