ನವದೆಹಲಿ:
ತೀವ್ರ ಚರ್ಚೆಗೆ ಗ್ರಾಸವಾಗಿದ್ದ ರಫೇಲ್ ಯುದ್ಧ ವಿಮಾನದ ಖರೀದಿ ಸಂಬಂಧ ತೀವ್ರ ಸ್ಥರದಲ್ಲಿರು ವಾಗಲೆ ಭಾರತಕ್ಕೆ ಮೊದಲ ರಫೇಲ್ ಯುದ್ಧ ವಿಮಾನ ಹಸ್ತಾಂತರವಾಗಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ .
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೊದಲ ಬಾರಿಗೆ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಲಿದ್ದಾರೆಂದು ಅಧಿಕೃತ ಮೂಲಗಳು ಮಾಹಿತಿ ನೀಡಿವೆ. ಬೆಂಗಳೂರಿನಲ್ಲಿ ಲಘು ಯುದ್ಧ ವಿಮಾನ ತೇಜಸ್ ನಲ್ಲಿ ರಾಜನಾಥ್ ಸಿಂಗ್ ಅವರು ಹಾರಾಟ ನಡೆಸಿದ್ದರು.
ಡಸಾಲ್ಟ್ ಏವಿಯೇಷನ್ ನಿಂದ ಭಾರತಕ್ಕೆ ಪೂರೈಕೆ ಯಾಗಬೇಕಿರುವ 36 ಯುದ್ಧ ವಿಮಾನಗಳ ಪೈಕಿ, ಮೊದಲ ಯುದ್ಧ ವಿಮಾನವನ್ನು ಸ್ವೀಕರಿಸುವ ನಿಟ್ಟಿನಲ್ಲಿ ರಾಜನಾಥ್ ಸಿಂದ್ ಅವರು, 7 ರಿಂದ 3 ದಿನಗಳ ಕಾಲ ಪ್ಯಾರಿಸ್ ಪ್ರವಾಸ ಕೈಗೊಳ್ಳಲಿದ್ದಾರೆ. ಅಲ್ಲದೆ, ಭಾರತೀಯ ವಾಯುಸೇನೆಯ ಸಂಸ್ಥಾಪನಾ ದಿನವಾದ ಅ.8 ರಂದು ಯುದ್ಧ ವಿಮಾನ ಹಸ್ತಾಂತರ ನಡೆಯಲಿದೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ