ಜಮ್ಮು-ಕಾಶ್ಮೀರದಲ್ಲಿ ಮೊದಲ ಸ್ವಾತಂತ್ರ್ಯೋತ್ಸವ ಆಚರಣೆ!

ಶ್ರೀನಗರ: 

      ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿದ ನಂತರ ಮೊದಲ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

      ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಇಂದು ಬೆಳಗ್ಗೆ ಶ್ರೀನಗರದ  ಶೇರ್​ ಎ ಕಾಶ್ಮೀರ್​ ಕ್ರೀಡಾಂಗಣದಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್​ ಮಲಿಕ್​ ಧ್ವಜಾರೋಹಣ ಮಾಡಿದರು. 

      ನಂತರ ಮಾತನಾಡಿದ ಅವರು, ರಾಜ್ಯದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಆಚರಿಸುತ್ತಿರುವ ಮೊದಲ ಸ್ವಾತಂತ್ರ್ಯ ದಿನಾಚರಣೆ ಇದಾಗಿದೆ. ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿ ಕೈಗೊಂಡ ಕ್ರಮದ ನಂತರ ರಾಜ್ಯದ ಜನತೆ ತಮ್ಮ ಅಸ್ಥಿತ್ವದ ಕುರಿತು ಚಿಂತಿಸಬೇಕಿಲ್ಲ. ಭಯೋತ್ಪಾದಕರ ನೇಮಕಾತಿಯಲ್ಲಿ ವಿಪರೀತ ಕುಸಿತ ಕಂಡಿದೆ. ಆದರೆ, ಶುಕ್ರವಾರ ಪ್ರಾರ್ಥನೆ ಸಲ್ಲಿಸಿದ ನಂತರ ಕಲ್ಲು ತೂರಾಟ ನಡೆದಿರುವ ಘಟನೆಗಳು ಕಂಡು ಬಂದಿವೆ ಎಂದು ತಿಳಿಸಿದರು.

      ರಾಜ್ಯದಲ್ಲಿ ಉಗ್ರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಸಶಸ್ತ್ರ ಪಡೆಗಳ ಸತತ ಪ್ರಯತ್ನ ಉಗ್ರರು ಸೋಲೊಪ್ಪಿಕೊಳ್ಳುವಂತೆ ಮಾಡುತ್ತಿವೆ. ಇದರಿಂದಾಗಿ ಉಗ್ರ ಸಂಘಟನೆಗಳಿಗೆ ಸೇರುವವರ ಪ್ರಮಾಣ ಮತ್ತು ಶುಕ್ರವಾರ ಪ್ರಾರ್ಥನೆಯ ನಂತರ ಕಲ್ಲು ತೂರಾಟದ ಪ್ರಕರಣಗಳು ಕಡಿಮೆಯಾಗಿವೆ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

ammu-and-kashmir-governor-satya-pal-malik-hoists-tricolour-in-first-i-day-celebration-in-j-k-after-abrogation-of-special-status

Recent Articles

spot_img

Related Stories

Share via
Copy link