ಕೊರಟಗೆರೆ
ಕಾರ್ಮಿಕರ ಎರಡು ತಿಂಗಳ ವೇತನ ಮತ್ತು 1ವರ್ಷದ ವಿಶೇಷ ಭತ್ಯೆ ಜೊತೆ ಭವಿಷ್ಯ ನಿಧಿ ನೀಡದೇ ಗ್ರಾಮೀಣ ಪ್ರದೇಶದಿಂದ ಕಾರ್ಮಿಕರನ್ನು ಕರೆದುಕೊಂಡು ಗಾರ್ಮೆಂಟ್ಸ್ ವಾಹನವನ್ನು ಏಕಾಏಕಿ ಸ್ಥಗೀತಗೊಳಿಸಿದ್ದಾರೆ ಎಂದು ಆರೋಪಿಸಿ ಕಣ್ವಾ ಪ್ಯಾಷನ್ ಲಿಮಿಟೆಡ್ ಎದುರು 300ಕ್ಕೂ ಹೆಚ್ಚು ಕಾರ್ಮಿಕರು ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ.
ಕೊರಟಗೆರೆ ತಾಲೂಕು ಕಸಬಾ ಹೋಬಳಿ ಹಂಚಿಹಳ್ಳಿ ಗ್ರಾಪಂ ವ್ಯಾಪ್ತಿಯ ಬಜ್ಜನಹಳ್ಳಿ ಗ್ರಾಮದ ಕಣ್ವಾ ಪ್ಯಾಷನ್ ಲೀಮಿಟೆಡ್ನಲ್ಲಿ ಕೆಲಸ ಮಾಡುತ್ತೀರುವ ಕೂಲಿ ಕಾರ್ಮಿಕರಿಗೆ ಕಳೆದ ಎರಡು ತಿಂಗಳ ಸಂಬಳ ಮತ್ತು 1ವರ್ಷದಿಂದ ಭವಿಷ್ಯನಿಧಿ ನೀಡದೇ ಮಾಲೀಕರು ಕಾರ್ಮಿಕರ ಮೇಲೆ ದಬ್ಬಾಳಿಕೆ ನಡೆಸುತ್ತೀದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಣ್ವಾ ಗಾರ್ಮೆಂಟ್ಸ್ನ ಲೆಕ್ಕಾಧಿಕಾರಿ ರಾಘವೇಂದ್ರ ರಾಜ ಅರಸ್ ಮಾತನಾಡಿ ಕಣ್ವಾ ಕಂಪನಿ ಪ್ರಾರಂಭ ಆದಾಗ 1600 ಜನ ಕಾರ್ಮಿಕರಿದ್ದರು ಆದರೇ ಈಗ ಕೇವಲ 300ಜನ ಕಾರ್ಮಿಕರು ಮಾತ್ರ ಉಳಿದಿದ್ದಾರೆ.ಐದು ಘಟಕದಲ್ಲಿ ನಾಲ್ಕು ಮುಚ್ಚಿದ್ದಾರೆ . ಈಗ ಗಾರ್ಮೆಂಟ್ಸ್ ಮಾತ್ರ ಉಳಿದಿದೆ.ನಮ್ಮ ಸಮಸ್ಯೆ ಹೇಳಿದರೇ ವರ್ಗಾವಣೆ ಅಥವಾ ಕೆಲಸದಿಂದ ವಜಾ ಮಾಡುತ್ತಾರೆ ಎಂದು ಕಿಡಿಕಾರಿದರು.
ಕಣ್ವಾ ಗಾರ್ಮೆಂಟ್ಸ್ ಕಾರ್ಮಿಕ ಹರೀಶ್ ಮಾತನಾಡಿ ಕಾರ್ಮಿಕರು ಪ್ರತಿಭಟನೆ ಮಾಡಿದಾಗ ಮಾತ್ರ ಸಂಬಳ ಕೊಡುತ್ತಾರೆ .ನಮ್ಮ ಸಂಬಳದಿಂದ ಭವಿಷ್ಯನಿಧಿ ಹಣಕಡಿತ ಮಾಡಿ ಸರಕಾರಕ್ಕೆ ಹಣ ಕಟ್ಟದೇ ನಿರ್ಲಕ್ಷ ಮಾಡಿದ್ದಾರೆ.ಈಗ ನಮಗೆ ಎರಡು ತಿಂಗಳ ಸಂಬಳದ ಜೊತೆ 1ವರ್ಷದ ಭವಿಷ್ಯನಿಧಿ ಹಣ ಬರಬೇಕಾಗಿದೆ ಎಂದು ಆರೋಪ ಮಾಡಿದರು.
ಮಹಿಳಾ ಕಾರ್ಮಿಕರಾದ ಶಿವಮ್ಮ ಮಾತನಾಡಿ ಆರು ವರ್ಷದಿಂದ ಗಾರ್ಮೆಂಟ್ಸ್ ನಂಬಿಕೊಂಡು ಜೀವನ ಮಾಡುತ್ತಿದ್ದೇನೆ. ಈಗ ಏಕಾಏಕಿ ಗಾರ್ಮೆಂಟ್ಸ್ ವಾಹನಗಳಿಗೆ ವಿಮೆ ಮತ್ತು ದಾಖಲೆ ಇಲ್ಲವೆಂದು ಕಂಪನಿ ವಾಹನಗಳನ್ನು ನಿಲ್ಲಿಸಿದ್ದಾರೆ.ನಮ್ಮ ಸಮಸ್ಯೆ ಕೇಳುವ ಕಾರ್ಮಿಕ ಅಧಿಕಾರಿ ಮತ್ತು ಭವಿಷ್ಯನಿಧಿ ಅಧಿಕಾರಿಗಳು ಎಲ್ಲಿದ್ದಾರೆ ಎಂಬುದೇ ನಮಗೆ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯಲ್ಲಿ ಕಾರ್ಮಿಕರಾದ ರಾಕೇಶ್, ರಾಘವೇಂದ್ರ, ಈಶ್ವರ, ಸುರೇಶ್, ಲೊಕೇಶ್, ನಾಗರಾಜು, ಕೃಷ್ಣ, ಮೋಹನ, ಗೋಪಾಲ, ಅಂಬಿಕಾ, ಮಂಜುಳ, ಗಂಗಮ್ಮ, ರತ್ನಮ್ಮ, ಶಶಿ, ವೀರಕ್ಯಾತ, ಹರೀಶ, ರವಿಕುಮಾರ ಸೇರಿದಂತೆ 300ಕ್ಕೂ ಹೆಚ್ಚು ಕಾರ್ಮಿಕರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ