ಮಲೇಬೆನ್ನೂರು :
ಸಮೀಪದ ಗುಡ್ಡದ ತುಮ್ಮಿನಕಟ್ಟೆ ಗ್ರಾಮದಲ್ಲಿ ಶನಿವಾರ ಮಧ್ಯರಾತ್ರಿ ಕುರಿ ಕಳ್ಳತನಕ್ಕೆ ಯತ್ನಿಸಿದ ಚಮನ್ ಸಾಬ್ ಎಂಬ ವ್ಯಕ್ತಿಯ ಕೊಲೆಯಾಗಿದೆ.
ಕೊಲ್ಲಾಪುರ ಮೂಲದ ಕುರಿಗಾಯಿಗಳ ಕುರಿ ಮಂದೆಯಿಂದ ಕುರಿ ಕಳ್ಳತನಕ್ಕೆ ಯತ್ನಿಸಿದಾಗ ಕುರಿಗಾಯಿಗಳ ಕೈಗೆ ಸಿಕ್ಕಿಬಿದ್ದು ಕುರಿಗಾಯಿ ಅರ್ಜುನಪ್ಪನವರು ಬೀಸಿದ ಕೊಡಲಿ ಏಟಿಗೆ ಕುರಿಕಳ್ಳನ ಶಿರಶ್ಚೆದನವಾಗಿದೆ ಕೊಲೆ ನಡೆದ ನಂತರ ಕುರಿಗಾಯಿಯು ಪೋಲಿಸರಿಗೆ ಶರಣಾಗಿದ್ದಾನೆ.ಮೃತ ಕುರಿ ಕಳ್ಳ ಚಮನ್ ಸಾಬ್ ಹಲವಾರು ಬಾರಿ ಕುರಿಗಳನ್ನು ಕದ್ದು ಬಂಧಿತನಾಗಿದ್ದರು ಕುರಿ ಕಳ್ಳತನವನ್ನೆ ವೃತ್ತಿಯನಾಗಿಸಿದ್ದ ಎನ್ನಲಾಗಿದೆ ಮೃತ ವ್ಯಕ್ತಿಯ ಮೇಲೆ ಹಲವಾರು ಕಳ್ಳತನ ಪ್ರಕರಣಗಳು ದಾಖರಾಗಿದ್ದವು ಎಂದು ಪೋಲಿಸರು ಮಾಹಿತಿ ನೀಡಿದರು.
ಘಟನ ಸ್ಥಳಕ್ಕೆ ಪೋಲಿಸ್ ಜಿಲ್ಲಾ ವರಿಷ್ಠಾಧಿಕಾರಿ ಹನುಮಂತರಾವ್, ಡಿ.ವೈ.ಎಸ್,ಪಿ.ಮಂಜುನಾಥ. ಸಿಪಿಐ ಗುರುನಾಥ ಮತ್ತು ಪಿಎಸೈ ಕಿರಣ್ ಕುಮಾರ್ ಧಾವಿಸಿ ಘಟನೆಯ ವಿವರ ಪಡೆದರು. ಮಲೇಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಾಲಾಗಿ ಆರೋಪಿ ಕುರಿಗಾಯಿಯನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
