ಕುಣಿಗಲ್
ಪಾದಚಾರಿಗಳೆ ಎಚ್ಚರಾ.,., ನಿಮ್ಮ ಬುದ್ದಿ ನಿಮ್ಮ ಕೈಲಿರಲಿ…,,,, ಇಲ್ಲಿ ಯಾರೂ ರಕ್ಷಣೆಗೆ ಬರುತ್ತಾರೋ ಬರುವುದಿಲ್ಲವೋ ಗೊತ್ತಿಲ್ಲ ಏಕೆಂದರೆ ಬೆಸ್ಕಾಂ ಪಟ್ಟಣದಲ್ಲಿ ಜೀವಾಂತವಾಗಿದಿಯೋ ಇಲ್ಲವೋ ಎಂಬುದನ್ನ ಈ ವಿದ್ಯುತ್ ಕಂಬದ ಸ್ಥಿತಿ ನೋಡಿದರೆ ತಿಳಿಯುತ್ತದೆ.
ಪಟ್ಟಣದ ಕೆ.ಆರ್.ಎಸ್. ಅಗ್ರಹಾರದಲ್ಲಿರುವ ಉಪನೋಂದಣಾಧಿಕಾರಿಗಳ ಕಚೇರಿ ಹಾಗೂ ಬಿ.ಜಿ.ಎಸ್. ಶಾಲಾ ಕಾಲೇಜುಗಳಿರುವ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ವಿದ್ಯುತ್ ಕಂಬಗಳನ್ನು ಹಾಕಲಾಗಿತ್ತು. ರಸ್ತೆಯ ಪಕ್ಕದಲ್ಲಿ ಹಲವು ತಿಂಗಳಿಂದ ಉಪಯೋಗಕ್ಕೆ ಬಾರದ ಈ ಹಿಂದೆ ಹಾಕಲಾಗಿದ್ದ ಹಳೆಯ ವಿದ್ಯುತ್ ಕಂಬವೊಂದು ಮಳೆ ಗಾಳಿಗೆ ಮುಕ್ಕಾಲು ಭಾಗ ವಾಲಿದ್ದು ಇನ್ನೇನು ಬಿದ್ದು ಹೋಗುವ ಸ್ಥಿತಿಯಲ್ಲಿದೆ.
ಬಿಜಿಎಸ್ ಸೇರಿದಂತೆ ಸರ್ಕಾರಿ ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳು, ವಿದ್ಯಾರ್ಥಿಗಳು, ವಯೋವೃದ್ದರು, ಮಹಿಳೆಯರು, ಅಂಗವಿಕಲರು ನಿತ್ಯ ಸಂಚರಿಸುವಂತಹ ಸ್ಥಳದಲ್ಲಿರುವುದರಿಂದ ಯಾವಾಗ ಬೇಕಾದರೂ, ಯಾರ ಮೇಲಾದರೂ ಈ ವಾಲಿರುವ ವಿದ್ಯುತ್ ಕಂಬ ಬಿದ್ದು ಜನರ ಪ್ರಾಣಕ್ಕೆ ಸಂಚಕಾರ ತರಬಹುದಾಗಿದೆ.
ಇಂತಹ ದುಸ್ಥಿತಿಯಲ್ಲಿರುವ ಕರೆಂಟ್ ಕಂಬ ಮುಖ್ಯ ರಸ್ತೆಯಲ್ಲಿದ್ದರೂ ಈ ಭಾಗದ ಜವಾಬ್ದಾರಿಯುತ ಜನಪ್ರತಿನಿಧಿಗಳಿಗಾಗಲಿ, ಸಂಬಂಧ ಪಟ್ಟ ಬೆಸ್ಕಾಂ ಹಾಗೂ ಪುರಸಭೆಯವರಿಗಾಗಲಿ ಗೋಚರಿಸದಿರುವುದು ಅವರ ಬೇಜವಾಬ್ದಾರಿಗೆ ಹಿಡಿದ ಕನ್ನಡಿಯಾಗಿದ್ದು ಇದು ನಾಗರಿಕರ ದುರಂತವೇಸರಿ ಎಂದು ಹಿರಿಯ ನಾಗರಿಕರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದು ಕೂಡಲೇ ಇಂತಹ ದುಸ್ಥಿತಿಯಲ್ಲಿರುವ ಈ ಕಂಬವೂ ಸೇರಿದಂತೆ ಬಳಕೆಗೆ ಬಾರದ ಪಟ್ಟಣದ ಇನ್ನೂ ಹಲವು ಕಂಬಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಆಟೋಚಾಲಕ ಹಾಗೂ ಸಾಮಾಜಿಕ ಕಾರ್ಯಕರ್ತ ನಟರಾಜ್ ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ