ಫಿಲಿಪೈನ್
ದೇಶದ ರಾಜಧಾನಿ ಮನಿಲಾದ ದಕ್ಷಿಣದ ಭಾಗದಲ್ಲಿ ತುರ್ತು ಸೇವಾ ವಿಮಾನವೊಂದು ಅಪಘಾತಕ್ಕೀಡಾಗಿ ಅದರಲ್ಲಿದ್ದ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ
ಲಘುನಾ ಪ್ರಾಂತ್ಯದ ಪನ್ಸೋಲ್ ಹಳ್ಳಿಯಲ್ಲಿರುವ ರೆಸಾರ್ಟ್ ಕಾಂಪೌಂಡ್ಗೆ ತುರ್ತು ಸೇವಾ ವಿಮಾನವು ಡಿಕ್ಕಿ ಹೊಡೆದು ಅದರಲ್ಲಿದ್ದ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು ಮೃತದೇಹ ಗಳಿಗಾಗಿ ಶೋಧ ಕಾರ್ಯ ಜಾರಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ .ಈಗಾಗಲೆ ಒಂಬತ್ತು ಶವಗಳನ್ನು ಭಗ್ನಾವಶೇಷಗಳಡಿಯಿಂದ ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ಜಾಗಕಕ್ಕೆ ಸಮೀಪದಲ್ಲಿಯೆ ಇಬ್ಬರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಕಲಿಸಲಾಗಿದೆ.
ಫಿಲಿಪೈನ್ಸ್ನ ನಾಗರಿಕ ವಿಮಾನಯಾನ ಪ್ರಾಧಿಕಾರದ ವಕ್ತಾರ ಎರಿಕ್ ಅಪೊಲೊನಿಯೊ ಹೇಳುವ ಪ್ರಕಾರ ಆ ವಿಮಾನವು ವೈದ್ಯಕೀಯ ತುರ್ತು ಸೇವಾ ವಿಮಾನವಾಗಿದೆ ಎಂದು ಅವರು ತಿಳಿಸಿದ್ದಾರೆ ಇದರ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
