ಹುಳಿಯಾರು:
400 ಕೆವಿ ವಿದ್ಯುತ್ ಲೈಬ್ ಕಟ್ ಆಗಿ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಸುಗಮ ರಸ್ತೆ ಸಂಚಾರಕ್ಕೆ ತೊಂದರೆಯಾದ ಘಟನೆ ಭಾನುವಾರ ಮಧ್ಯಾಹ್ನ ಜರುಗಿದೆ.
ಶಿವಮೊಗ್ಗದಿಂದ ನೆಲಮಂಗಲಕ್ಕೆ ವಿದ್ಯುತ್ ಸರಬರಾಜು ಮಾಡುವ 400 ಕೆವಿ ಲೈನ್ ಇನ್ಸಲೇಟರ್ ಬರಸ್ಟ್ ಆಗಿ ಹುಳಿಯಾರು ಸಮೀಪದ ಲಕ್ಷ್ಮೀಪುರದ ಬಳಿ ಕಟ್ ಕಂಬದಿಂದ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಈ ವಿದ್ಯುತ್ ಲೈನ್ ದುರಸ್ತಿ ಮಾಡಲು ತಮಿಳುನಾಡಿನ ಕೆಲಸಗಾರರು ಬರಬೇಕಿದ್ದ ಪರಿಣಾಮ ದುರಸ್ತಿಯಾಗುವವರೆವಿಗೂ ಮುಂಜಾಗ್ರತೆ ಕ್ರಮವಾಗಿ ಹುಳಿಯಾರಿನಿಂದ ತಿಪಟೂರಿಗೆ ಲಕ್ಷ್ಮೀಪುರದ ಮಾರ್ಗದ ರಸ್ತೆ ಸಂಪರ್ಕವನ್ನು ಬದಲಾಯಿಸಲಾಗಿತ್ತು.
ಹಾಗಾಗಿ ಹುಳಿಯಾರಿನಿಂದ ನಂದಿಹಳ್ಳಿ, ಗೂಬೆಹಳ್ಳಿ ಮಾರ್ಗವಾಗಿ ಹರೇನಹಳ್ಳಿ ಗೇಟ್ಬಳಿ ತಿಪಟೂರು ರಸ್ತೆಗೆ ಬಂದು ಆ ಮೂಲಕ ತಿಪಟೂರಿಗೆ ಹೋಗುವ ಸಮಸ್ಯೆ ಸೃಷ್ಠಿಯಾಗಿದೆ. ಅಲ್ಲದೆ ವಿದ್ಯುತ್ ಲೈನ್ ದುರಸ್ತಿಯಾಗುವವರೆವಿಗೂ ಲಕ್ಷ್ಮೀಪುರದ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ