ಚಳ್ಳಕೆರೆ
ತಾಲ್ಲೂಕಿನ ಸಾಣೀಕೆರೆ ಬಳಿ ರಾಷ್ಟ್ರೀಯ ಹೆದ್ದಾರಿ 150(ಎ)ನಲ್ಲಿ ಭಾನುವಾರ ಬೆಳಗಿನ ಜಾವ 1ರ ಸಮಯದಲ್ಲಿ ಕ್ರೂಸರ್ ಮತ್ತು ಇಂಡಿಕಾ ಕಾರ್‍ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನು ನಾಲ್ವರು ತೀರ್ವ ರಕ್ತಗಾಯಗಳಿಂದ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ಧಾರೆ.
ಈ ಭೀಕರ ಅಪಘಾತದಲ್ಲಿ ಕಾರು ಚಾಲಕ ರಾಯಚೂರು ಜಿಲ್ಲೆಯ ಲಿಂಗಸೂರು ತಾಲ್ಲೂಕಿನ ನರಕಲ್ಲುದಿನ್ನೆ ಗ್ರಾಮದ ಹನುಮಂತ(24) ಸ್ಥಳದಲ್ಲೇ ಮೃಪಟ್ಟಿರುತ್ತಾರೆ. ಮೃತ ಹನುಮಂತ ತನ್ನ ತಂದೆ ತಾಯಿ ಹಾಗೂ ಸಹೋದರೊಡನೆ ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು ಹೂಬರ್ ವಾಹನ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ.
ಪ್ರತಿವರ್ಷದ ಶ್ರಾವಣ ಮಾಸದಂದು ತಮ್ಮ ಗ್ರಾಮದ ದೇವರಾದ ದ್ಯಾಮಲಾಂಭ ದೇವಿ ಜಾತ್ರೆಗೆ ತನ್ನ ತಂದೆ, ಸಹೋದರ, ತಾಯಿ ಹಾಗೂ ಬಂಧುಗಳೊಂದಿಗೆ ಕಾರಿನಲ್ಲಿ ಹೋಗುವಾಗ ಎದುರಿಗೆ ಬಂದ ಕ್ರೂಸರ್ ಕಾರು ಚಾಲಕ ಇವರ ಕಾರಿನ ಬಲಭಾಗಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಐವರೂ ಗಾಯಗೊಂಡಿರುತ್ತಾರೆ.
ಅಪಘಾತವೆಸಗಿದ ಕೂಡಲೇ ಕ್ರೂಸರ್ ಚಾಲಕ ನಾಪತ್ತೆಯಾಗಿದ್ದು, ಬಳ್ಳಾರಿಯಿಂದ ಬೆಂಗಳೂರಿಗೆ ಈ ವಾಹನ ಹೋಗುತ್ತಿದ್ದರು ಎನ್ನಲಾಗಿದೆ. ಮೃತ ಹನುಮಂತÀ ಅವಿವಾಹಿತನಾಗಿದ್ದು ಇವರ ಅಣ್ಣ ಲಿಂಗಪ್ಪ(29), ತಾಯಿ ಮಹದೇವಿ (45), ಸುಜಾತ(40) ಮತ್ತು ಲಕ್ಷ್ಮಿ(12) ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಲಕ್ಷ್ಮಿ (12) ಮೃತಪಟ್ಟಿರುತ್ತಾಳೆ. ಸುಜಾತ ದಾವಣಗೆರೆ ಆಸ್ಪತ್ರೆಗೆ ದಾಖಲಾಗಿದ್ದು, ಸಾವುಬದುಕಿಗೆ ಹೋರಾಟ ನಡೆಸುತ್ತಿದ್ದಾಳೆ ಎನ್ನಲಾಗಿದೆ. ಪಿಎಸ್‍ಐ ಸೈಯದ್ ದಾದಾನೂರ್ ಆಹಮ್ಮದ್ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ಧಾರೆ. ವೃತ್ತ ನಿರೀಕ್ಷಕ ಕೆ.ಆನಂದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
