ಟೆಕ್ಸಾಸ್:
ಅಮೆರಿಕಾದ ಟೆಕ್ಸಾಸ್‍ನಲ್ಲಿ ದುಷ್ಕರ್ಮಿಗಳ ಅಟ್ಟಹಾಸ ಮತ್ತು ಗುಂಡಿನ ದಾಳಿ ಮುಂದುವರೆದಿದ್ದು, ಭಾರತೀಯ ಸಂಜಾತ ದಕ್ಷ ಸಿಖ್ ಪೊಲೀಸ್ ಉನ್ನತಾಧಿಕಾರಿ
ಟ್ರಾಫಿಕ್ ನಲ್ಲಿ ಪುರುಷ ಹಾಗೂ ಮಹಿಳೆಯೊಬ್ಬರಿದ್ದ ವಾಹನವನ್ನು ತಡೆ ಹಿಡಿದ ಕಾರಣ ಆಕ್ರೋಶಗೊಂಡು ಕಾರಿನಿಂದ ಇಳಿದು ಬಂದ ವ್ಯಕ್ತಿಯೊಬ್ಬ ಮನ ಬಂದಂತೆ ಗುಂಡಿನ ದಾಳಿ ನಡೆಸಿದ್ದು, ಹ್ಯಾರಿಸ್ ಕೌಂಟಿ ಶೆರಿಫ್‌ನ ಉಪ ಅಧಿಕಾರಿ ಸಂದೀಪ್ ಸಿಂಗ್ ದಾಲಿವಾಲ್ (42) ರನ್ನು ನಿರ್ದಯವಾಗಿ ಹತ್ಯೆ ಮಾಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಶೆರಿಫ್ ಎಡ್ ಗೊನ್ಜಾಲೆಜ್ ತಿಳಿಸಿದ್ದಾರೆ.
ಆರೋಪಿ ಹಾಗೂ ಆತನೊಂದಿಗೆ ಕಾರಿನಲ್ಲಿದ್ದ ಮಹಿಳೆಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪರೋಪಕಾರ ಗುಣದಿಂದ ಎಲ್ಲರಿಗೂ ಚಿರಪರಿಚಿತರಾಗಿದ್ದ ಸಂದೀಪ್ ವಿವಾಹವಾಗಿದ್ದು, ಮೂವರು ಮಕ್ಕಳ ತಂದೆಯಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/09/Sandeep-Singh-Dhaliwal-600x.gif)