ನವದೆಹಲಿ:
ದೇಶದ ಮುಂಚೂಣಿ ಕಾರು ತಯಾರಿಕಾ ಕಂಪನಿಗಳಲ್ಲಿ ಒಂದಾದ ಮಾರುತಿ ಸುಜುಕಿ ತನ್ನ ಪ್ರಸಿದ್ಧ ಕಾರು ಮಾದರಿಯಾದ ಬೊಲೆನೋ ಆರ್ ಎಸ್ ನ ಬೆಲೆಯಲ್ಲಿ 1 ಲಕ್ಷ ರೂ.ಇನ್ನಿತರೆ ಆಯ್ದ ಮಾದರಿಗಳ ಬೆಲೆಯಲ್ಲಿಯೂ ಗಣನೀಯವಾಗಿ ಇಳಿಕೆ ಮಾಡಿದೆ.
ಕಾರ್ಪೊರೇಟ್ ಜಿ ಎಸ್ ಟಿ ಕಡಿತವಾದ ಎರಡು ದಿನಗಳ ಬಳಕ ಮಾರುತಿ ಸುಜುಕಿಯ ಈ ಕ್ರಮ ಜನರಲ್ಲಿ ಹೊಸ ಉತ್ಸಾಹ ತುಂಬುತ್ತಿದೆ.
ಸದ್ಯ ದೆಹಲಿಯಲ್ಲಿ ಮಾರುತಿ ಸುಜುಕಿ ಬಾಲೆನೊ ಆರ್ಎಸ್ ಮಾದರಿಯ ಎಕ್ಸ್ ಶೋ ರೂಂ ಬೆಲೆ ರೂ. 5,58,602 , ಬೆಂಗಳೂರಿನಲ್ಲಿ 8,88,913 ರೂ ಇದೆ ಎಂದು ನೆಕ್ಸಾ ವೆಬ್‌ಸೈಟ್ ತಿಳಿಸಿದೆ. ಬಾಲೆನೊ ಆರ್ಎಸ್ ಮಾದರಿ ಕಂಪನಿಯ ನೆಕ್ಸಾ ಸರಣಿಯ ಪ್ರೀಮಿಯಂ ಮತ್ತು ಐಷಾರಾಮಿ ಕಾರುಗಳ ಭಾಗವಾಗಿದೆ ಎಂದು ಕಂಪನಿ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ