ಹಿಂದೂ ಮಹಾಗಣಪತಿ ಉತ್ಸವ ಎಲ್ಲರಲ್ಲೂ ಹೊಸ ಚೈತನ್ಯ ಮೂಡಿಸಲಿ : ಸಚಿವ ಬಿ.ಶ್ರೀರಾಮುಲು

ಚಳ್ಳಕೆರೆ

     ಯಾವುದೇ ಉತ್ತಮ ಕಾರ್ಯವನ್ನು ಮಾಡಲು ನಮಗೆ ದೇವರ ಕೃಪೆ ಹಾಗೂ ಆಶೀರ್ವಾದ ಬೇಕು. ಕಳೆದ ಹಲವಾರು ವರ್ಷಗಳಿಂದ ನಾಡಿನ ಜನತೆಯ ಕಲ್ಯಾಣಕ್ಕಾಗಿ ಹಿಂದೂ ಮಹಾಗಣಪತಿ ಪ್ರತಿವರ್ಷವೂ ಗಣೇಶನ ಉತ್ಸವನ್ನು ಆಚರಿಸುವ ಮೂಲಕ ಎಲ್ಲರನ್ನೂ ಒಂದೇ ಎಂಬ ಭಾವನೆಯನ್ನು ಉಂಟು ಮಾಡಿ ಎಲ್ಲರಲ್ಲೂ ಸಾಮಾಜಿಕ ಶಾಂತಿ ನೆಲೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಂತಹ ಕಾರ್ಯಕ್ರ ಮಗಳಿಗೆ ಸಾರ್ವಜನಿಕರು ಬೆನ್ನೆಲುಬಾಗಿ ನಿಲ್ಲಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

     ಅವರು, ಸೋಮವಾರ ತಡರಾತ್ರಿ ಇಲ್ಲಿನ ಬಿಇಒ ಕಚೇರಿ ಆವರಣದಲ್ಲಿ ಹಿಂದೂ ಮಹಾಗಣಪತಿ ಮಹೋತ್ಸವ ಆಶ್ರಯದಲ್ಲಿ ಹಮ್ಮಿಕೊಂಡಿರುವ ಗಣೇಶನ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ವಿಶ್ವಹಿಂದೂಪರಿಷತ್ ಮತ್ತು ಭಜರಂಗದಳ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನಿಂದ ಬಳ್ಳಾರಿಗೆ ಚಲಿಸುವ ಸಂದರ್ಭದಲ್ಲಿ ಇಲ್ಲಿನ ಕಾರ್ಯಕರ್ತರ ಮನವಿಯಂತೆ ಭೇಟಿ ನೀಡಿದ ಅವರು, ನಮ್ಮಲ್ಲಿ ಭಕ್ತಿ ಮತ್ತು ಶ್ರದ್ದೆ ಎರಡೂ ಸಮ್ಮಿಳಿತವಾಗಿದ್ದು, ದೇವರು ನಮಗೆ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಜೀವನವನ್ನು ನೀಡಲಿದ್ಧಾನೆ. ಯಾರೂ ಸಹ ಯಾವುದೇ ವಿಚಾರಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳದೆ ಉತ್ತಮ ಕಾರ್ಯದಲ್ಲಿ ಸದಾ ತೊಡಗಬೇಕೆಂದರು.

         ಹಿಂದೂ ಮಹಾಗಣಪತಿ ಸಮಿತಿ ಗೌರವಾಧ್ಯಕ್ಷ ಡಿ.ಸೋಮಶೇಖರಮಂಡಿಮಠ, ಸಚಿವರನ್ನು ಸ್ವಾಗತಿಸಿ ಮಾತನಾಡಿ, ಇದೇ ಮೊದಲ ಬಾರಿಗೆ ಚಳ್ಳಕೆರೆ ನಗರದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸೆ.8ರ ತನಕ ನಡೆಯಲಿದೆ. ಸೆ.8ರ ಸೋಮವಾರ ಬೃಹತ್ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

      ಅಧ್ಯಕ್ಷ ಬಾಳೆಮಂಡಿರಾಮದಾಸ್ ಮಾತನಾಡಿ, ಕಾರ್ಯಕ್ರಮದಲ್ಲಿ ಭಕ್ತಾಧಿಗಳಿಗೆ ಭಕ್ತಿಯ ಜೊತೆಗೆ ದೇಶದ ಸಮಸ್ಯೆಗಳ ಬಗ್ಗೆಯೂ ಸಹ ತಿಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿಶ್ವ ಹಿಂದೂ ಪರಿಷತ್‍ನ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವರಾಜು, ವಾಗ್ಮಿ ಹಾರಿಕ ಮಂಜುನಾಥ, ವಿಶ್ವಹಿಂದೂಪರಿಷತ್‍ನ ಮುನಿಯಪ್ಪ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸುವರು. ತಾಲ್ಲೂಕಿನ ಎಲ್ಲಾ ಸದ್ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಸ್ವಾಮಿಯ ಕೃಪೆಗೆ ಪಾತ್ರವಾಗುವಂತೆ ಮನವಿ ಮಾಡಿದ್ಧಾರೆ.

        ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಓಬಳೇಶ್, ಸೂರನಹಳ್ಳಿ ಶ್ರೀನಿವಾಸ್, ಸಮಿತಿ ಉಪಾಧ್ಯಕ್ಷ ಬಿ.ಎಸ್.ಶಿವಪುತ್ರಪ್ಪ, ಶೋಭಾಯಾತ್ರೆ ಉಸ್ತುವಾರಿ ಜೆ.ಪಿ.ಜಯಪಾಲಯ್ಯ, ಕಾರ್ಯದರ್ಶಿ ಮಾತೃಶ್ರೀ ಎನ್.ಮಂಜುನಾಥ, ಎಸ್.ಎಂ.ಗಂಗಾಧರ, ಕೆ.ಎಂ.ಯತೀಶ್, ಡಾ.ಎನ್.ಮಂಜುನಾಥ, ಮನೋಜ್ ಮುಂತಾದವರು ಉಪಸ್ಥಿತರಿದ್ದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap