ಆನೇಕಲ್:
ಸರ್ಜಾಪುರ ಬಳಿ ತಡರಾತ್ರಿ ಭೀಕರ ಅಪಘಾತದಲ್ಲಿ ಸಂಭವಿಸಿದ್ದು ಎರಡು ವರ್ಷದ ಮಗು ಸೇರಿ ನಾಲ್ವರು ಮೃತಪಟ್ಟಿದ್ದಾರೆ ಇಬ್ಬರ ಸ್ಥಿತಿ ಗಂಭೀರವಾಗಿದೆ. ಮೃತರನ್ನು ಉತ್ತರಪ್ರದೇಶ ಮೂಲದ ಅಂಜನಿ (35), ಧ್ರುವ(2), ನೇಹಾ(27), ಶುಭ್ರಾ(29) ಎಂದು ಗುರುತಿಸಲಾಗಿದೆ. ಸಾನ್ವಿ ಹಾಗೂ ಸಂತೋಷ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇವರೆಲ್ಲ ಕಾರಿನಲ್ಲಿ ಪ್ರಯಾಣಿಸುತ್ತಿದ್ದು ಸರ್ಜಾಪುರ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿವೈಡರ್ ಗುದ್ದಿ ದಾಟಿ ಟಿಪ್ಪರ್ಗೆ ಡಿಕ್ಕಿಯಾಗಿದೆ. ಡಿಕ್ಕಿ ಹೂಡೆದ ರಭಸಕ್ಕೆ ಕಾರು ಜಕಂಗೊಂಡಿದೆ. ಸ್ಥಳಕ್ಕೆ ಸರ್ಜಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ