ತುಮಕೂರು:
ಜಿಲ್ಲಾ ಆಸ್ಪತ್ರೆಯ ಸಹಯೋಗದಲ್ಲಿ ಆಸ್ಪತ್ರೆಯ ಸಭಾಂಗಣದಲ್ಲಿ ಸ್ವಚ್ಛಭಾರತ್ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ.ಚಂದ್ರಿಕಾ ಸರ್ಕಾರದ ಆದೇಶದಂತೆ ಪ್ಲಾಸ್ಟಿಕ್ ಮುಕ್ತ ಮಾಡಲು ಪ್ಲಾಸ್ಟಿಕ್ಕನ್ನು ನಿಷೇಧ ಮಾಡಲಾಗಿದೆ. ದನಕರುಗಳು ಹುಲ್ಲನ್ನು ಸೇವಿಸದೇ ರಸ್ತೆಗಳಲ್ಲಿ ಬಳಸಿ ಬಿಸಲಾಡಿದ ಪ್ಲಾಸ್ಟಿಕ್ ಕಸವನ್ನು ತಿಂದು ಹಸುಗಳ ಸಂತತಿಯು ಕಡಿಮೆಯಾಗುತ್ತಿದೆ. ಕೆಲ ದಿನಗಳ ಹಿಂದೆ ಮಳೆ ಬಂದಂತಹ ಸಂದರ್ಭದಲ್ಲಿ ಮಳೆನೀರು ಚರಂಡಿ ಮತ್ತು ರಾಜ ಕಾಲುವೆಗಳಲ್ಲಿ ಸರಿಯಾಗಿ ಹೋಗದಂತೆ ರಸ್ತೆಗಳಲ್ಲಿ ನೀರು ನಿಂತು ರಸ್ತೆಗಳೆಲ್ಲ ಹಾಳಗಿವೆ. ಜೊತೆಗೆ ಪರಿಸರವು ಮಲಿನವಾಗುತ್ತದೆ. ಹಾಗಾಗಿ ಎಲ್ಲರೂ ಪ್ಲಾಸ್ಟಿಕ್ ಬಳಸಬಾರದು ಎಂದು ಮನವಿ ಮಾಡಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದ ಉಪನಿರ್ದೇಶಕಿ ಡಾ.ರಾಧ ಮಾತನಾಡಿ ಇಗ್ನೋ ಸ್ಟಡಿ ಸೆಂಟರ್ ವತಿಯಿಂದ ಸ್ವಚ್ಛಭಾರತ್ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಮಾಜದಲ್ಲಿರುವ ಗ್ರಾಮಿಣ ಪ್ರದೇಶದ ಜನರಿಗೆ ಸ್ವಚ್ಛತೆಯ ಅರಿವನ್ನು ಮೂಡಿಸಲು ಇಂತಹ ಕಾರ್ಯಕ್ರಮ ಉಪಯುಕ್ತವಾಗಿದೆ. ಆ ಹಿನ್ನಲೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮ ರೂಪಿಸಲಾಗಿದೆ.
ಅದರಲ್ಲಿಯೂ ಇಂದಿನ ದಿನಮಾನಗಳಲ್ಲಿ ಪ್ಲಾಸ್ಟಿಕ್ ಬಳಕೆಯಾಗುತಿದ್ದು, ಅದರಿಂದ ಪರಿಸರಕ್ಕೆ ಆಗುತ್ತಿರುವಂತಹ ಹಾನಿಯ ಬಗ್ಗೆ ಇಂದು ಕಾರ್ಯಕ್ರಮ ನಡೆಸಲಾಗುತ್ತಿದೆ. ಸ್ವಚ್ಛಭಾರತ್ ಅಭಿಯಾನ ಎಂಬುದು ಸರ್ಕಾರ ಯೋಜನೆಯಾದರೂ ಸಹ ಪ್ರತಿಯೊಬ್ಬರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಸ್ವಚ್ಛತೆ ಮಾಡಬೇಕಿದೆ. ಅದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.
ಇದೇ ವೇಳೆ ಪ್ಲಾಸ್ಟಿಕ್‍ಮುಕ್ತ ವಿಷಯದ ಬಗ್ಗೆ ಚಿತ್ರಕಲೆ, ಪ್ರಬಂಧ, ಚರ್ಚಾ ಸ್ಪರ್ಧೆ ಏರ್ಪಡಿಸಲಾಗಿದ್ದು ಇದರಲ್ಲಿ ಭಾಗವಹಿಸಿದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ, ಡಾ.ಬಾನುಪ್ರಕಾಶ್ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ