ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಲು ಮನವಿ..!

ತುರುವೇಕೆರೆ:

    ತಾಲೂಕಿನ ಎಲ್ಲ ಕೆರೆಗಳಿಗೂ ಶೀಘ್ರವೇ ಹೇಮಾವತಿ ನೀರು ಹರಿಸಿ ಕೆರೆ ಕಟ್ಟೆಗಳನ್ನು ತುಂಬಿಸಬೇಕೆಂದು ಅಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆವತಿಯಿಂದ ತಾಲೂಕು ಕಚೇರಿ ಮುಂಬಾಗ ಸೋಮವಾರ ಪ್ರತಿಭಟನೆ ನೆಡೆಸಿದರು.

    ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು ಮಾತನಾಡಿ ತಾಲೂಕಿನಲ್ಲಿ ತೀವ್ರ ಬರಗಾದಿಂದ ತತ್ತರಿ ಸುತ್ತಿದ್ದು ಜನ ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಕಳೆದ ಹತ್ತಾರು ವರ್ಷಗಳಿಂದ ಸಕಾಲಕ್ಕೆ ಮಳೆ ಬಾರದೆ ಬಿತ್ತಿದ ಬೆಳೆಗಳು ನಾಶವಾಗಿ ರೈತರು ತೀವ್ರ ಬರಗಾಲಕ್ಕೆ ತುತ್ತಾಗಿದ್ದಾರೆ.

    ಅಂತರ್ ಜಲ್ಲಾ ಮಟ್ಟ ಕುಸಿದು 1000 ದಿಂದ 1500 ಅಡಿ ಆಳ ಬೋರ್‍ವೆಲ್ ಕೊರೆದರೂ ನೀರು ಸಿಗದೆ ತೆಂಗು ಅಡಿಕೆ ತೋಟಗಳು ಒಣಗಿ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಮಲೆನಾಡು ಬಾಗದಲ್ಲಿ ಉತ್ತಮ ಮಳೆಯಾಗಿ ಈಗಾಗಲೇ ಹೇಮಾವತಿ ಅಣೆಕಟ್ಟೆ ತುಂಭಿದ್ದು ಸಕಾಲದಲ್ಲಿ ನೀರನ್ನು ಬಳಸಿಕೊಳ್ಳದೆ ಸಮುದ್ರ ಸೇರಿದೆ. ತುಮಕೂರು ಜಿಲ್ಲೆಯ ಪಾಲಿನ 25 ಟಿಎಂ.ಸಿ ನೀರು ಹರಿಸಬೇಕಿದ್ದು ಇದುವರೆಗೂ ಸಂಪೂರ್ಣ ಬಳಕೆ ಮಾಡಿಕೊಂಡಿಲ.್ಲ ಸದ್ಯ ನಾಲೆಯಲ್ಲಿ ನೀರು ಹರಿಯುತ್ತಿದ್ದರು ಕುಡಿಯುವ ನೀರಿನ ನೆಪದಲ್ಲಿ ನೀರು ಹರಿಸುತ್ತಿಲ್ಲ ಎಂದು ಆರೋಪಿಸಿದರು.

    ತಾಲೂಕು ರೈತಸಂಘದ ಅಧ್ಯಕ್ಷ ಶ್ರೀನಿವಾಸ ಗೌಡ ಮಾತನಾಡಿ ತಾಲೂಕಿನ ಕೆರೆ ಕಟ್ಟೆಗಳಿಗೆ ನೀರು ಹರಿಸಲು ಜಿಲ್ಲಾಡಳಿತ ಮೀನ ಮೇಷ ಎಣಿಸುತ್ತಿದೆ. ದಬ್ಬೇಗಟ್ಟ ಏತ ನೀರಾವರಿ ವ್ಯಾಪ್ತಿಗೆ ಬರುವ ದೆಬ್ಬೇಘಟ್ಟ ಹಾಗೂ ಗೊಟ್ಟಿಕೆರೆ ಕೆರೆಗಳಿಗೂ ನೀರು ಹರಿಸಿ ತುಂಬಿಸಬೇಕು. ಅಧಿಕಾರಿಗಳು ಕೂಡಲೇ ತಾಲೂಕಿನ ಕೆರೆಕಟ್ಟೆಗಳಿಗೆ ಹೇಮೆ ನೀರು ಹರಿಸಬೇಕೆಂದು ಒತ್ತಾಯಿಸಿದರು.

    ತಾಲೂಕು ರೈತ ಸಂಘದ ಗೌರವಾಧ್ಯಕ್ಷ ಅಸ್ಲಾಂಪಾಷ ಮಾತನಾಡಿ ನೀರಿಗಾಗಿ ರೈತರು ಹೋರಾಟ ನೆಡೆಸಿದರೆ ಸರ್ಕಾರ ರೈತರುಗಳ ಮೇಲೆ ಕೇಸು ದಾಖಲಿಸುತ್ತಿದ್ದು ಕೂಡಲೇ ರೈತರ ಮೇಲಿನ ಎಲ್ಲ ಕೇಸ್‍ಗಳನ್ನು ವಜಾಮಾಡಬೇಕು ಎಂದು ಒತ್ತಾಯಿ ಸಿದರು.ಪ್ರತಿಭಟನಾ ಮುನ್ನಾ ಪಟ್ಟಣದ ಪ್ರವಾಸಿ ಮಂದಿರದಿಂದ ತಾಲೂಕು ಕಛೇರಿವರೆಗೂ ನೂರಾರು ರೈತರೊಂದಿಗೆ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನೆಡೆಸಿದರು. ಈ ಸಂದರ್ಬದಲ್ಲಿ ತಹಶೀಲ್ದರ್ ನಯೀಂಉನ್ನಿಸಾರವರಿಗೆ ಮನವಿ ಪತ್ರ ನೀಡಲಾಯಿತು.

    ಪ್ರತಿಭಟನೆಯಲ್ಲಿ ರಾಜ್ಯ ಉಪಾದ್ಯಕ್ಷರಾದ ರಾಮಣ್ಣ, ರಾಮಸ್ವಾಮಿ, ಮಹಿಳಾ ಜಿಲ್ಲಾ ಅಧ್ಯಕ್ಷೆ ನಾಗರತ್ನಮ್ಮ, ಪಾವಗಡ ತಾಲೂಕು ಅಧ್ಯಕ್ಷ ಪೂಜಾರಪ್ಪ, ರೈತ ಮುಖಂಡರಾದ ಚಿಕ್ಕಣ್ಣ, ರೆಹಮತ್, ಬೈರಪ್ಪ, ಶಿವಕುಮಾರ್, ಬಸವರಾಜು, ಸೋಮ ಶೇಖರ್, ಗೋವಿಂದರಾಜು, ಕುಮಾರ್, ಚಂದ್ರಯ್ಯ, ಕಿರಣ್, ಲೋಕೇಶ್, ಸುರೇಶ್ ಸೇರಿದಂತೆ ರೈತರು ಇದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap