ಹಾಸನ : ಸೇತುವೆಗೆ ಹಾರಿದ ಬೈಕ್ ; ಇಬ್ಬರ ದುರ್ಮರಣ!!!

ಹಾಸನ:

      ಬೈಕ್ ಸಮೇತ ಸೇತುವೆಯಿಂದ ಬಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಅರಕಲಗೂಡು ತಾಲೂಕಿನ ಬಸವನಹಳ್ಳಿಯಲ್ಲಿ ನಡೆದಿದೆ.

      ಮೃತರನ್ನು ರಂಗಸ್ವಾಮಿ, ಸಿದ್ದರಾಜು ಎಂದು ಗುರುತಿಸಲಾಗಿದ್ದು, ಇವರು ಮೈಸೂರು ಜಿಲ್ಲೆಯ ಸಾಲಿಗ್ರಾಮ ಮೂಲದವರು ಎನ್ನಲಾಗಿದೆ.

      ಬಸವನಹಳ್ಳಿ ಪಟ್ಟಣಕ್ಕೆಂದು ಬೈಕ್ ನಲ್ಲಿ ಹೋಗುವಾಗ ಈ ಅವಘಡ ಸಂಭವಿಸಿದ್ದು, ಈ ಹಿಂದೆ ಪ್ರವಾಹ ಬಂದ ಸಂದರ್ಭದಲ್ಲಿ ಈ ಸೇತುವೆ ಕೊಚ್ಚಿ ಹೋಗಿದ್ದ ಕಾರಣ ಆಯತಪ್ಪಿ ಕೆಳಕ್ಕೆ ಬಿದ್ದು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. 

      ಈ ಸಂಬಂಧ ಕೊಣನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link