ತಿಪಟೂರು :
ನಗರದಲ್ಲಿ ಮಾರ್ಚ್ 01 ರಿಂದ ಕಳಪೆ ಗುಣಮಟ್ಟದ ಪ್ಲಾಸ್ಟಿಕ್ ಮತ್ತು ಫ್ಲೆಕ್ಸ್‍ಗಳನ್ನು ಬ್ಯಾನ್‍ಮಾಡಿದ್ದು ಮೊದಮೊದಲು ಫ್ಲೆಕ್ಸ್‍ಹಾಕಲು ಅನುಮತಿ ನೀಡದೆ ಸಂಪೂರ್ಣವಾಗಿ ಒಂದು ತಿಂಗಳು ಕಟ್ಟುನಿಟ್ಟಾಗಿ ಪಾಲಿಸಿದ ನಗರಸಭೆಯ ಸಿಬ್ಬಂದಿ ಏಕೋ ಏನೋ ಈಗ ಸ್ವಲ್ಪಸ್ವಲ್ಪ ಸಡಿಲಗೊಳಿಸಿದಂತೆ ಕಾಣುತ್ತಿದ್ದು ನಗರದ ಚಲನಚಿತ್ರಮಂದಿರಗಳ ಮುಂದೆ, ಸರ್ಕಲ್‍ಗಳಲ್ಲಿ, ಜನಸೇರುವ ಆಯಕಟ್ಟಿನ ಸ್ಥಳಗಳಲ್ಲಿ ಫ್ಲೆಕ್ಸ್‍ಗಳ ಹಾವಳಿ ನಿಧಾನವಾಗಿ ಹೆಚ್ಚತೊಡಗಿದೆ.
ಕಾಟನ್ ಫ್ಲೆಕ್ಸ್‍ಗೆ ಅನುಮತಿ ಹಾಕುವುದು ಮಾತ್ರ ಪ್ಲಾಸ್ಟಿಕ್ ಫ್ಲೆಕ್ಸ್ :
ಇನ್ನು ನಗರದಲ್ಲಿ ಅನುಮತಿ ತೆಗೆದುಕೊಳ್ಳದೆ ಫ್ಲೆಕ್ಸ್ ಹಾಕುವವರೇ ಹೆಚ್ಚು ಇನ್ನು ಅನುಮತಿ ಪಡೆಯುವುದು ಪ್ಲಾಸ್ಟಿಕ್ ಫ್ಲೆಕ್ಸ್‍ಗೆ ಆದರೆ ಅವರು ಹಾಕುತ್ತಿರುವುದು ಮಾತ್ರ ಕಡಿಮೆ ಧರ್ಜೆಯ ನಿಷೇದಿತ ಪ್ಲಾಸ್ಟಿಕ್ ಇದ್ದಕ್ಕೆ ಉದಾಹರಣೆ ಎಂಬಂತೆ ಖಾಸಗಿ ಆಸ್ಪತ್ರೆಯವರು ಹಾಕಿರುವ ಒಂದು ಫ್ಲೆಕ್ಸ್‍ಗೆ ನಗರಸಭೆಯ ರಸೀದಿ ಸಂಖ್ಯೆ 43182ಟಿಪಿಆರ್‍ಒಸಿ169209 ರಲ್ಲಿ ದಿನಾಂಕ 16-09-2019ರಂದು 400 ರೂಗಳ ರಸೀತಿ ಹಾಕಿಸಿ ಕಾಟನ್ ಫ್ಲೆಕ್ಸ್‍ಗೆ ಅನುಮತಿ ನೀಡಿದ್ದಾರೆ ಇನ್ನು ಜನರ ಆರೋಗ್ಯವನ್ನು ಕಾಯಬೇಕಾದ ಆಸ್ಪತ್ರೆಯವರೇ ಇಂತಹ ಕಾನೂನನ್ನು ಉಲ್ಲಂಘಿಸದರೆ ಇನ್ನು ಏನೂ ತಿಳಿಯದ ಸಾಮಾನ್ಯ ಜನರ ಪರಿಸ್ಥಿತಿಯೇನು.
ನಗರದಲ್ಲಿ ಜಲಶಕ್ತಿ ಅಭಿಯಾನ ನಡೆಯುತ್ತಿದ್ದು ಮೊನ್ನೆತಾನೆ ಕಲ್ಪತರು ಕ್ರೀಡಾಂಗಣದಲ್ಲಿ ತಮ್ಮ ಸಿಬ್ಬಂದಿಯೊಂದಿಗೆ ಜಾಥಾನಡೆಸಿದ್ದಾರೆ ಆದರೆ ಕಳೆದ 3-4 ವಾರಗಳಿಂದ ಅಲ್ಲಿಯೇ ಬಿದ್ದಿರುವ ಕಸವು ಕೊಳೆಯುತ್ತಿದ್ದು ಅದನ್ನು ತೆಗೆಯಬೇಕೆನ್ನುವ ಪರಿಜ್ಞಾನವು ಜಾಥಾದಲ್ಲಿ ಬಾಗವಹಸಿದ್ದ ಅಧಿಕಾರಿಗಳಿಗೆ ಕಣ್ಣಿಗೆ ಬೀಳದಿರುವುದು ಸಾರ್ವಜನಿಕರಿಗೆ ತಿಳಿಯದ ವಿಷಯವಾಗಿದೆ. ಇಲ್ಲ ಇದು ಕ್ರೀಡಾಂಗಣ ಇಲ್ಲಿ ನಾವು ಕೆಲಸಮಾಡುವಂತಿಲ್ಲ, ಇಲ್ಲಿರುವ ಕಸವನ್ನು ತೆಗೆಯಬೇಡಿ ಎಂದು ಯಾರಾದರು ಅಧಿಕಾರಿಗಳು ಹೇಳಿದ್ದಾರೇನೋ ಎಂಬುದು ಸಾರ್ವಜನಿಕರಿಗೆ ಮಾತ್ರ ಅರ್ಥವಾಗುತ್ತಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ