ಬಿಲಿಯರ್ಡ್ಸ್: 22ನೇ ಬಾರಿ ವಿಶ್ವ ಚಾಂಪಿಯನ್ ಆದ ಪಂಕಜ್..!

ಬೆಂಗಳೂರು:

    ಭಾರತದಲ್ಲಿ ಬಿಲಿಯರ್ಡ್ಸ್ ಕ್ರೀಡೆಗೂ ಮೆರುಗು ತಂದ ಪಂಕಜ್ ಅಡ್ವಾಣಿ ಇಂದು ನಡೆದ ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ ಶಿಪ್‌ನ 150 ಅಪ್ ವಿಭಾಗದಲ್ಲಿ ನೇರ ಫೈನಲ್ ಪಂದ್ಯವನ್ನು ಗೆಲ್ಲುವ ಮೂಲಕ ದಾಖಲೆಯ 22 ನೇ ವಿಶ್ವ ಪ್ರಶಸ್ತಿಯನ್ನು ತಮ್ಮದಾಗಿಸಿ ಕೊಂಡಿದ್ದಾರೆ.

   ಪಂಕಜ್ ಅವರು 2014ರಿಂದ ಸತತವಾಗಿ ವಿಶ್ವ ಚಾಂಪಿಯನ್ ಪ್ರಶಸ್ತಿ ತಮ್ಮದಾಗಿಸಿಕೊಳ್ಳುತ್ತಾ ಬಂದಿದ್ದಾರೆ.ಬಿಲಿಯರ್ಡ್ಸ್ ನ ಶಾರ್ಟ್ ಫಾರ್ಮ್ಯಾಟ್ ನಲ್ಲಿ ಪಂಕಜ್ ಅವರಿಗಿದು ಕಳೆದ ಆರು ವರ್ಷಗಳಲ್ಲಿ ಐದನೇ ಪ್ರಶಸ್ತಿಯಾಗಿದೆ.

  ಮಯನ್ಮಾರ್ ನ ನೇ ಥ್ವೇ ಓ ಅವರ ವಿರುದ್ಧ 6-2 150(145)-4, 151(89)-66, 150(127)-50(50), 7-150(63,62), 151(50)-69(50), 150(150)-0, 133(64)-150(105), 150(74)-75(63). ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

   “ಇದು ಟಚ್ ಆಂಡ್ ಗೋ ಫಾರ್ಮ್ಯಾಟ್ ನ ಪಂದ್ಯವಾಗಿದ್ದು ಈ ನಾಲ್ಕು ವರ್ಷಗಳಲ್ಲಿ ಸತತ ಚಾಂಪಿಯನ್ ಪಟ್ಟ ಹಾಗೆಯೇ ಕಳೆದ ಆರು ವರ್ಷಗಳಲ್ಲಿ  ಐದು ಪಂದ್ಯಗಳನ್ನು ಗೆಲ್ಲುವ ಸಾಧನೆ ನಿಜಕ್ಕೂ ವಿಶೇಷವಾಗಿದೆ” ಎಂದಿದ್ದಾರೆ.

    ಬೆಂಗಳೂರು ಮೂಲದ ಪಂಕಜ್ ಅಡ್ವಾಣಿ  2003 ರಿಂದ ಚಾಂಪಿಯನ್ ಪಟ್ಟ ಅಲಂಕರಿಸುತ್ತಾ ಪ್ರಶಸ್ತಿ ಗೆಲ್ಲುವ ಭರವಸೆಯ ಆಟಗಾರನಾಗಿ ಮುಂದುವರಿಯುತ್ತಿದ್ದು. ಇದೀಗ ಅಚ್ಚರಿಯೆಂಬಂತೆ  22 ನೇ ವಿಶ್ವ ಪ್ರಶಸ್ತಿಯನ್ನು ಗೆದ್ದು ಪಂಕಜ್ “ನಾನು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವಾಗಲೆಲ್ಲಾ ಒಂದು ವಿಷಯ ಸ್ಪಷ್ಟವಾಗುತ್ತದೆ -ಗೆಲುವು ನನ್ನ ಸ್ಪೂರ್ತಿಯನ್ನು ಕಸಿಯುವುದಿಲ್ಲ. ಗೆಲುವು ನನ್ನ ಹಸಿವು, ಆ ಬೆಂಕಿ ಎಂದಿಗೂ ಆರುವುದಿಲ್ಲ.” ಎಂದು ಪ್ರತಿಕ್ರಯಿಸಿದ್ದಾರೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link