ಆರ್ಥಿಕ ಸಂಕಷ್ಟದಲ್ಲಿ ದಕ್ಷಿಣ ರೈಲ್ವೆ..!!

ಚೆನ್ನೈ:

   ಈ ಮೊದಲು ಅತ್ಯಂತ ಸುರಕ್ಷಿತ,ಸ್ವಚ್ಚ ಮತ್ತು ಪ್ರಾಮಾಣಿಕ ಸೇವೆ ಒದಗಿಸುವ ಇಲಾಖೆ ಎಂದು ಖ್ಯಾತಿ ಗಳಿಸಿದ್ದ ದಕ್ಷಿಣ ರೆಲ್ವೆ ಈಗ ಆರ್ಥಿಕ ಸಂಕಷ್ಟದಲ್ಲಿದೆ ಎಂದು ದಕ್ಷಿಣ ರೈಲ್ವೆ ಜನರಲ್ ಮ್ಯಾನೇಜರ್ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ  

   ದೂರದ ಊರುಗಳಿಗೆ ತೆರಳುವ ಟ್ರೇನ್ ಗಳಲ್ಲಿ ಹೌಸ್ ಕೀಪಿಂಗ್ ಸೇವೆ ಮಾಡುವ ಕಾರ್ಮಿಕರನ್ನು ತೆಗೆದು ಹಾಕುವ ಸಂದರ್ಭ ಎದುರಾಗಿದೆ ಎಂದು ಅವರು ಸರ್ಕಾರಕ್ಕೆ ತಿಳಿಸಿದ್ದಾರೆ.

  ಸದ್ಯ ಎದುರಾಗಿರುವ ಬಿಕ್ಕಟ್ಟಿನ ಮಧ್ಯೆ ಅವರು ರೈಲ್ವೆ ಸಚಿವಾಲಯಕ್ಕೆ ವಸ್ತು ಸ್ಥತಿಯ ವರದಿಯನ್ನು ಕಳುಹಿಸಿದ್ದಾಗಿ ತಿಳಿಸಿದ್ದಾರೆ , ಆಗಸ್ಟ್ ಅಂತ್ಯದ ವೇಳೆಗೆ ಬೇಡಿಕೆ ಇರುವ ಹಣವನ್ನು ಮಂಜೂರಾಗದೇ ಇದ್ದರೆ ಒಬಿಹೆಚ್ಎಸ್, ಕೀಟ ನಿಯಂತ್ರಣ ಮತ್ತು ಸರಬರಾಜನ್ನು ದೂರ ಪ್ರಯಾಣಿಸುವ ರೈಲುಗಳಿಂದ ಕೈಬಿಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ. 

  ಆನ್ ಬೋರ್ಡ್ ಸೇವೆಗಳನ್ನು ಹಿಂತೆಗೆದುಕೊಂಡರೆ  ಕೊಳಕು ಬೋಗಿಗಳು, ನಾರುವ ಶೌಚಾಲಯಗಳು ಮತ್ತು ಹವಾನಿಯಂತ್ರಿತ ವಿಭಾಗಗಳಲ್ಲಿ  ಸೌಲಭ್ಯ ಇಲ್ಲದಿರುವ ಬಗ್ಗೆ ಪ್ರಯಾಣಿಕರಿಂದ ಬರುವ ದೂರುಗಳನ್ನು ಎದುರಿಸಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದರೆ ಮತ್ತು ದಕ್ಷಿಣ ರೈಲ್ವೆ ಬಾಕಿ ಉಳಿಸಿಕೊಂಡಿರುವ ಬಿಲ್‌ಗಳನ್ನು ಪಾವತಿಸಲು ಹಣದ ಕೊರತೆ ಇರುವುದರಿಂದ ಗುತ್ತಿಗೆದಾರರು ಒತ್ತಡ ಹೇರುವ ತಂತ್ರ ಅನುಸರಿಸುತ್ತಿದ್ದಾರೆ ಅವರ ಬೇಡಿಕೆ ಪೂರೈಸಲು ಕನಿಷ್ಠ 130 ಕೋಟಿ ರೂಗಳ ಅವಶ್ಯಕತೆ ಇದೆ ಎಂದು ಜಿಎಂ ತಿಳಿಸಿದ್ದಾರೆ.

   ಜುಲೈ 5, 2019 ರಂದೆ ಈ ವಿಷಯವನ್ನು ಸಚಿವಾಲಯಕ್ಕೆ ಫ್ಯಾಕ್ಸ್ ಮಾಡಲಾಗಿದ್ದು ಸಚಿವಾಲಯದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಜಿಎಂ ರಾಹುಲ್ ಜೈನ್ ತಿಳಿಸಿದ್ದಾರೆ.ಇದಾದ ನಂತರದಲ್ಲಿ ಹಲವು ಬಾರಿ ಇಲಾಖೆಗೆ ಜ್ಞಾಪನಾ ಪತ್ರ ಕಳುಹಿಸಿದರೂ ಯಾವುದೇ ಪ್ರಯೋಜನವಾಗಿಲ್ಲ  ಎಂದಿದ್ದಾರೆ .

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link