ಬೆಂಗಳೂರು
ರಾಜ್ಯದ ಹಲವು ಮಠಗಳು ಬೀದಿಗೆ ಬಂದು ರಾಜಕಾರಣದಲ್ಲಿ ಗುರುತಿಸಿಕೊಂಡಿರುವುದರಿಂದ ಪ್ರಜಾಪ್ರಭುತ್ವದ ಮೌಲ್ಯ ಹಾಳಾಗುತ್ತಿರುವ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.
ನಗರದ ಪುರಭವನ ಸಭಾಂಗಣದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ನೌಕರರ ಪತ್ತಿನ ಸಹಕಾರ ಸಂಘ ಆಯೋಜಿಸಿದ್ದ ,ಸದಸ್ಯರ ವಾರ್ಷಿಕ ಸಭೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ ಪ್ರಜಾಪ್ರಭುತ್ವದ ಮೌಲ್ಯ ಹಾಳಾಗುತ್ತಿರುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕೆಂದು ಅವರು ತಿಳಿಸಿದರು.
ಜಾತೀಯತೆ, ಭ್ರಷ್ಟಾಚಾರಗಳು ದೇಶದ ಅಭಿವೃದ್ಧಿ ಹಾಗೂ ಜನಜೀವನ ಸುಧಾರಣೆಗೆ ಅಂಟಿದ ಶಾಪವಾಗಿ ಪರಿಣಮಿಸಿವೆ ಜಾತಿಯ ಮಿತಿಯೊಳಗೆ ಹಲವಾರು ಜ ಸಿಲುಕಿದ್ದು, ಮತೀಯ, ಜಾತಿಯ ಧರ್ಮವನ್ನು ಹೇಳಿಕೊಡಬಾರದು ಎಂದ ಅವರು, ಬಜೆಟ್ ಗಳ ಪಾವಿತ್ರ ನಾಶವಾಗಿದ್ದು, ಮಕ್ಕಳಿಗೆ ಪಾಕೆಟ್ ಹಣ(ಮನಿ) ಕೊಟ್ಟಂತೆ ನೀಡಲಾಗುತ್ತಿದೆ ಎಂದು ಅವರು ವ್ಯಂಗ್ಯ ವಾಡಿದರು.
ಎಐಟಿಯುಸಿ ಅಧ್ಯಕ್ಷ ಅನಂತ ಸುಬ್ಬರಾವ್ ಮಾತನಾಡಿ, ಈ ದೇಶದಲ್ಲಿ ಲಕ್ಣಾಂಯತರ ಸಹಕಾರಿ ಸಂಘಗಳಿವೆ. ಇದರಲ್ಲಿ ಬಹುತೇಕ ಮುಚ್ಚಿವೆ. ಇದಕ್ಕೆ ಭ್ರಷ್ಟಾಚಾರವೇ ಕಾರಣವಾಗಿದ್ದು, ಇದನ್ನು ಬದಲಾವಣೆ ಮಾಡಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಂಸ್ಥೆವತಿಯಿಂದ ಚೆಕ್ ನೀಡಲಾಯಿತು. ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಸೇರಿದಂತೆ ಪ್ರಮುಖ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








