ವಕೀಲನಿಂದ ಪತ್ನಿ ಕುಟುಂಬದ ಮೇಲೆ ಹಲ್ಲೆ.!

ಬೆಂಗಳೂರು

    ತನ್ನ ಮಾತು ಮೀರಿ ಗೌರಿ-ಗಣೇಶ ಹಬ್ಬಕ್ಕೆ ಪತ್ನಿ ತವರಿಗೆ ಹೋಗಿದ್ದರಿಂದ ರೊಚ್ಚಿಗೆದ್ದ ವಕೀಲರೊಬ್ಬರು ಪತ್ನಿಯ ಕುಟುಂಬದವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಎಂಇಐ ಬಡಾವಣೆಯಲ್ಲಿ ನಡೆದಿದೆ.ಹಲ್ಲೆಯಿಂದ ಗಂಭೀರ ಗಾಯಗೊಂಡಿರುವ ಎಂಇಐ ಬಡಾವಣೆಯ ಸತೀಶ್ ಹಾಗೂ ಪಾರ್ವತಮ್ಮ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

       ಹಲ್ಲೆ ವೇಳೆ ವಕೀಲ ಲೋಹಿತ್ ಕೂಡ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ವಕೀಲರಾದ ಲೋಹಿತ್ 8 ವರ್ಷದ ಹಿಂದೆ ಭಾರತಿ (ಹೆಸರು ಬದಲಿಸಲಾಗಿದೆ) ಅವರನ್ನು ಮದುವೆಯಾಗಿದ್ದು ಆರಂಭದಲ್ಲಿ ಎರಡು ಕುಟುಂಬದವರು ಅನ್ಯೊನ್ಯವಾಗಿದ್ದರೂ ಇತ್ತೀಚೆಗೆ ಜಗಳ ಉಂಟಾಗಿತ್ತು ಲೋಹಿತ್‍ಗೆ ಅತ್ತೆ ಮನೆಯವರನ್ನು ಕಂಡರೆ ಅವನಿಗೆ ಆಗುತ್ತಿರಲಿಲ್ಲ ಅದರಲ್ಲೂ ಪತ್ನಿಗೆ ಬೆಂಬಲವಾಗಿ ನಿಲ್ಲುತ್ತಾನೆ ಎಂದು ಬಾಮೈದ ಸತೀಶ್ ಮೇಲೆ ಆಕ್ರೋಶಗೊಂಡಿದ್ದರು.

      ತವರು ಮನೆಗೆ ಹೋಗುವುದು ಬೇಡ ಎಂದರು ಭಾರತಿ ಹಬ್ಬಕ್ಕೆ ಹೋಗಿದ್ದರು.ಇದರಿಂದ ಕೋಪಗೊಂಡ ಲೋಹಿತ್ ಪತ್ನಿಯ ತವರು ಮನೆಯ ಮುಂದೆ ಬಂದು ಗಲಾಟೆ ಮಾಡಿದ್ದು ಪ್ರಶ್ನೆ ಮಾಡಲು ಹೋದ ಬಾಮೈದ ಸತೀಶ್ ಮತ್ತು ಅತ್ತೆ ಪಾರ್ವತಮ್ಮಗೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.ಈ ವೇಳೆ ಲೋಹಿತ್‍ಗೂ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಈ ಸಂಬಂಧ ಬಾಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link