ದೇಶದಲ್ಲಿ ಇಂದಿಗೂ ಅಸ್ಪೃಶ್ಯತೆ ಜೀವಂತ : ಶಿಮೂಶ

ಚಿತ್ರದುರ್ಗ :

    12ನೇ ಶತಮಾನದಲ್ಲಿ ಸಂಸ್ಕಾರದಿಂದ ದೂರ ಇರುವವರನ್ನು ದಲಿತರು, ಶೂದ್ರರು ಎಂದು ಕರೆಯಲಾಯಿತು. ಆದರೆ ಬಸವಣ್ಣನವರು ಇದನ್ನು ಗಂಭೀರವಾಗಿ ತೆಗೆದುಕೊಂಡು ಅನುಭವ ಮಂಟಪವನ್ನು ಕಟ್ಟಿ ಎಲ್ಲ ವರ್ಗದವರಿಗೆ ಅವಕಾಶ ಕಲ್ಪಿಸಿದರು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ನುಡಿದರು.

    ಶ್ರೀಮುರುಘಾಮಠದ ವತಿಯಿಂದ ಶ್ರಾವಣಮಾಸದ ಅಂಗವಾಗಿ ಹೊಳಲ್ಕೆರೆ ತಾಲ್ಲೂಕು ಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ನಡೆದ ಕಲ್ಯಾಣ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಗಳು ಮಾತನಾಡಿದರು  ಬಸವಪ್ರಣೀತವಾದ ಕಲ್ಯಾಣದರ್ಶನ ಮೇಲು-ಕೀಳು ಭಾವನೆಯನ್ನು ತೊಡೆದು ಹಾಕುತ್ತದೆ. ಅಸ್ಪøಶ್ಯತೆ ಅಮಂಗಲಕರವಾದುದು. ಭಾರತದಲ್ಲಿ ಸ್ಪøಶ್ಯ ಅಸ್ಪøಶ್ಯ ಇಂದೂ ಇದೆ. ಬಸವಣ್ಣನವರು ಅಸ್ಪøಶ್ಯರ ಜೊತೆ ಗುರುತಿಸಿಕೊಂಡು ಉತ್ತಮ ಕುಲದ ಅಹಂಮಿಕೆಯನ್ನು ಕಳೆದರು. ಬಸವಣ್ಣನವರ ಸಮ ಸಮಾಜದ ಕಲ್ಪನೆ ಇಟ್ಟುಕೊಂಡು ಇಂದು ಇಂತಹ ಕುಗ್ರಾಮಕ್ಕೆ ಬಂದಿದ್ದೇವೆ ಎಂದರು

     ಇದು ಕಲ್ಯಾಣದರ್ಶನ. ಬಸವಣ್ಣನವರಿಗಿಂತ ಮೊದಲು ದಲಿತರು ರಸ್ತೆಯಲ್ಲಿ ಬರುವಂತಿರಲಿಲ್ಲ. ಅಸ್ಪøಶ್ಯತೆ ಎನ್ನುವ ಅಮಂಗಲವನ್ನು ಮೆಟ್ಟಿ ಹಾಕಿದವರು ಬಸವಣ್ಣನವರು. ಕೆಲವು ಕಸುಬು ಕನಿಷ್ಠ, ಶ್ರೇಷ್ಠ ಎಂಬ ಭಾವನೆ ಇತ್ತು. ಬಸವಾದಿ ಶರಣರು ಸರ್ವ ಕುಲಕಸುಬುಗಳು ಶ್ರೇಷ್ಠ ಮತ್ತು ಕಾಯಕ ಪ್ರಧಾನವಾದುದು ಎಂಬ ಮಹತ್ವವನ್ನು ನೀಡಿ ಕಸುಬುಗಳ ಮೇಲಿನ ಕೀಳರಿಮೆಯನ್ನು ಕಿತ್ತು ಹಾಕಿದರು ಎಂದರು.

        ಶ್ರೀಮಠದಲ್ಲಿ ರಾಹುಕಾಲ, ಗುಳಿಕಕಾಲ, ಯಮಗಂಡಕಾಲ ನೋಡದೆ ಸಾಮೂಹಿಕ ಮದುವೆಗಳನ್ನು ಮಾಡಲಾಗುತ್ತಿದೆ. ಎಲ್ಲರೂ ಸುಖವಾಗಿದ್ದಾರೆ. ಕಾಲದಲ್ಲಿ ಶುಭ, ಅಶುಭ ಇಲ್ಲ. ಚಂದ್ರಗ್ರಹಣದಲ್ಲಿ ವಿವಾಹ ಮಾಡಿದ್ದೇವೆ. ಶ್ರೀಮಠ ಅನೇಕ ಪ್ರಯೋಗಗಳನ್ನು ಮಾಡುತ್ತದೆ. ಕೆಲವರು ಜನರಲ್ಲಿ ಸೂತಕಗಳ ಭಯ ಹುಟ್ಟಿಸುತ್ತಾರೆ ಅಂತಹವುಗಳಿಗೆ ಯಾರೂ ಹೆದರುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

      ಅಮಂಗಲದ ನಿವಾರಣೆ ವಿಷಯಾವಲೋಕನ ಮಾಡಿದ ಕವಿ ಎನ್.ರವಿಮಾಳೇನಹಳ್ಳಿ, ಮಾನವ ಅತ್ಯಂತ ಬುದ್ಧಿವಂತ. ಮಂಗಲ, ಅಮಂಗಲಗಳನ್ನು ಅವನೇ ಮಾಡಿಕೊಂಡಿದ್ದಾನೆ. ವಾರ, ನಕ್ಷತ್ರ, ಪಂಚಾಂಗ ಇವು ಹುಟ್ಟಿದ್ದು ಇತ್ತೀಚೆಗೆ. ಕೆಲವೊಂದು ವಿಚಾರಗಳಿಗೆ ಜ್ಯೋತಿಷಿಗಳು ಪಂಚಾಂಗ ಸೃಷ್ಟಿ ಮಾಡಿಕೊಂಡರು. ತಿಥಿ ನಕ್ಷತ್ರಗಳನ್ನು ನಾವೇ ಮಾಡಿಕೊಂಡಿದ್ದೇವೆ. ನಾವು ಈಗ ಬದಲಾಗುತ್ತಿದ್ದು, ಮೊದಲು ಮಾನಸಿಕವಾಗಿ ವಿಚಾರವಂತರಾಗಬೇಕು. ವಿಜ್ಞಾನ ಇಷ್ಟೊಂದು ಬೆಳೆದಿದೆ ಮೂಢನಂಬಿಕೆಗಳಿಂದ ಹೊರಬರಬೇಕು. ಮಾನವೀಯ ಮೌಲ್ಯಗಳು ಕುಸಿಯುತ್ತಿದ್ದು, ಅಮಂಗಲವನ್ನು ನಮ್ಮ ಮನಸ್ಸಿನಿಂದ ತೆಗೆದು ಹಾಕಬೇಕು ಎಂದರು.

    ಕುಂಬಾರ ಗುರುಪೀಠದ ಶ್ರೀ ತಿಪ್ಪೇಸ್ವಾಮಿ ಶ್ರೀಗಳು ಮಾತನಾಡಿ, ಧ್ವನಿ ಇಲ್ಲದವರಿಗೆ ಧ್ವನಿಯಾದವರು ಮುರುಘಾ ಶರಣರು. ನಾವು ಶೋಷಿತರಾದವರು ನಮಗೆ ಒಳ್ಳೆಯ ಅವಕಾಶ ಕೊಟ್ಟಿದ್ದಾರೆ. ಶೋಷಿತರು ಶಿಕ್ಷಣಕ್ಕೆ ಒತ್ತು ಕೊಡಬೇಕು. ಜಾತಿ ವ್ಯವಸ್ಥೆಯಿಂದ ಹೊರಬರಬೇಕು. ಶಿಕ್ಷಣ ನಮಗೆ ತಾಯಿ ಹಾಲು ಇದ್ದಂತೆ ಎಂದು ತಿಳಿಸಿದರು.

    ನಾಯಕನಹಟ್ಟಿ ಶ್ರೀ ತಿಪ್ಪೇರುದ್ರ ಸ್ವಾಮಿಗಳು ಮಾತನಾಡಿ, ಕಲ್ಯಾಣ ಎಂದರೆ ಒಳಿತು ಎನ್ನುವುದು. ನಮ್ಮಲ್ಲಿ ಮೌಢ್ಯ ಬಹಳಷ್ಟು ಬೇರೂರಿದೆ ಅದನ್ನು ತೆಗೆದುಹಾಕಬೇಕು ಎಂದರು.ಮುಖ್ಯಅತಿಥಿ ಹನುಮಲಿ ಷಣ್ಮುಖಪ್ಪ ಮಾತನಾಡಿ, ದೇಶದ ಬೆನ್ನೆಲುಬು ರೈತ. ರೈತನ ಬದುಕು ಹಸನಾಗಬೇಕು. ಶ್ರೀಗಳವರ ಪ್ರಯತ್ನದಿಂದ ಜಿಲ್ಲೆಗೆ ಶೀಘ್ರ ಭದ್ರಾ ನೀರು ಬರಬೇಕು ಎಂದು ತಿಳಿಸಿದರು.

     ಗ್ರಾ.ಪಂ. ಅಧ್ಯಕ್ಷ ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಣ್ಣ ಕಾಟಿಹಳ್ಳಿ, ಮುರುಗೇಶ್, ಬಸವರಾಜ್, ಶಿವಮೂರ್ತಿ ಗ್ರಾ.ಪಂ. ಸದಸ್ಯರು, ಮುತ್ತೂರು ರುದ್ರಪ್ಪ ವೇದಿಕೆಯಲ್ಲಿದ್ದರು. ಓಂಕಾರಪ್ಪ, ಹನುಮಂತಪ್ಪ, ಪೈಲ್ವಾನ್ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

.   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link