ಬೆಂಗಳೂರು:
ಸಾವಿರಾರು ಕೋಟಿ ಮೌಲ್ಯದ ಐಎಂಎ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆ, ಪ್ರಮುಖ ಆರೋಪಿ ಮನ್ಸೂರ್ ಖಾನ್ಗೆ ಸೇರಿದ ಆಸ್ತಿ, ನಗದು, ಚಿನ್ನಾಭರಣಗಳನ್ನು ಜಪ್ತಿ ಮಾಡಿಕೊಂಡಿದೆ.
ಕಂದಾಯ ಸಚಿವ ಆರ್. ಅಶೋಕ್ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಐಎಂಎ ಕಂಪೆನಿಗೆ ಸೇರಿದ ಬಿಬಿಎಂಪಿ ವ್ಯಾಪ್ತಿಯ ಫ್ರೆಜರ್ ಟೌನ್, ಕಾಕ್ಸ್ ಟೌನ್, ಬೇಗೂರು, ಜೆಪಿನಗರ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಲ್ಲಿರುವ ಕೃಷಿ ಜಮೀನು ಸೇರಿ 21.73 ಕೋಟಿ ರೂ. ಮೌಲ್ಯದ 17 ಆಸ್ತಿ ಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದರು. 23 ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿ 18 ಬ್ಯಾಂಕ್ ಖಾತೆ ಗಳಲ್ಲಿದ್ದ 2,85,19,335 ರೂ. ಹಾಗೂ 8,86,52,000 ರೂ. ಮೊತ್ತದ ಡಿಡಿ ಗಳನ್ನು ಜಪ್ತಿ ಮಾಡಲಾಗಿದೆ ಎಂದರು.
91.57 ಲಕ್ಷ ರೂ. ಮೌಲ್ಯದ 2 ಕೆ.ಜಿ. 324 ಗ್ರಾಂ ಚಿನ್ನ, 300 ಬೆಳ್ಳಿ ನಾಣ್ಯಗಳು, 6 ಕೆ.ಜಿ. 608 ಗ್ರಾಂ ಬೆಳ್ಳಿ ಆಭರಣ, 37 ಕೆ.ಜಿ. 189 ಗ್ರಾಂ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಸಂಸ್ಥೆಗೆ ಸೇರಿದ 59 ಲಕ್ಷ ರೂ. ಮೌಲ್ಯದ 5 ವಾಹನ ಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮನ್ಸೂರ್ 32 ಸಾವಿರಕ್ಕೂ ಹೆಚ್ಚು ಜನರಿಗೆ 500 ಕೋಟಿಗೂ ಅಧಿಕ ಹಣ ವಂಚನೆ ಮಾಡಿದ್ದಾರೆ. ಇವರ ಮಾಲೀಕತ್ವದ ಐಎಂಎ ಜ್ಯುವೆಲ್ಸ್ ಲಾಕರ್ಗಳು ಕೂಡ ಖಾಲಿಯಾಗಿವೆ. ಇದರಿಂದಾಗಿ ಪ್ರಕರಣದ ಬೆನ್ನತ್ತಿರುವ ಎಸ್ಐಟಿ ಹಾಗೂ ಇಡಿ ಅಧಿಕಾರಿಗಳಲ್ಲಿ ತೀವ್ರ ನಿರಾಸೆಯೂ ಮೂಡಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ