ತೆಹ್ರಾನ್:
ಪೆಟ್ರೋಲಿಯಮ್ ಕ್ಷೇತ್ರದಲ್ಲಿ ತನ್ನದೇ ಆದ ಖ್ಯಾತಿ ಹೊಂದಿರುವ ಇರಾನ್ ತನ್ನ ಪರಮಾಣು ಸಂಶೋಧನೆ ಮತ್ತು ಅಭಿವೃದ್ಧಿಯನ್ನು ವಿಸ್ತರಿಸಲು ಸಜ್ಜಾಗಿದೆ ಇರಾನ್ ಅಧ್ಯಕ್ಷ ಹಸನ್ ರೌಹಾನಿ ತಿಳಿಸಿದ್ದಾರೆ.
2015 ರ ಪರಮಾಣು ಒಪ್ಪಂದದನ್ವಯ ದೇಶದ ಮೇಲೆ ಹೇರಲಾಗಿದ್ದ ಪರಮಾಣು ಸಂಶೋಧನಾ ನಿರ್ಬಂಧಗಳನ್ನು ಜಂಟಿ ಸಮಗ್ರ ಕ್ರಿಯಾಯೋಜನೆಯನ್ವಯ ಇರಾನ್ ತೆರವುಗೊಳಿಸಲಿದೆ ಎಂದು ಹೇಳಿದ್ದಾರೆ. ಆ ಮೂಲಕ ಪರಮಾಣು ಸಂಶೋಧನೆ ಮತ್ತು ಅಭಿವೃದ್ಧಿ ಮಾಡಲು ಇರಾನ್ ಮುಕ್ತವಾಗಲಿದೆ ಎಂದು ರೌಹಾನಿ ಹೇಳಿದ್ದಾರೆ.
ಇರಾನ್ ನ ಪರಮಾಣು ಶಕ್ತಿ ಸಂಘವು ದೇಶದ ತಾಂತ್ರಿಕ ಅಗತ್ಯಗಳು ಮತ್ತು ಸುರಕ್ಷತೆಗಳಿಗೆ ತಕ್ಕಂತೆ ಕೂಡಲೇ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಿದ್ಧವಾಗಿದೆ. ವಿಜ್ಞಾನಿಗಳು ಈ ಹಿಂದಿನ ಎಲ್ಲ ಯೋಜನೆಗಳನ್ನು ಮತ್ತು ಚಾಲ್ತಿಯಲ್ಲಿರುವ ಯೋಜನೆಗಳನ್ನು ಬದಿಗೊತ್ತಿ ಪರಮಾಣು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿಕೊಳ್ಳಬೇಕು ಎಂದು ರೌಹಾನಿ ಮೌಕಿಕವಾಗಿ ಆದೇಶಿಸಿದ್ದಾರೆ.
ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಮತ್ತು ಶಾಂತಿಯುತ ಚೌಕಟ್ಟಿನಲ್ಲಿ ನಡೆಸಲಾಗುವುದು ಎಂದು ಅವರು ವಿವರಿಸಿದ್ದಲ್ಲದೆ. ಇರಾನ್ ಮತ್ತು ಯೂರೋಪ್ ನಡುವೆ ಮಾತುಕತೆ ಪ್ರಗತಿಯಲ್ಲಿದ್ದು ಇರನ್ ನ ಪರಮಾಣು ಒಪ್ಪಂದ ಕುರಿತಂತೆ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ. ಹೀಗಾಗಿ ಇರಾನ್ ಪರಮಾಣು ಒಪ್ಪಂದದ ಮೇಲಿನ ತನ್ನ ಬದ್ಧತೆಗಾಗಿ ಮಹತ್ವ ನಿರ್ಧಾರ ಘೋಷಿಸಲಿದೆ ಎಂದು ರೌಹಾನಿ ತಿಳಿಸಿದ್ದಾರೆ.
ಇನ್ನು ಇರಾನ್ ಮೇಲೆ ನಿರ್ಬಂಧ ಹೇರಿರುವ ಅಮೆರಿಕ ಇರಾನ್ ನ ಇಂಧನ ವ್ಯಾಪಾರದ ಮೇಲೆ ನಿರ್ಬಂಧ ಹೇರುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ರೌಹಾನಿ ಈ ಸಂಚನಾತ್ಮಕ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ರೌಹಾನಿ ನಿರ್ಧಾರದ ಬಳಿಕ ವಿವಿಧ ಹೊಸ ಸೆಂಟ್ರಿಫ್ಯೂಗ್ ಮತ್ತು ಯೂರೇನಿಯಂ ಸಂಗ್ರಹ ಹೆಚ್ಚಿಸಲು ಇರಾನ್ ತೀರ್ಮಾನಿಸಿದೆ ಮತ್ತು ತನ್ನ ಪರಮಾಣು ಸಂಶೋಧನೆ ವಿಸ್ತರಿಸುವ ಎಲ್ಲಾ ನಿರೀಕ್ಷೆ ಇದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








