ಸಮಾಜದಲ್ಲಿ ಹಣಕ್ಕೆ ಹೆಚ್ಚಿದ ಪ್ರಾಮುಖ್ಯತೆ: ಶಿಮೂಶ

ಚಿತ್ರದುರ್ಗ :

    ಸಮಾಜದಲ್ಲಿ ಹಣಕ್ಕೆ ಎಲ್ಲಿಲ್ಲದ ಪ್ರಾಮುಖ್ಯತೆ. ಅದು ಇಂದು ಮಾಡಬಾರದ ಕೆಲಸಗಳನ್ನು ಮಾಡಿಸುತ್ತಿದೆ. ಹಗರಣಗಳನ್ನು ಹೆಚ್ಚಿಸುತ್ತಿದೆ. ಹಾಗೆಯೇ ಹಲವು ದುರಂತಗಳಿಗೂ ಕಾರಣವಾಗಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.ಎಸ್.ಜೆ.ಎಂ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ಏರ್ಪಡಿಸಲಾಗಿದ್ದ 29ನೇ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಶ್ರೀಗಳು ಮಾತನಾಡಿದರು

   ಹಣ ಇಂದು ಮಾಡಬಾರದ ಕೆಲಸಗಳನ್ನು ಮಾಡಿಸುತ್ತಿದೆ. ಹಗರಣಗಳನ್ನು ಹೆಚ್ಚಿಸುತ್ತಿದೆ. ಹಾಗೆಯೇ ಹಣ ಹಲವು ದುರಂತಗಳಿಗೂ ಕಾರಣವಾಗಿದೆ. ಸೇವೆ ಎಂಬುದು ನಿಜವಾದ ತೃಪ್ತಿ, ಶಾಂತಿ, ನೆಮ್ಮದಿ ನೀಡುತ್ತದೆ. ಬಸವಣ್ಣ ಮತ್ತು ಗಾಂಧೀಜಿ ಈರ್ವರು ಅಸ್ಪøಶ್ಯತೆ, ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದರು. ಸಮ ಸಮಾಜಕ್ಕಾಗಿ ಶ್ರಮಿಸಿದರು. ಮದರ್ ಥೆರಸಾ ವೈದ್ಯೆ ಆಗಿರಲಿಲ್ಲ. ಆದರೆ ಮಾನವೀಯ ಸೇವೆ ಮಾಡಿದವರಲ್ಲಿ ಅವರದು ದೊಡ್ಡ ಹೆಸರು ಎಂದರು.

   ಕೆಲವು ಕ್ಷಣಗಳ ಹಿಂದೆ ಪ್ರಮಾಣ ವಚನ ಸ್ವೀಕರಿಸುವುದಕ್ಕಿಂತ ಮುಂಚೆ ವಿದ್ಯಾರ್ಥಿಗಳಾಗಿದ್ದೀರಿ. ಈಗ ದಂತ ವೈದ್ಯರಾಗಿದ್ದೀರಿ. ಹೊಸ ಜೀವನ ಆರಂಭವಾಗಿದೆ. ನಿಮಗೆಲ್ಲ ಶುಭವಾಗಲಿ ಎಂದು ಶುಭ ಕೋರಿದರು.ಗೌರವ ಸ್ವೀಕರಿಸಿ ಮಾತನಾಡಿದ ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಉಪಕುಲಪತಿ ಡಾ. ಎಸ್. ಸಚ್ಚಿದಾನಂದ, ತಂದೆ-ತಾಯಿಗಳು ನಿಮ್ಮನ್ನು ಈ ಹಂತಕ್ಕೆ ತರಲು ಬಹಳಷ್ಟು ಪರಿಶ್ರಮಿಸಿದ್ದಾರೆ. ಅವರಿಗೆ ಸದಾ ಗೌರವ ನೀಡಿ. ಹಾಗೆಯೇ ಬೋಧಕರೂ ನಿಮಗೆ ತಮ್ಮ ಜ್ಞಾನವನ್ನು ಧಾರೆಯೆರೆದಿದ್ದಾರೆ. ಅವರು ನಿಮಗೆ ಎಂದೆಂದೂ ಮಾದರಿ ಎಂದರು

   ಚಿತ್ರದುರ್ಗದ ಈ ಕಾಲೇಜಿನಲ್ಲಿ ಹೊರರಾಜ್ಯಗಳ ಹಾಗೂ ನೇಪಾಳದ ವಿದ್ಯಾರ್ಥಿಗಳು ಬಂದು ಅಧ್ಯಯನ ಮಾಡುತ್ತಾರೆ . ಇತರೆ ಕಾಲೇಜಿಗಳಿಗೆ ಇದು ಮಾದರಿಯಾಗಿದೆ. ನಮ್ಮ ವಿಶ್ವವಿದ್ಯಾಲಯ ದೇಶದಲ್ಲಿ 2ನೇ ಸ್ಥಾನ ಪಡೆದಿದೆ. ಸಮಾಜದಲ್ಲಿ ನಿಮ್ಮ ಜವಾಬ್ದಾರಿ ಇನ್ನುಮುಂದೆ ಹೆಚ್ಚಾಗಲಿದೆ. ಈ ಅವಕಾಶವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಿ. ಕಾರಣ ಸಾಮಾಜಿಕವಾಗಿ ನೀವು ಇತರರಿಗೆ ಮಾದರಿಯಾಗಿರುತ್ತೀರಿ. ನಿಮ್ಮ ನಯ ವಿನಯ, ಜ್ಞಾನ ಹಾಗೂ ಮಾನವೀಯತೆ ಬಹು ಮಾದರಿಯಾಗಿರಲಿ ಎಂದರು.

   ವೈದ್ಯರು ಮತ್ತೊಬ್ಬರ ಮುಖದಲ್ಲಿ ನಗುವನ್ನು ತರುವಂತಹವರು. ಹಾಗಾಗಿ ನೀವೂ ಸಹ ಸದಾ ನಗು ಮೊಗದಿಂದಿರಿ. ರೋಗಿಗಳ ಮುಖದಲ್ಲೂ ನೀವು ನಗು ಮೂಡಿಸುತ್ತೀರಿ. ನೀವೆಲ್ಲರು ಪ್ರತಿಭಾನ್ವಿತರು. ಆ ಪ್ರತಿಭೆಯನ್ನು ಸದುಪಯೋಗ ಪಡಿಸಿಕೊಳ್ಳಿ. ನೀವು ಸದಾ ಧನಾತ್ಮಕ ಯೋಚನೆಗಳನ್ನು ರೂಢಿಸಿಕೊಳ್ಳಿ. ನಿಮ್ಮ ಜೀವನದಲ್ಲಿ ಅಮೋಘವಾದದ್ದನ್ನೇ ಸಾಧಿಸುತ್ತೀರಿ. ನಿಮ್ಮ ಭವಿಷ್ಯವನ್ನು ನೀವೇ ಬರೆದುಕೊಳ್ಳುವವರಾಗಿದ್ದೀರಿ. ನಿಮ್ಮ ಈ ಪದವಿ ಪಡೆದವರಲ್ಲಿ ಹಲವರು ಐಎಎಸ್, ಐಪಿಎಸ್‍ಗಳಾಗಿಯೂ ಸಮಾಜಕ್ಕೆ ಸೇವೆ ಸಲ್ಲಿಸಿದ್ದಾರೆ. ಹಣದ ಹಿಂದೆ ಹೋಗಬೇಡಿ. ವೃತ್ತಿಬದ್ಧತೆ, ವೃತಿನೈತಿಕತೆಯನ್ನು ರೂಢಿಸಿಕೊಳ್ಳಿ. ಏನಾದರೂ ಆಗು ಮೊದಲು ಮಾನವನಾಗು ಎಂದು ಅವರು ಹೇಳಿದರು.

    ವೇದಿಕೆಯಲ್ಲಿ ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾ ನಿರ್ದೇಶಕರಾದ ಡಾ.ಈ. ಚಿತ್ರಶೇಖರ್, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಪ್ರಾಚಾರ್ಯರಾದ ಡಾ. ಗೌರಮ್ಮ, ಶ್ರೀಮತಿ ರುದ್ರಾಣಿ ಗಂಗಾಧರ್, ಶಂಕರಮೂರ್ತಿ, ಪಟೇಲ್ ಶಿವಕುಮಾರ್, ಡಾ. ರಘುನಾಥರೆಡ್ಡಿ, ಡಿ. ನಾಗರಾಜಪ್ಪ ಮುಂತಾದವರಿದ್ದರು.

    ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಕ್ರಮದ ಉದ್ಘಾಟಿಸಲಾಯಿತು. ನೇಪಾಳ ದೇಶದ ಜೊತೆಗೆ ಭಾರತದ ನಾನಾ ರಾಜ್ಯಗಳಾದ ಕೇರಳ, ಬಿಹಾರ, ತಮಿಳುನಾಡು, ಜಾರ್ಖಂಡ್ ಹಾಗೂ ನಮ್ಮ ರಾಜ್ಯದÀ ಒಟ್ಟು 45 ವಿದ್ಯಾರ್ಥಿಗಳಿಗೆ ದಂತವೆದ್ಯಕೀಯ ಪದವಿ ಪುರಸ್ಕಾರವನ್ನು ಮಾಡಲಾಯಿತು. ನಂತರ ಕಾಲೇಜಿನ ಪ್ರಾಂಶುಪಾಲರಾದ ಡಾ. ಗೌರಮ್ಮ ಪ್ರಮಾಣ ವಚನವನ್ನು ಬೋಧಿಸಿದರು. ಎಲ್ಲಾ 45 ವಿದ್ಯಾರ್ಥಿಗಳು ಪ್ರಮಾಣ ವಚನ ಸ್ವೀಕರಿಸಿದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link