ದೆಹಲಿ :
ದೇಶದ 100 ರೈಲು ನಿಲ್ದಾಣಗಳಲ್ಲಿ ಮಣ್ಣಿನ ಲೋಟ (ಕುಲ್ಹಾಡ್)ದಲ್ಲಿ ಚಹಾ ಮತ್ತು ಕಾಫಿ ಮಾರಾಟ ಮಾಡುವುದನ್ನು ಕಡ್ಡಾಯ ಮಾಡಬೇಕು ಎಂದು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವ ನಿತಿನ್ ಗಡ್ಕರಿ ರೈಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ.
ಪ್ಲಾಸ್ಟಿಕ್ ಹಾವಳಿಯಿಂದಾಗಿ ಮಣ್ಣಿನ ಮಡಿಕೆ, ಲೋಟ ಸೇರಿದಂತೆ ಮಣ್ಣಿನ ವಸ್ತುಗಳು ಮೂಲೆ ಸೇರಿದ್ದವು. ಆದ್ರೆ ಪ್ಲಾಸ್ಟಿಕ್ ಪರಿಸರ ನಾಶಕ್ಕೆ ಕಾರಣವಾಗ್ತಿದೆ ಎಂಬುದನ್ನು ಮನಗಂಡಿರುವ ಜನರು ಪ್ಲಾಸ್ಟಿಕ್ ಬದಲು ಪರಿಸರ ಸ್ನೇಹಿ ವಸ್ತುಗಳ ಬಳಕೆ ಶುರು ಮಾಡಿದ್ದಾರೆ. ರೈಲ್ವೆ ನಿಲ್ದಾಣಗಳಲ್ಲೂ ಶೀಘ್ರವೇ ಮತ್ತೆ ಮಣ್ಣಿನ ಲೋಟಗಳು ಕಾಣಸಿಗಲಿವೆ.
ಹಾಗೆ ಮಣ್ಣಿನ ಪ್ಲೇಟ್ ಬಳಸುವಂತೆಯೂ ಗೋಯಲ್ ಸೂಚನೆ ನೀಡಿದ್ದಾರೆ. ಪ್ರಯಾಣಿಕರಿಗೆ ಮಣ್ಣಿನ ಲೋಟದಲ್ಲಿ ಟೀ ಸೇವನೆ ತಾಜಾ ಅನುಭವ ನೀಡಲಿದೆ. ಜೊತೆಗೆ ಸ್ಥಳೀಯ ಕುಂಬಾರರಿಗೆ ಬೇಡಿಕೆ ಹೆಚ್ಚಾಗಲಿದೆ.
ಇನ್ನು ಮಾಲ್ಗಳಲ್ಲೂ ಟೀ ಸ್ಟಾಲ್ಗಳಲ್ಲಿ ಮಣ್ಣಿನ ಲೋಟದಲ್ಲಿ ಟೀ ವಿತರಿಸಲು ಸೂಚಿಸಲಾಗುವುದು ಎಂದು ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಈ ಹಿಂದೆ ಲಾಲು ಪ್ರಸಾದ್ ಯಾದವ್ ರೈಲ್ವೆ ಮಂತ್ರಿಯಾಗಿದ್ದಾಗ ಸ್ಥಳೀಯ ಕುಂಬಾರರಿಗೆ ಪ್ರೋತ್ಸಾಹ ನೀಡಲು ಮಣ್ಣಿನ ಲೋಟದಲ್ಲಿ ಟೀ ವ್ಯವಸ್ಥೆ ಶುರು ಮಾಡಿದ್ದರು. ಆದ್ರೆ ಪ್ಲಾಸ್ಟಿಕ್ ಲೋಟಗಳು ಬಳಕೆಗೆ ಸುಲಭ ಎನ್ನುವ ಕಾರಣಕ್ಕೆ ಮಣ್ಣಿನ ಲೋಟಗಳು ಮೂಲೆ ಸೇರಿದ್ದವು. ಆದ್ರೀಗ ಮತ್ತೆ ಮಣ್ಣಿನ ಲೋಟದಲ್ಲಿ ಟೀ ನೀಡುವಂತೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ಸೂಚನೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ