‘ಜಂತಕಲ್ ಗಣಿ ಹಗರಣ’ : ಮಾಜಿ ಸಿಎಂ ಕುಮಾರಸ್ವಾಮಿ ಬಚಾವ್!!

ಬೆಂಗಳೂರು:

      ಜಂತಕಲ್ ಎಂಟರ್ ಪ್ರೈಸಸ್ ಗಣಿ ಪರವಾನಿಗೆ ನವೀಕರಣ ಪ್ರಕರಣದಿಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.

      ಜಂತಕಲ್ ಎಂಟರ್ ಪ್ರೈಸಸ್ ಗಣಿ ಪರವಾನಿಗೆ ನವೀಕರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿನೋದ್ ಘೋಯಲ್ ಹಾಗೂ ಗಗನ್ ಬಡೇರಿಯಾ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಇನ್ನು ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ ವಿನೋದ್ ಘೋಯಲ್‍ಗೆ ಭೂಮಿ ಮಂಜೂರು ಮಾಡುವಂತೆ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾಗೆ ಮೌಖಿಕವಾಗಿ ಆದೇಶಿಸಿದ್ದರು ಎನ್ನುವ ಆರೋಪವಿತ್ತು. ಇದಕ್ಕೆ ಸಂಬಂಧಪಟ್ಟಂತೆ ಎಸ್‍ಐಟಿ ಅಧಿಕಾರಿಗಳು ಗಂಗಾರಾಮ್ ಬಡೇರಿಯಾ ಬಂಧಿಸಿದಾಗ ಈ ಹೇಳಿಕೆ ನೀಡಿದ್ದರು. ಇನ್ನು ವಿನೋದ್ ಘೋಯಲ್ ಮೂಲಕ ತನ್ನ ಮಗ ಗಗನ್ ಬಡೇರಿಯಾ ಅಕೌಂಟ್‍ಗೆ ಗಂಗಾರಾಮ್ ಹಣ ಹಾಕಿಸಿಕೊಂಡಿದ್ದರು ಎಂದು ಹೇಳಿದ್ದರು ಎನ್ನಲಾಗಿದೆ.janthakal mining case ಗೆ ಚಿತ್ರದ ಫಲಿತಾಂಶ

       ಬಳಿಕ ಬಡೇರಿಯಾ ಹೇಳಿಕೆ ಆಧರಿಸಿ ಕುಮಾರಸ್ವಾಮಿ ಅವರನ್ನು ಎಸ್‍ಐಟಿ ವಿಚಾರಣೆಗೆ ಒಳಪಡಿಸಿದ್ದರು. ಇನ್ನು ವಿಚಾರಣೆ ಬಳಿಕ ಕುಮಾರಸ್ವಾಮಿ ಅವರ ಮೇಲೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ವಿನೋದ್ ಘೋಯಲ್ ಮತ್ತು ಗಗನ್ ಬಡೇರಿಯಾ (ಗಂಗಾರಾಮ್ ಐಎಎಸ್ ಅಧಿಕಾರಿ ಮಗ) ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದ ಕುಮಾರಸ್ವಾಮಿಯವರ ಹೆಸರನ್ನು ಎಸ್‍ಐಟಿ ಪ್ರಕರಣದಿಂದ ಕೈ ಬಿಟ್ಟು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link