ತುಮಕೂರು :
ಅತಿ ವೇಗದ ಚಾಲನೆಯಲ್ಲಿ ಬಂದ ಗೂಡ್ಸ್ ಲಾರಿಯೊಂದು ಟಾಟಾ ಏಸ್ ವಾಹನದ ಮೇಲೆ ಬಿದ್ದ ಪರಿಣಾಮ ಓರ್ವ ಮೃತಪಟ್ಟಿರುವ ಘಟನೆ ನಗರದ ಕ್ಯಾತ್ಸಂದ್ರ ಬಸ್ ನಿಲ್ದಾಣದ ಬಳಿ ನಡೆದಿದೆ.
ಇಂದು ಬೆಳಗ್ಗಿನ ಜಾವ ಸುಮಾರು 4 ಗಂಟೆ ಸುಮಾರಿನಲ್ಲಿ ಅತಿ ವೇಗವಾಗಿ ಬಂದ ಮಹಾರಾಷ್ಟ್ರ ಮೂಲಕ ಗೂಡ್ಸ್ ಲಾರಿಯೊಂದು ಡಿವೈಡರ್ ನಿಂದ ಹಾರಿ ಟಾಟಾ ಏಸ್ ವಾಹನದ ಮೇಲೆ ಬಿದ್ದಿದೆ. ಪರಿಣಾಮ ಟಾಟಾ ಏಸ್ ವಾಹನ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಲಾರಿಯಲ್ಲಿ ರವೆಯನ್ನು ಬೆಂಗಳೂರಿಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಇನ್ನು ಟಾಟಾ ಏಸ್ ನಲ್ಲಿ ಅಣ್ಣ – ತಮ್ಮ ಇದ್ದರು ಎನ್ನಲಾಗಿದ್ದು, ಚಾಲನೆ ಮಾಡುತ್ತಿದ್ದ ತಮ್ಮ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಇನ್ನು ಅಪಘಾತ ನಡೆದ ಬಳಿಕ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಈ ದುರ್ಘಟನೆಯಿಂದಾಗಿ ರಸ್ತೆಯ ನಡುವೆ ಬಿದ್ದ ಲಾರಿಯಿಂದ ರಸ್ತೆ ಬಂದ್ ಆಗಿದ್ದು, ಸಂಚಾರ ಅಸ್ತವ್ಯಸ್ಥಗೊಂಡಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ನಗರದ ಬಾರ್ ಲೈನ್ ರಸ್ತೆಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ