ತುಮಕೂರು:
ಕೆಲದಿನಗಳ ಹಿಂದೆಯಷ್ಟೇ ಬಿಡುಗಡೆಯಾದ ಅಧ್ಯಯನವೊಂದರ ಪ್ರಕಾರ ದೇಶದ ಪೊಲೀಸರಲ್ಲಿ ಶೇಕಡಾ 72 ರಷ್ಟು ಅಧಿಕಾರಿಗಳು ರಾಜಕೀಯ ಒತ್ತಡಗಳಿಂದ ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸಲಾಗದೆ ಮನೋವೇದನೆ ಪಡುತ್ತದ್ದಾರೆ ಎಂದು ವರದಿ ತಿಳಿಸಿದೆ.
ಇನ್ನು ಪೊಲೀಸ್ ಇಲಾಖೆಯಲ್ಲಿ ಸಾಮಾನ್ಯವಾಗಿ ನಡೆಯುವ ದಿನಚರಿ ಎಂದರೆ ಗಸ್ತು ತಿರುಗುವುದು, ಅಪರಾಧಿ ಪತ್ತೆ ಮತ್ತು ನ್ಯಾಯಾಲಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಮುಂತಾದವುಗಳಿರುತ್ತವೆ ಆದರೆ ಸಾರ್ವಜನಿಕರಿಗೆ ನಮ್ಮನ್ನು ಕಾಯುವ ಪೊಲೀಸರ ಬಗ್ಗೆ ಗೊತ್ತಿರುವುದೇ ಇಷ್ಟು ಇದಲ್ಲದೇ ಪೊಲೀಸರೆಂದರೆ ಏನೋ ಒಂದು ತಿಳಿಯದ ಭಯ ಯಾರನ್ನಾದರು ಕೇಳಿದರೆ ನಿಮಗೆ ಪೊಲೀಸರ ಬಗ್ಗೆ ಏನ್ನೆನ್ನಿಸುತ್ತದೆ ಎಂದರೆ ಅವರನ್ನು ಕಂಡರೆ ನಮಗೆ ಭಯ ಎನ್ನುವವರು ಒಂದು ಕಡೆಯಾದರೆ ಇನ್ನು ಕೆಲವರು ಪೊಲೀಸರ ಬಗ್ಗೆ ತಾತ್ಸಾರದ ಭಾವನೆ ವ್ಯಕ್ತ ಪಡಿಸುತ್ತಾರೆ .
ಇನ್ನು ಸಾರ್ವಜನಿಕರು ತಾವು ಪೊಲೀಸ್ ಸ್ಟೇಷನ್ ಗೆ ಹೋದಾಗ ಪೊಲೀಸರು ನಮಗೆ ಬನ್ನಿ ಕುಳಿತು ಕೊಳ್ಳಿ ನನ್ನಿಂದ ಎನಾಗಬೇಕು ಎಂದು ಕೇಳಬೇಕು ಎಂದು ಆಶಿಸುತ್ತೇವೆ ,ಆದರೆ ನೈಜತೆ ಕಂಡು ಪೊಲೀಸ್ ಠಾಣೆ ಮೆಟ್ಟಿಲೇರಲು ಸಹ ಹಿಂದೇಟು ಹಾಕುತ್ತೇವೆ , ಯಾರಾದರೂ ಪೊಲೀಸರ ಆ ಭಾಷೆಯ ಹಿಂದೆ ವರುಗಳು ಅನುಭವಿಸುವ ೊತ್ತಡದ ಛಾಯೆ ಇದೆ ಎಂದು ಯಾರು ಒಂದು ಬಾರಿಯಾದರೂ ಯೋಚಿಸುವುದಿಲ್ಲ ಹಾಗೆ ಯೋಚಿಸಿದ್ದರೆ ನಾವು ಪೊಲೀಸರನ್ನು ಕೀಳಾಗಿ ನೋಡುವ ಪ್ರಮೆಯವೇ ಇರಲಿಲ್ಲ ಎಂಬುದು ಸತ್ಯ.
ಪೊಲೀಸರ ತೊಂದರೆಗಳೇನು.?
ಪೊಲೀಸರಿಗೆ ಎಲ್ಲರೂ ತಿಳಿದಿರುವಂತೆ ಅತ್ಯಧಿಕ ಸವಲತ್ತುಗಳೇನು ಇರುವುದಿಲ್ಲ ,ಅವರಿಗೆ ಸಾಮಾನ್ಯ ಸವಲತ್ತಾದ ಶೌಚಾಲಯ , ಕುಡಿಯುವ ನೀರು , ಸರಿಯಾದ ವಾರದ ರಜೆಗಳು ಇರುವುದಿಲ್ಲ.ಇನ್ನು ಹಬ್ಬಗಳ ಸಂದರ್ಭದಲ್ಲಂತೂ ಅವರಿಗಿರುವ ಒತ್ತಡ ಯಾರಿಗೂ ಇರುವುದಿಲ್ಲ ದಿನದ 24 ಗಂಟೆಯೂ ಕೆಲಸದಲ್ಲಿರಬೇಕು. ಇನ್ನು ದಿನನಿತ್ಯದ ಒಡಾಟ ಅಥವಾ ಬೇರೆ ತುರ್ತು ಕಾರ್ಯಗಳಿಗೆ ಯಾವುದೇ ರೀತಿಯ ಸರ್ಕಾರಿ ವಾಹನದ ವ್ಯವಸ್ಥೆ ಇರುವುದಿಲ್ಲ , ಇನ್ನು ಅಪರಾಧಿಗಳಿಗೆ ಮತ್ತು ರಾತ್ರಿ ಪಾಳಿ ಪೊಲೀಸರಿಗೆ ಯಾವುದೇ ರೀತಿಯ ೂಟದ ವ್ಯವಸ್ಥೆಯಾಗಲಿ ಇರುವುದಿಲ್ಲ ದಕ್ಕಾಗಿ ಪೊಲೀಸರೆ ತಮ್ಮ ಕಿಸೆಯಿಂದ ಹಣ ಖರ್ಚು ಮಾಡಬೇಕಾಗುತ್ತದೆ.
ಸುಮಾರು 46 ಪ್ರತಿಶತದಷ್ಟು ಸಿಬ್ಬಂದಿ ಸರ್ಕಾರಿ ವಾಹನಗಳು ಅಗತ್ಯವಿದ್ದಾಗ ಲಭ್ಯವಿಲ್ಲದ ಸಂದರ್ಭಗಳನ್ನು ಆಗಾಗ್ಗೆ ಅನುಭವಿಸುತ್ತಾರೆ.ಶೇಕಡಾ 50 ಕ್ಕಿಂತ ಹೆಚ್ಚು ಜನರು ತಮ್ಮದೇ ಪಾಕೆಟ್‌ಗಳಿಂದ ಲೇಖನ ಸಾಮಗ್ರಿಗಳಿಗಾಗಿ ಖರ್ಚು ಮಾಡಿರುವುದು ಕಂಡುಬಂದಿದೆ. 2007 ರಲ್ಲಿ 11.4 ಶೇಕಡದಿಂದ 2016 ರಲ್ಲಿ ಶೇ 10.2 ಕ್ಕೆ ಇಳಿದ ಪೊಲೀಸರ ಒಟ್ಟು ಮಹಿಳೆಯರ ಸಾಮರ್ಥ್ಯದಲ್ಲಿ ಈ ಅಧ್ಯಯನವು ಕಂಡುಬಂದಿದೆ.
ಪೊಲೀಸರಿಗಿರುವ ಒತ್ತಡಗಳೇನು ?
ಪೊಲೀಸರೂ ಸಹ ನಮ್ಮಂತೆಯೇ ಮನುಷ್ಯರು ಎಂಬುದನ್ನು ಎಲ್ಲರೂ ಮರೆತಂತೆ ಕಾಣುತ್ತದೆ , ಪೊಲೀಸರು ಸಾಕಷ್ಟು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಾರೆ ಅದು ಕೆಲಸ,ರಾಜಕೀಯವೋ ಅಥವಾ ಮೇಲಾಧಿಕಾರಿಗಳ ಒತ್ತಡವೂ ಸೇರಿಕೊಳ್ಳುತ್ತದೆ.ತಾವು ಹಿಡಿದ ಅಪರಾಧ ಪ್ರಕರಣಗಳ ಸೋಲು ಗೆಲುವಿನ ಒತ್ತಡ ಇನ್ನು ಮುಂತಾದ ಒತ್ತಡಗಳಿರುತ್ತವೆ.
ಇಷ್ಟೆಲ್ಲಾ ಒತ್ತಡ ಮತ್ತು ತೊಂದರೆಗಳಿದ್ದರು ಪೊಲೀಸರು ತಮ್ಮ ಕರ್ತವ್ಯದಿಂದ ಎಂದೂ ಹಿಂದೆ ಸರಿಯುವುದಿಲ್ಲ ಮತ್ತು ಇರುವ ಸೌಲಭ್ಯವನ್ನೆ ಬಳಸಿಕೊಂಡು ಯಶಸ್ವಿಯಾಗುತ್ತಾರೆ.
ಇನ್ನು ರಾಜಕಾರಣಿಗಳ ವರ್ಗಾವಣೆ ಆಟ ಮುಂತಾದ ಅಡೆತಡೆಗಳನ್ನು ಎದುರಿಸಲು ಸಜ್ಜಾಗಿರುತ್ತಾರೆ.ಇನ್ನು ಮುಂದಾರು ಸರ್ಕಾರಗಳೂ ಪೊಲೀಸರ ಅಭ್ಯದಯಕ್ಕಾಗಿ ಗಮನ ಹರಿಸಬೇಕು.ಸದ್ಯ ಬರುವ ಸರ್ಕಾರಗಳು ಪೊಲೀಸರಿಗೆ ಕೊಡುತ್ತಿರುವ ಸೌಲಭ್ಯಗಳು ಬರೀ ಕಣ್ಣೋರೆಸುವ ಯತ್ನಗಳಷ್ಟೆ .
ಕೆಲ ವರ್ಷಗಳ ಮುಂಚೆ ನೂತನವಾಗಿ ಕೆಲಸಕ್ಕೆ ಸೇರುವ ಪೊಲೀಸ್ ಪೇದೆಗಳಿಗೆ ಆರ್ಡರ್ಲಿ ಪದ್ದತಿಯಿಂದ ಆಗುತ್ತಿದ ಶೋಷಣೆಯನ್ನು ತಪ್ಪಿಸಲು ಸರ್ಕಾರ ಆ ಪದ್ದತಿಯನ್ನೆ ತೆಗೆದು ಹಾಕುವ ಮೂಲಕ ಅನಧಿಕೃತ ಜೀತ ಪದ್ದತಿಗೆ ತಿಲಾಂಜಲಿ ಇಟ್ಟಿತ್ತು.ಆದರೆ ಸರ್ಕಾರ ಇನ್ನು ಹೆಚ್ಚಿನ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಪೊಲೀಸರ ಮನವಿಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ