ಸಬೂಬು ಹೇಳಿ ಮರ ಕಡಿಯುವುದನ್ನು ನಿಲ್ಲಿಸಿ

ತುಮಕೂರು

  ತುಮಕೂರು ನಗರ ಹಾಗೂ ಜಿಲ್ಲಾಧ್ಯಂತ ಅರಣ್ಯ ಇಲಾಖೆಯವರು ಕೆಲವು ಸುಳ್ಳು ಸಬೂಬು ಹೇಳುತ್ತಾ ಒಳ್ಳೆಯ ಮರಗಳು ಹಾಗೂ ಬೆಲೆ ಬಾಳುವ ಮರಗಳನ್ನು ಮರದ ವ್ಯಾಪಾರಿಗಳ ಜೊತೆ ಶಾಮೀಲಾಗಿ ಕಡಿಯುತ್ತಿದ್ದಾರೆ. ಇದರ ಬಗ್ಗೆ ನಾಗರಿಕರು ಪ್ರಶ್ನಿಸಿದರೆ ಇಲಾಖಾ ಸಿಬ್ಬಂದಿಯವರಿಂದ ಸಮಂಜಸ ಉತ್ತರವಿರುವುದಿಲ್ಲ. ಈ ಬಗ್ಗೆ ನಾಗರಿಕರು ಪ್ರಶ್ನಿಸಿದರೆ ಯಾರಿಗೋ ತೊಂದರೆಯಾಗುತ್ತದೆ ಎಂಬ ಮನವಿ ಬಂದಿತ್ತು. ಆದ್ದರಿಂದ ಅನುಮತಿ ಕೊಟ್ಟಿದ್ದೇವೆ ಎಂದು ಹೇಳುತ್ತಾರೆ.

    ಉದಾರಣೆಗೆ ತುಮಕೂರು ಅಮಾನಿಕರೆಯ ಉದ್ಯಾನವನದ ಒಳಭಾಗದಲ್ಲಿ ರೈನ್ ಟ್ರೀ ಇದ್ದು, ಇದು ತುಮಕೂರು ನಗರಾಭಿವೃದ್ಧಿಯ ವಶದಲ್ಲಿರುತ್ತದೆ. ಸುಮಾರು ಎಂಟು ಒಂಬತ್ತು ತಿಂಗಳ ಹಿಂದೆ ಎರಡು ಬೃಹದಾಕಾರವಾಗಿ ಬೆಳೆದಿರುವ ಕೊಂಬೆಗಳನ್ನು ಅರಣ್ಯ ಇಲಾಖೆಯವರು ಕಡಿದಿರುತ್ತಾರೆ. ಮತ್ತೆ ಸೆ.26ರಂದು ಸುಮಾರು 12 ಗಂಟೆ ಸಮಯದಲ್ಲಿ ಮತ್ತೆ ಉಳಿಕೆ ಎರಡು ಕೊಂಬೆಗಳನ್ನು ಕಡಿಯಲು ಬಂದಿದ್ದರು. ಈ ಸಮಯದಲ್ಲಿ ಭಾರತೀಯ ಕೃಷಿಕ ಸಮಾಜದ ಮುಖಂಡರುಗಳು ಮತ್ತು ನಾಗರಿಕರು ಕೇಳಿದಾಗ ಅರಣ್ಯ ಇಲಾಖೆಯವರು ಇನ್ನೆರೆಡು ಕೊಂಬೆಗಳನ್ನು ಕಡಿಯಲು ತಿಳಿಸಿರುತ್ತಾರೆ ಎಂದು ಮರದ ಕೆಲವು ಭಾಗಗಳನ್ನು ಈಗಾಗಲೇ ಕಡಿದಿರುತ್ತಾರೆ. ಬುಡದಲ್ಲಿರುವ ಕೊಂಬೆಗಳನ್ನು ಕಡಿಯಲು ಪ್ರಯತ್ನಿಸಿದಾಗ ನಾವುಗಳು ಕಡಿಯದಂತೆ ತಾಕೀತು ಮಾಡಿದೆವು.

     ನಂತರ ಎಲ್ಲಾ ದಾಖಲೆಗಳನ್ನು ನೀಡಲು ಕೇಳಿದಾಗ ಒಂದು ವ್ಯಾನಿನಲ್ಲಿ ಮರ ಕಡಿಯುವ ಮಿಷನ್ ಮತ್ತು ಕೆಲಸಗಾರರು ಅಲ್ಲಿಂದ ಕಾಲ್ಕಿತ್ತಿದ್ದಾರೆ. (ಕೆ.ಎ. 04 ಝಡ್ 8396) ಲಾರಿಯೂ ಸಹ ಅಲ್ಲಿಂದ ಹೊರಟು ಹೋಗಿರುತ್ತದೆ. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ತಾವು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲಿಸಿ ತಪ್ಪಿತಸ್ಥ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಿ ಸಂಘಟನೆಯ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ತಪ್ಪಿತಸ್ಥರ ವಿರುದ್ಧ ಕೂಡಲೇ ಅಮಾನತು ಮಾಡಿ ಕಾನೂನು ರೀತಿ ಕ್ರಿಮಿನಲ್ ಮೊಕದ್ದಮೆ ಹೂಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಕೂಡಲೇ ಈ ಮರಗಳನ್ನು ಕಡಿಯದಂತೆ ಜಿಲ್ಲಾಧಿಕಾರಿಗಳು ಮರಗಳನ್ನು ಕಡಿಯದಂತೆ ಆದೇಶಿಸಿರುತ್ತಾರೆ.

    ಯಾವುದೇ ಮರಗಳನ್ನು ಕಡಿಯಬೇಕಾದರೆ ಸಾರ್ವಜನಿಕರು ದೂರು ಕೊಟ್ಟಾಗ ಅದರ ಬಗ್ಗೆ ಇತರೆ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಬೇಕು ಮತ್ತು ಅಭಿಪ್ರಾಯಗಳನ್ನು ಕೇಳಬೇಕು. ಅರಣ್ಯ ಇಲಾಖೆಯವರು ಸ್ಥಳ ಮಹಜರಿಗೆ ಬಂದಾಗ ಈ ಬಗ್ಗೆ ಸಾರ್ವಜನಿಕ ಪ್ರಕಟಣೆ ಹೊರಡಿಸಬೇಕು. ಸ್ಥಳ ಪರಿಶೀಲನೆ ಮಾಡುವುದಕ್ಕೆ ಬಂದಾಗ ಅಭಿಪ್ರಾಯ ಸಂಗ್ರಹಣೆ ಬಗ್ಗೆ ಮಾಹಿತಿ ಕೊಡಬೇಕು, ಸ್ಥಳ ಮಹಜರು ಆದ ನಂತರ ಎಷ್ಟು ಮರಗಳನ್ನು ಕಡಿಯಬೇಕಾಗುತ್ತದೆ, ಮಾಜರು ಆಗಿದೆ, ಅಂತಿಮ ಮಾಡುವ ದಿನಾಂಕನ್ನು ತಿಳಿಸುವುದು. ಮತ್ತು ಆಯಾ ಸ್ಥಳೀಯ ಸಂಸ್ಥೆಗಳ ನೋಟೀಸ್ ಬೋರ್ಡ್‍ನಲ್ಲಿ ಹಾಕಬೇಕು, ಜನಾಭಿಪ್ರಾಯ ಪಡೆದು ಅನುಮತಿ ಕೊಡಬೇಕು. ಮತ್ತು ಪತ್ರಿಕಾ ಪ್ರಕಟಣೆ ಹೊರಡಿಸಬೇಕೆಂದು ನಿಯಮ ಮಾಡಬೇಕು.

    ಕಾರ್ಯಕ್ರಮದಲ್ಲಿ ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷರಾದ ಕೋಡಿಹಳ್ಳಿ ಜಗದೀಶ್, ಗೌರವಾಧ್ಯಕ್ಷರಾದ ಪುಟ್ಟರಾಜು ಬ್ರಹ್ಮಸಂದ್ರ, ಉಪಾಧ್ಯಕ್ಷರುಗಳಾದ ಬಿ.ಕೆ.ರಾಜಣ್ಣ, ಪೃಥ್ವಿರಾಜ್, ನಿರ್ದೇಶಕರುಗಳಾದ ಆನಂದ್, ಬೀಡಾ ಬಾಬು ಗುಬ್ಬಿ ತಾಲ್ಲೂಕು ಗೌರವಾಧ್ಯಕ್ಷರಾದ ಚಂದ್ರಯ್ಯ ಮುಂತಾದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap