ತಿಪಟೂರು :
ಸಾರ್ವಜನಿಕರಿಗೆ ಅನುಕೂಲವಾಗುವಂತೆ ಚುನಾವಣೆ ಆಯೋಗದಿಂದ ಸಾರ್ವಜನಿಕರಿಗೆ ನೂತನ ಮೊಬೈಲ್ ಆ್ಯಫ್ ಅಭಿವೃದ್ಧಿಗೊಳಿಸಿದ್ದು ಯಾವುದಾದರೂ ಬದಲಾವಣೆಯಿದ್ದರೆ ಮತದಾರರ ಮೊಬೈಲ್ನಲ್ಲಿಯೇ ಬದಲಾವಣೆ ಮಾಡಬಹುದೆಂದು ತಹಶೀಲ್ದಾರ್ ಬಿ.ಆರತಿ ತಿಳಿಸಿದರು.
ನಗರದ ತಾಲ್ಲೂಕು ಕಛೇರಿಯಲ್ಲಿ ಮತದಾರ ಪಟ್ಟಿ ಪರಿಷ್ಕರಣೆ, ಪರಿಶೀಲನೆ ಹಾಗೂ ಧೃಡೀಕರಣೆಗೆ ಸಂಬಂಧಿಸಿದಂತೆ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಾರ್ವಜನಿಕರಿಗೆ ಅನುಕೂಲವಾಗುವ ಸಲುವಾಗಿ ಚುನಾವಣೆ ಆಯೋಗವು ನೂತನ ನೂತನ ಮೊಬೈಲ್ ಆ್ಯಫ್ ತಮ್ಮ ವೋಟರ್ ಐಡಿಗಳನ್ನು ಈ ತಂತ್ರಾಂಶದ ಮುಖಾಂತರವೇ ಪರಿಶೀಲಿಸಿಕೊಳ್ಳಬಹುದಾಗಿದೆ. ಅಲ್ಲದೇ ಮನೆ ಮನೆಗಳಿಗೆ ಭೇಟಿ ನೀಡುತ್ತಿರುವ ಬಿಎಲ್ಓಗಳಿಗೂ ನೂತನ ಮೊಬೈಲ್ ಆ್ಯಫ್ ಬಿಡುಗಡೆಗೊಳಿಸಿ ಕಾರ್ಯನಿರ್ವಹಣೆಗೆ ಅನುಕೂಲವಾಗಿದೆ.
ಸಾರ್ವಜನಿಕರು ತಮ್ಮ ಸ್ಮಾರ್ಟ್ ಫೋನ್ನಲ್ಲಿ ಫ್ಲೇಸ್ಟೋರ್ನಲ್ಲಿ “ವೋಟರ್ ಹೆಲ್ಪ್ ಲೈನ್” ಎಂಬ ನೂತನ ಮೊಬೈಲ್ ಆ್ಯಫ್ ಅಭಿವೃದ್ಧಿ ಪಡಿಸಿದ್ದು ಅದರಲ್ಲಿಯೇ ಮತದಾರ ಪಟ್ಟಿ ಪರಿಷ್ಕರಣೆ, ಪರಿಶೀಲನೆ ಹಾಗೂ ಧೃಡೀಕರಣೆಗೆ ಸಂಬಂಧಿಸಿದಂತೆ ಹಲವಾರು ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ನಿಮ್ಮ ಕುಟುಂಬದ ಎಲ್ಲರ ವೋಟರ್ ಐಡಿ ಪರಿಶೀಲನೆ ಮಾಡಬಹುದಾಗಿದೆ. ಪ್ರತಿಯೊಬ್ಬರೂ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಮುಂದಿನ ದಿನಗಳಲ್ಲಿ ಕಾಲೇಜುಗಳಲ್ಲಿ ಇದರ ಬಗ್ಗೆ ಜಾಗೃತಿ-ಅರಿವನ್ನು ಮೂಡಿಸುವ ಕಾರ್ಯವನ್ನು ಮಾಡಲಾಗುವುದು. ಇದರ ಪ್ರಯೋಜನವು ಕೇವಲ 24 ದಿನಗಳ ಕಾಲಾವಕಾಶವಿದ್ದು ಅಕ್ಟೋಬರ್ 15ರ ವರಗೆ ಇದರ ಸೌಲಭ್ಯ ಪಡೆದುಕೊಳ್ಳಬಹುದು. ಇತರ ಸಮಸ್ಯೆಗಳು ಬಂದರೆ ಅಥವಾ ಹೆಚ್ಚಿನ ಮಾಹಿತಿಗಾಗಿ 1950 ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.
ಪ್ರಸ್ತುತ ಸೆಪ್ಟೆಂಬರ್ 1 ರಿಂದ 30ರವರಗೆ ಬಿಎಲ್ಓಗಳು ಮನೆ ಮನೆ ಭೇಟಿ ನೀಡುತ್ತಿದ್ದು, ಯಾವುದೇ ಸಮಸ್ಯೆಗಳಿದ್ದರೆ ಅದರ ಬದಲಾವಣೆಗೆ ಅಕ್ಟೋಬರ್ 15ರ ವರಗೆ ಅವಕಾಶವಿದ್ದು ಬಳಸಿಕೊಳ್ಳುವಂತೆ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ