ದಾವಣಗೆರೆ:
ಮಿತಿ ಮೀರಿದ ಬ್ರೋಕರ್‍ಗಳ ಹಾವಳಿ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳ ತಂಡ ಮಂಗಳವಾರ ಇಲ್ಲಿನ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ ಮೇಲೆ ದಾಳಿ ನಡೆಸಿ, 15ಕ್ಕೂ ಹೆಚ್ಚು ಬ್ರೋಕರ್‍ಗಳನ್ನು ಹಾಗೂ 1,76,855 ರೂ.ಗಳನ್ನು ವಶಕ್ಕೆ ಪಡೆದಿದೆ.
ನೂತನ ಐಎಂವಿ ಕಾಯ್ದೆ ಜಾರಿಗೊಂಡ ನಂತರ ನಗರದ ಆರ್‍ಟಿಓ ಕಚೇರಿಯಲ್ಲಿ ಹೊಸದಾಗಿ ವಾಹನ ಚಾಲನಾ ಪರವಾನಿಗೆ, ಎಲ್‍ಎಲ್‍ಆರ್ ಪಡೆಯಲು ಬರುವವರ ಸಂಖ್ಯೆ ಹೆಚ್ಚಾಗಿದ್ದು, ನಿಗದಿತ ದರಕ್ಕಿಂತ ದುಪ್ಪಟ್ಟು ಹಣ ವಸೂಲು ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ಪರಮೇಶ್ವರಪ್ಪ ನೇತೃತ್ವದ ತಂಡ ದಾಳಿ ನಡೆಸಿತು.
ಕಚೇರಿಯಲ್ಲಿ ಎಲ್‍ಎಲ್‍ಆರ್, ಡಿಎಲ್ ಮಾಡಿಸಿಕೊಡುವುದಾಗಿ ಜನರಿಂದ ದುಪ್ಪಟ್ಟು ಹಣವನ್ನು ಪಡೆಯುತ್ತಿದ್ದ 15ಕ್ಕೂ ಹೆಚ್ಚು ಬ್ರೋಕರ್‍ಗಳನ್ನು ವಶಕ್ಕೆ ಪಡೆದ ಎಸಿಬಿ ಅಧಿಕಾರಿ, ಸಿಬ್ಬಂದಿಗಳ ತಂಡವು, ಸಾರ್ವಜನಿಕರಿಂದ ಬ್ರೋಕರ್‍ಗಳು ಪಡೆದಿದ್ದ 1.76 ಲಕ್ಷ ರೂ.ಗಳಿಗೂ ಅಧಿಕ ಹಣವನ್ನು ಜಪ್ತು ಮಾಡಿದೆ. ಆರ್‍ಟಿಓ ಕಚೇರಿ ಪ್ರವೇಶದ ಗೇಟ್, ಬಾಗಿಲುಗಳನ್ನೆಲ್ಲಾ ಬಂದ್ ಮಾಡಿಸಿ, ಬ್ರೋಕರ್ ಹಾಗೂ ಹಣವನ್ನು ವಶಕ್ಕೆ ಪಡೆದು, ವಿಚಾರಣೆ ಕೈಗೊಳ್ಳಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
