ನವದೆಹಲಿ:
ಡಿಆರ್ ಡಿಒ ನಮ್ಮ ದೇಶದ ಅತ್ಯಂತ ಶಕ್ತಿಶಾಲಿ ಕ್ಷಿಪಣಿಗಳಲ್ಲಿ ಒಂದಾದ ಬ್ರಹ್ಮೋಸ್ ನ ಸುಧಾರಿತ ಮಾದರಿಯನ್ನು ಯಶಸ್ವಿಯಾಗಿ ಪ್ರಯೋಗಿಸಿದೆ.
ಸುಧಾರಿತ ಬ್ರಹ್ಮೋಸ್ ಕ್ಷಿಪಣಿಯೂ ಗುರಿಗಳ ಮೇಲೆ ನಿಖರವಾಗಿ ದಾಳಿ ಮಾಡುವಂತೆ ನಿಯಂತ್ರಿಸಬಹುದಾಗಿದ್ದು ಇದಕ್ಕೂ ಮುಂಚೆ ಇದ್ದ ಕ್ಷಿಪಣಿ 290 ಕಿ.ಮೀ ದೂರ ಕ್ರಮಿಸಲು ಬಳಕೆ ಮಾಡುತ್ತಿದ್ದ ಅಷ್ಟೇ ಪ್ರಮಾಣದ ಇಂಧನವನ್ನು ಈ ಕ್ಷಿಪಣಿಯೂ ಬಳಕೆ ಮಾಡಿಕೊಂಡು 450 ಕಿ.ಮೀ ದೂರದ ಗುರಿಗಳನ್ನು ಯಶಸ್ವಿಯಾಗಿ ಮುಟ್ಟುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಅಲ್ಲದೆ ಇಂಧನ ಬಳಕೆಯನ್ನು ಕಂಪ್ಯೂಟರ್ ಆಧಾರಿತ ಪ್ರೋಗ್ರಾಮ್ ನಿಂದ ನಿಯಂತ್ರಿಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಂತೆಯೇ ಈ ಕ್ಷಿಪಣಿ ಸುಮಾರು 200 ರಿಂದ 300 ಕೆಜಿ ತೂಕದ ಸಿಡಿತಲೆಗಳನ್ನು ಹೊತ್ತೊಯ್ಯು ಸಾಮರ್ಥ್ಯ ಹೊಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/09/07-1446879574-brahmoslaunchfrommal.gif)