ಹುಳಿಯಾರು:
ನಿರ್ಮಾಣ ಹಂತದಲ್ಲಿದ್ದ ಚರಂಡಿಗೆ ವ್ಯಕ್ತಿಯೋರ್ವ ಬಿದ್ದು ಸಾವನ್ನಪ್ಪಿದ ಘಟನೆ ಹುಳಿಯಾರಿನಲ್ಲಿ ಬುಧವಾರ ಬೆಳಗ್ಗೆ ಜರುಗಿದೆ. ತುಮಕೂರಿನ ಭೀಮಸಂದ್ರದ ನಿವಾಸಿ ಶಾನವಾಸ್ (50) ಮೃತಪಟ್ಟ ದುರ್ಧೈವಿ. ಈತ ವಾಹನಗಳಿಗೆ ಬ್ಲೇಡ್ ಕಟ್ಟುವ ಕೆಲಸ ಮಾಡಿ ಜೀನವ ನಡೆಸುತ್ತಿದ್ದರು. ಈ ಕೆಲಸಕ್ಕಾಗಿಗೆ ಹುಳಿಯಾರಿಗೆ ಬಂದು ಸ್ಥಳೀಯ ಗ್ಯಾರೇಜ್‍ನಲ್ಲಿ ಕೆಲಸ ಮಾಡಿಕೊಂಡಿದ್ದರು.
ಎಂದಿನಂತೆ ಬೆಳಗ್ಗೆ ಮನೆಯಿಂದ ಹೊರಬಂದ ಇವರು ಆಶ್ಚರ್ಯಕರ ರೀತಿಯಲ್ಲಿ ರಾಮಗೋಪಾಲ್ ಸರ್ಕಲ್‍ನಲ್ಲಿ ನಿರ್ಮಾಣ ಹಂತದಲ್ಲಿದ್ದ ಚರಂಡಿಗೆ ಬಿದ್ದಿದ್ದಾರೆ. ಮಂಗಳವಾರ ಇಡೀ ರಾತ್ರಿ ಮಳೆ ಸುರಿದ ಪರಿಣಾಮ ಚರಂಡಿಯಲ್ಲಿ ಆಳೆತ್ತರಕ್ಕೆ ಮಳೆ ನೀರು ನಿಂತಿದ್ದು ಚರಂಡಿ ಒಳಗಿನ ಮಣ್ಣಿನ ಉಸುಬಿಗೆ ಸಿಲುಕಿ ಸಾವನ್ನಪ್ಪಿರಬಹುದೆಂದು ಊಹಿಸಲಾಗಿದೆ.
ಸಾವಿಗೆ ಕಾಮಗಾರಿಯ ಗುತ್ತಿಗೆದಾರರ ಬೇಜವಾಬ್ದಾರಿಯೇ ಕಾರಣವಾಗಿದ್ದು ಗುಂಡಿ ತೆಗೆದ ತಕ್ಷಣವೇ ಕಾಂಕ್ರಿಟ್ ಕೆಲಸ ಮಾಡಿದ್ದರೆ ಸಾವು ಸಂಭವಿಸುತ್ತಿರಲಿಲ್ಲ. ಹಾಗಾಗಿ ಮೃತರ ಕುಟುಂಬಕ್ಕೆ ಪರಿಹಾರ ಕೊಡಬೇಕು. ಇಲ್ಲವಾದಲ್ಲಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಪಟ್ಟು ಹಿಡಿದಿದ್ದರು. ಪೊಲೀಸರು ಮಧ್ಯ ಪ್ರವೇಶಿಸಿ ಕುಟುಂಬದವರ ಮನವೊಲಿಸಿ ಶವವನ್ನು ಮೃತರ ಊರಿಗೆ ಕಳುಹಿಸಿಕೊಡಲಾಯಿತು.