ತುರುವೇಕೆರೆ
ಸೆಪ್ಟಂಬರ್ ಮೊದಲವಾರದಿಂದಲೇ ತಾಲೂಕಿನ ಎಲ್ಲಾ ಕೆರೆಗಳಿಗೂ ವಿತರಣಾ ನಾಲೆಗಳ ಮೂಲಕ ನೀರು ಹರಿಸಲಾಗುವುದೆಂದು ಶಾಸಕ ಮಸಾಲೆಜಯರಾಮ್ ತಿಳಿಸಿದರು.
ತಾಲೂಕಿನ ಮಾಯಸಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿಸೆಂಬರ್ ಅಂತ್ಯದವರೆವಿಗೂ ಹೇಮಾವತಿ ನೀರು ಹರಿದು ಬರಲಿದ್ದು, ಎರಡು ಹಂತಗಳಲ್ಲಿ ತಾಲೂಕಿನ ಎಲ್ಲಾ ಕೆರೆಕಟ್ಟೆಗಳನ್ನು ತುಂಬಿಸಲಾಗುವುದು, ಸಿ.ಎಸ್.ಪುರ ಹೋಬಳಿಯು ಡ್ರೈಲ್ಯಾಂಡ್ ಪಟ್ಟಿಯಲ್ಲಿರುವುದರಿಂದ ಮೊದಲು ಸಿ.ಎಸ್.ಪುರ ಹೋಬಳಿಯ ಎಲ್ಲಾ ಕೆರೆಗಳನ್ನು ತುಂಬಿಸಿ ನಂತರ ತಾಲೂಕಿನ ಎಲ್ಲಾ ಕೆರೆಗಳನ್ನು ಎರಡು ಹಂತಗಳಲ್ಲಿ ತುಂಬಿಸುವ ಕಾರ್ಯ ಮಾಡಲಾಗುವುದು.
ಈಗಾಗಲೆ ಸಚಿವರಾದ ಜೆ.ಸಿ.ಮಾದುಸ್ವಾಮಿಯವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳ ಸಭೆ ನಡೆದಿದ್ದು, ಈ ಸಬೆಯಲ್ಲಿ ಜಿಲ್ಲೆಯ ಸಂಸದರು ಹಾಗೂ ಶಾಸಕರುಗಳು ಭಾಗವಹಿಸಿ ಚರ್ಚಿಸಿದ್ದೇª,É ಸಮರ್ಪಕವಾಗಿ ಜಿಲ್ಲೆಗೆ ಹಾಗೂ ತಾಲೂಕುಗಳಿಗೆ ಮೀಸಲಿರುವ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಗುರಿ ಹೊಂದಲಾಗಿದೆ, ತುರುವೇಕೆರೆಗೆ ಅಭ್ಯವಿರುವ 700ಎಂ.ಸಿ.ಎಫ್.ಟಿ.ನೀರನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳಲಾಗುವುದು. ನೀರಿನ ಹಂಚಿಕೆ ಕುರಿತು ಜಿಲ್ಲಾಧಿಕಾರಿಗಳು ವೇಳಾಪಟ್ಟಿ ನೀಡುವುದು ಮಾತ್ರ ಬಾಕಿಯಿದ್ದು, ರೈತರು ಆತಂಕಪಡುವ ಅವಶ್ಯಕತೆಯಿಲ್ಲ ಈಭಾರಿ ಸಿ.ಎಸ್.ಪುರ ಸೇರಿದಂತೆ ಎಲ್ಲಾ ಭಾಗಗಳಿಗೂ ನೀರು ಹರಿಸುವವರೆಗೂ ನಿರ್ಧಿಸುವುದಿಲ್ಲ ಎಂದರು.
ಎಕ್ಸ್ಪ್ರೆಸ್ ಕೆನಾಲ್ ಯೋಜನೆಗೆ ಕುಣಿಗಲ್ ತಾಲೂಕಿನ ಶಾಸಕರು ಹೊರತು ಪಡಿಸಿ ಜಿಲ್ಲೆಯ ಎಲ್ಲಾ ಶಾಸಕರೂ ಎಕ್ಸ್ಪ್ರೆಸ್ ಕೆನಾಲ್ ವಿರೋದಿಸಿ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆಯಲ್ಲಿದ್ದ ಎಕ್ಸ್ಪ್ರೆಸ್ ಕೆನಾಲ್ ಯೋಜನೆಯನ್ನು ರದ್ದುಪಡಿಸಿ ಒಂದು ಸಾವಿರ ಕೋಟಿ ವೆಚ್ಚದಲ್ಲಿ 70ಕಿಲೋಮೀಟರ್ ನಿಂದ 166ಕಿಲೋಮೀಟರ್ ವರೆಗೆ ನಾಲೆಯ ಅಗಲೀಕರಣ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರುಗಳಾದ ಕೊಂಡಜ್ಜಿ ವಿಶ್ವನಾಥ್, ವಿ.ಬಿ.ಸುರೇಶ್, ಕಾಂಳಂಜೀಹಳ್ಳಿ ಸೋಮಣ್ಣ, ಪಟ್ಟಣ ಪಂಚಾಯಿತಿ ಸದಸ್ಯರಾದ ಚಿದಾನಂದ್, ಅಂಜನ್ ಕುಮಾರ್, ಎ.ಪಿ.ಎಂ.ಸಿ.ಸದಸ್ಯ ಕಾಂತರಾಜ್, ಇತರರು ಇದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ