ಅಮೇರಿಕ
ಡೊನಾಲ್ಡ್ ಟ್ರಂಪ್ ಸರ್ಕಾರ ನಿನ್ನೆ ಹೊಸ ವೀಸಾ ನಿಯಮಗಳನ್ನು ಪರಿಚಯಿಸಿದ್ದು ಇದರ ಪ್ರಕಾರ ಸರ್ಕಾರ ನಿರ್ಧಸಿದ ಕನಿಷ್ಠ ಆದಾಯಕ್ಕಿಂತ ಕಡಿಮೆ ಇರುವವರ ವೀಸಾವನ್ನು ಸರ್ಕಾರ ರದ್ದು ಮಾಡಬಹುದು ಎಂದು ತಿಳಿಸಿದೆ .
ಇನ್ನು ತಜ್ಞರು ಹೇಳುವಂತೆ ಹೊಸ ನಿಯಮದ ಪ್ರಕಾರ ವೀಸಾಗಳನ್ನು ನಿರಾಕರಿಸುವುದರಿಂದ ಕಾನೂನುಬದ್ಧವಾಗಿ ದೇಶಕ್ಕೆ ವಲಸೆ ಬಂದಿರುವ ಅರ್ಧದಷ್ಟು ಜನರ ವೀಸಾಗಳು ಕಡಿತಗೊಳ್ಳಬಹುದು ಮತ್ತು ಲಕ್ಷಾಂತರ ಜನ ಶಾಶ್ವತ ನಾಗರೀಕತ್ವಕ್ಕಾಗಿ ಸಲ್ಲಿಸಿರುವ ಅರ್ಜಿಗಳನ್ನು ಪರಿಗಣಿಸದೆಯೂ ಇರಬಹುದು ಎಂದು ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಸರ್ಕಾರದ ನೂತನ ವಲಸೆ ನೀತಿಯೂ ಅಕ್ಟೋಬರ್ 15 ರಿಂದ ಜಾರಿಗೆ ಬರಲಿದೆ ಎಂದು ಶ್ವೇತ ಭವನದ ವಕ್ತಾರರು ತಿಳಿಸಿದ್ದಾರೆ. ಇನ್ನು ಸರ್ಕಾರ ಘೋಷಿಸಿರುವ ಆದಾಯ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾದರೆ ಅಥವಾ ಸಾರ್ವಜನಿಕ ನೆರವು ಪಡೆದರೆ ತಾತ್ಕಾಲಿಕ ಅಥವಾ ಶಾಶ್ವತ ವೀಸಾಗಳಿಗಾಗಿ ಅರ್ಜಿದಾರರನ್ನು ತಿರಸ್ಕರಿಸಲಾಗುವುದು ಎಂದಿದ್ದಾರೆ.
ಈ ನಿಯಮವು ರಿಪಬ್ಲಿಕನ್ ಟ್ರಂಪ್ ಕಾನೂನು ಮತ್ತು ಅಕ್ರಮ ವಲಸೆಯನ್ನು ನಿಗ್ರಹಿಸುವ ಪ್ರಯತ್ನಗಳ ಒಂದು ಭಾಗವಾಗಿದೆ, ನಿಯಮ ಪ್ರಕಟವಾದ ನಂತರ, ರಾಷ್ಟ್ರೀಯ ವಲಸೆ ಕಾನೂನು ಕೇಂದ್ರ (ಎನ್ಐಎಲ್ಸಿ) ಇದು ಜಾರಿಗೆ ಬರುವುದನ್ನು ತಡೆಯಲು ಮೊಕದ್ದಮೆ ಹೂಡುವುದಾಗಿ ಹೇಳಿದೆ. ಈ ನಿಯಮವು ಜನಾಂಗೀಯ ಪ್ರೇರಿತವಾಗಿದೆ ಎಂದು ಒಂದು ಗುಂಪಿನವರು ಕಿಡಿಕಾರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








