ಬೆಂಗಳೂರು:
ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಶೋಲೆ ವೃತ್ತದ ಬಳಿಯಿರುವ ಆಫೀಸರ್ಸ್ ಪೋಲಿಸ್ ಕ್ವಾಟ್ರಸ್ ನಲ್ಲಿರುವ ಹಲೋ ಮನೆ ಮೇಲೆ ಸುಮಾರು 20 ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದು, ಅಲೋಕ್‌ಕುಮಾರ್ ಅವರ ಮನೆಯಲ್ಲೇ ಸಿಬಿಐ ಅಧಿಕಾರಿಗಳು ಇದ್ದು, ಬೆಳಗ್ಗೆಯಿಂದ ಅಲೋಕ್ ಕುಮಾರ್ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಎನ್ನಲಾಗಿದೆ.
ಅಲೋಕ್ ಕುಮಾರ್ ಪೊಲೀಸ್ ಆಯುಕ್ತರಾಗಿದ್ದ ಸಂದರ್ಭದಲ್ಲಿ ಬಿಜೆಪಿಯ ಆಪರೇಷನ್ ಕಮಲ ಸೇರಿದಂತೆ ಇನ್ನಿತರ ವಿಚಾರಗಳಿಗಾಗಿ ರಾಜಕಾರಣಿಗಳು, ಪೊಲೀಸರು, ಮಠಾಧೀಶರು, ಖಾಸಗಿ ವ್ಯಕ್ತಿಗಳ ಫೋನ್ ಟ್ಯಾಪಿಂಗ್ ಮಾಡಲಾಗಿತ್ತು ಎಂಬ ಆರೋಪವಿದೆ. ಈ ಸಂಬಂಧ ರಾಜ್ಯ ಸರ್ಕಾರ ಸಮಗ್ರ ತನಿಖೆ ಗಾಗಿ ಸಿಬಿಐ ಗೆ ವಹಿಸಿದೆ.