ನೆರವು ನೀಡದ ಕೇಂದ್ರದ ವಿರುದ್ದ ಕಾಂಗ್ರಸ್ ಪ್ರತಿಭಟನೆ

ಚಿತ್ರದುರ್ಗ

    ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸಂಭವಿಸಿರುವ ಪ್ರವಾಹದಿಂದ ಲಕ್ಷಾಂತರ ಮಂದಿ ಮನೆಮಠ ಕಳೆದುಕೊಂಡಿದ್ದು, ಸಾವಿರಾರು ಕೋಟಿ ರೂಪಾಯಿಗಳ ಹಾನಿಯಾಗಿದೆ. ಸಂತ್ರಸ್ಥರಿಗೆ ಪರಿಹಾರ ಮತ್ತು ಪುನರ್ವಸತಿಗೆ ನಯಾ ಪೈಸೆಯೂ ಪರಿಹಾರ ಘೋಷಣೆ ಮಾಡದಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು

    ಜಿಲ್ಲಾಧಿಕಾರಿ ಕಚೇರಿ ವೃತ್ತದ ಬಳಿ ಜಮಾಯಿಸಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿದರು. ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕವನ್ನು ನಿರ್ಲಕ್ಷಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು

    ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಧುಪಾಲೇಗೌಡ ಹಾಗೂ ಚಿತ್ರದುರ್ಗ ವಿಧಾನಸಭೆ ಅಧ್ಯಕ್ಷರಾದ ಎಂ.ಡಿ.ಹಸನ್ ತಾಹೀರ್ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ನೆರೆ ಸಂತ್ರಸ್ತರ ಪರಿಹಾರ ನಿಧಿಗಾಗಿ ಅನುದಾನ ನೀಡದೇ ಕರ್ನಾಟಕವನ್ನು ನಿರ್ಲಕ್ಷಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದರು

    ಕೇಂದ್ರ ಸಚಿವರಾದ ಅಮಿತ್‍ಶಾ ಹಾಗೂ ನಿರ್ಮಲಾ ಸೀತಾರಾಮನ್ ರವರು ಕರ್ನಾಟಕಕ್ಕೆ ಭೇಟಿ ನೀಡಿ ಕರ್ನಾಟಕದ ನೆರೆ ಸಂತ್ರಸ್ತರ ಪರಿಸ್ಥಿತಿಯನ್ನು ವೀಕ್ಷಿಸಿ ಕೇಂದ್ರಕ್ಕೆ ವರದಿಯನ್ನು ನೀಡಿದ್ದರೂ ಸಹ ಇದುವರೆಗೂ ಪರಿಹಾರವನ್ನು ನೀಡಿರುವುದಿಲ್ಲ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಸ್ಥಿತ್ವಕ್ಕೆ ಬಂದಿದ್ದು, ಬಿಜೆಪಿಯವರು ಕುದುರೆ ವ್ಯಾಪಾರ ಮಾಡುವ ಮೂಲಕ ಹಿಂಬಾಗಿಲಿನ ಮೂಲಕ ಅಧಿಕಾರಕ್ಕೇರುವ ಆತುರವನ್ನು ನೆರೆ ಸಂತ್ರಸ್ಥರಿಗೆ ಕೇಂದ್ರದಿಂದ ಅನುದಾನವನ್ನು ತರುವಲ್ಲಿ ಆತುರ ತೋರುತ್ತಿಲ್ಲ ಎಂದು ದೂರಿದರು.

    ಒಡಿಸ್ಸಾ, ಚೆನ್ನೈ ಹಾಗೂ ಕೇರಳ ನೆರೆ ಸಂತ್ರಸ್ಥರಿಗೆ ಸ್ವತಃ ಪ್ರಧಾನಿಯಾದ ಮೋದಿಯವರು ಆಯಾ ರಾಜ್ಯಗಳಿಗೆ ಭೇಟಿ ನೀಡಿ ತಕ್ಷಣವೇ ಪರಿಹಾರ ರೂಪದಲ್ಲಿ ಅನುದಾನವನ್ನು ನೀಡಿದರು. ಆದರೇ, ಕರ್ನಾಟಕದಿಂದ 25 ಜನ ಎಂ.ಪಿ.ಗಳು ಆಯ್ಕೆಯಾಗಿದ್ದಾರೆ. ಹಾಗೂ ಕೇಂದ್ರ ಸರ್ಕಾರ ರಚನೆಯಲ್ಲಿ ಅವರದ್ದು ಮಹತ್ತರವಾದ ಪಾತ್ರವಿದೆ. ಹೀಗಿದ್ದರೂ, ಕರ್ನಾಟಕವನ್ನು ನಿರ್ಲಕ್ಷಿಸುತ್ತಿರುವುದು ನರೇಂದ್ರ ಮೋದಿಯ ಮಲತಾಯಿ ದೋರಣೆಯಾಗಿದೆ ಎಂದು ದೂರಿದರು.

    ಕರ್ನಾಟಕದಲ್ಲಿ ಬಿಜೆಪಿಯ ಮುಖ್ಯಮಂತ್ರಿಯವರೇ ಇದ್ದು, ಅವರ ಪ್ರಕಾರವೇ 44 ಸಾವಿರ ಕೋಟಿ ಪರಿಹಾರ ರೂಪದ ಅನುದಾನ ಬೇಕಾಗಿದೆ ಎಂದು ತಿಳಿಸಿದ್ದಾರೆ ಆದರೂ ಸಹ ಅದರ ಪರಿವಿಯೇ ಇಲ್ಲದ ರೀತಿಯಲ್ಲಿ ಮೋದಿಯವರು ನಡೆದುಕೊಳ್ಳು ತ್ತಿದ್ದಾರೆ. ಕೇಂದ್ರಕ್ಕೆ ಒತ್ತಡ ಹಾಕಿ ಪರಿಹಾರ ರೂಪದ ಅನುದಾನವನ್ನು ತರುವಲ್ಲಿ ವಿಫಲರಾದ ಕರ್ನಾಟಕದ 25 ಜನ ಎಂ.ಪಿಗಳು ಹಾಗೂ 103 ಶಾಸಕರಿರುವ ಬಿಜೆಪಿಯದೇ ಸರ್ಕಾರವಿರು ಮುಖ್ಯಮಂತ್ರಿಯಾದ ಯಡಿಯೂರಪ್ಪನವರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು

    ಚಿತ್ರದುರ್ಗ ವಿಧಾನಸಭಾ ಯುವ ಕಾಂಗ್ರೆಸ್ ಸಮತಿ ಅಧ್ಯಕ್ಷ, ಉಲ್ಲಾಸ್ ಉಪಾಧ್ಯಕ್ಷರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗ ಳಾದ ಆರ್.ಅಶೋಕ್ ನಾಯ್ಡು, ಮಹಮ್ಮದ್ ರಫೀ, ಪದಾಧಿಕಾರಿಗಳಾದ ಸಂದೀಪ್, ಮಧುಗೌಡ, ಶಶಿಕಿರಣ, ಏಳುಕೋಟಿ.ಎಂ, ದಾದಾಪೀರ್, ಪ್ರವೀಣ್, ಸಾಧತ್ ಬೇಗ್, ಪ್ರಣವ್, ಹಸೇನ್ ಮತ್ತು ಇತರರು ಉಪಸ್ಥಿತರಿದ್ದರು.

.   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link