ಇಸ್ಲಾಮಾಬಾದ್:
ಪಾಕಿಸ್ತಾನದ ಅಧ್ಯಕ್ಷರಿಗೆ ಸಾಮಾಜಿಕ ಜಾಲತಾಣ ಸಂಸ್ಥೆಯಾದ ಟ್ವಿಟರ್ ನೋಟೀಸ್ ನೀಡಿದೆ ಎಂದು ಪಾಕ್ ಅಧ್ಯಕ್ಷರ ಕಚೇರಿಯ ಮೂಲಗಳು ತಿಳಿಸಿವೆ .
Twitter has really gone too far in becoming mouthpiece of the Rogue Modi govt! They sent a notice to our President! In bad taste and simply ridiculous. pic.twitter.com/9jxhmVKaL9
— Shireen Mazari (@ShireenMazari1) August 26, 2019
ಪಾಕಿಸ್ತಾನದ ಅಧ್ಯಕ್ಷರು ಮಾಡಿದ್ದಾರೆ ಎನ್ನಲಾಗಿರುವ ಜಮ್ಮು ಮತ್ತು ಕಾಶ್ಮೀರ ಕುರಿತ ಪೋಸ್ಟ್ಗಳ ಬಗ್ಗೆ ಅವರಿಗೆ ಟ್ವಿಟರ್ನಿಂದ ನೋಟಿಸ್ ಬಂದಿದೆ ಎಂದು ರಾಷ್ಟ್ರಪತಿ ಭವನದ ಮಾಧ್ಯಮ ವಿಭಾಗ ತಿಳಿಸಿದೆ.ಪಾಕಿಸ್ತಾನದ ಮಾನವ ಹಕ್ಕುಗಳ ಸಚಿವ ಶಿರೀನ್ ಮಜಾರಿ ಅಧ್ಯಕ್ಷ ಅಲ್ವಿ ಸ್ವೀಕರಿಸಿದ ನೋಟೀಸ್ ನ ಸ್ಕ್ರೀನ್ಶಾಟ್ ಅನ್ನು ಪೋಸ್ಟ್ ಮಾಡಿ ಇದು ಸಾಮಾಜಿಕ ಜಾಲತಾಣಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣಕ್ಕಾಗಿ ಮುಂದಾಗಿರುವುದರ ಒಂದು ಭಾಗ ಎಂದಿದ್ದಾರೆ.ಸೋಮವಾರ, ಅಧ್ಯಕ್ಷ ಅಲ್ವಿ ಕಾಶ್ಮೀರ ವಿಶೇಷ ಸ್ಥಾನಮಾನ ಕುರಿತಂತೆ ನಡೆಯಿತ್ತಿದೆ ಎನ್ನಲಾದ ಪ್ರತಿಭಟನೆಯ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ .
ಎಲ್ಲಾ ಪಾಕಿಸ್ಥಾನಿಯರ ಸಾಮಾಜಿಕ ಜಾಲತಾಣದ ಖಾತೆಗಳನ್ನು ರದ್ದು ಮಾಡಲಾಗಿದೆ ಎಂದು ಆರೋಪಿಸಿ ಅಧಿಕಾರಿಗಳು ಟ್ವಿಟರ್ ಮತ್ತು ಫೇಸ್ಬುಕ್ ಮೇಲೆ ಆರೋಪಿಸಿದ್ದಾರೆ ಎಂದು ಡೈರೆಕ್ಟರ್ ಜನರಲ್ (ಡಿಜಿ) ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್ಪಿಆರ್) ತಿಳಿಸಿದ್ದಾರೆ.
“ಕಾಶ್ಮೀರವನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದಕ್ಕಾಗಿ ಪಾಕಿಸ್ತಾನದ ಖಾತೆಗಳನ್ನು ಅಮಾನತುಗೊಳಿಸುವುದರ ವಿರುದ್ಧ ಪಾಕಿಸ್ತಾನ ಅಧಿಕಾರಿಗಳು ಟ್ವಿಟರ್ ಮತ್ತು ಫೇಸ್ಬುಕ್ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








