ನವದೆಹಲಿ:
ಈರುಳ್ಳಿ ಹೆಚ್ಚು ಬೆಳೆಯುವ ರಾಜ್ಯಗಳಲ್ಲಿ ಸತತ ಮಳೆಯಿಂದಾಗಿ ಬೆಳೆ ನಾಶವಾದ ಹಿನ್ನೆಲೆಯಲ್ಲಿ ವಾರ್ಷಿಕ ಸರಾಸರಿ ಉತ್ಪಾದನೆ ಯಲ್ಲಿ ತೀವ್ರ ಕುಂಠಿತವಾಗಿರುವುದರಿಂದ ಭಾರತ ಕಳೆದ ತಿಂಗಳು ಈರುಳ್ಳಿ ರಫ್ತು ಮಾಡುವುದಕ್ಕೆ ನಿಷೇಧ ಹೇರಿತ್ತು. ಇದರಿಂದ ಸಹಜವಾಗಿ ಭಾರತ ದೇಶದ ಈರುಳ್ಳಿಯನ್ನೆ ನಂಬಿಕೊಂಡಿರುವ ಹೊರದೇಶಗಳಿಗೆ ಇದರ ಬಿಸಿ ತಟ್ಟಿದೆ.
ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ನಿನ್ನೆ ದೆಹಲಿಯಲ್ಲಿ ಮಾತನಾಡಿ ತಮಗೆ ಸಹ ಈರುಳ್ಳಿ ಕೊರತೆಯ ಬಿಸಿ ತಟ್ಟಿದೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ದೆಹಲಿಯಲ್ಲಿ ನಿನ್ನೆ ಭಾರತ-ಬಾಂಗ್ಲಾದೇಶ ಉದ್ಯಮ ವೇದಿಕೆ ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಶೇಖ್ ಹಸೀನಾ, ಈರುಳ್ಳಿ ರಫ್ತಿಗೆ ನಿಷೇಧ ಹೇರಿದ ಬಗ್ಗೆ ನಮಗೆ ಮೊದಲೇ ತಿಳಿಸಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ನಮ್ಮ ದೇಶದಲ್ಲಿ ಈರುಳ್ಳಿ ಸಿಗುವುದು ಕಷ್ಟವಾಗಿದೆ. ನೀವು ಹಠಾತ್ ಪೂರೈಕೆ ಮಾಡುವುದು ನಿಲ್ಲಿಸಿದ್ದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ, ನಾನು ನಮ್ಮನೆಯ ಅಡುಗೆಯವರಿಗೆ ಈರುಳ್ಳಿ ಹಾಕದೆ ಅಡುಗೆ ಮಾಡಿ ಎಂದು ಹೇಳಿದ್ದೇನೆ ಎಂದಾಗ ಅಲ್ಲಿ ನೆರೆದಿದ್ದವರು ನಗೆಗಡಲಲ್ಲಿ ತೇಲಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ