ಬಿದರ ಕೆರೆಗೆ ಬಾಗಿನ ಅರ್ಪಣೆ ..!

ಮಿಡಿಗೇಶಿ
     ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿವ್ಯಾಪ್ತಿಯ  ಬಿದರಕೆರೆ ಗ್ರಾಮದ ಬಿದರಕೆರೆ ಭರ್ತಿಯಾಗಿದ್ದು,  ಗಂಗಾ ಪೂಜೆ ಹಾಗೂ ಬಾಗಿನ ಅರ್ಪಣೆಯನ್ನು ಅ. 6 ರಂದು  ಜಿಪಂ  ಸದಸ್ಯೆ  ಶಾಂತಲಾರಾಜಣ್ಣ ನೆರವೇರಿಸಿದರು.ಗಂಗಾ ಪೂಜೆ ಹಾಗೂ ಬಾಗಿನ ಅರ್ಪಣೆ  ನಂತರ  ಶಾಂತಲಾರಾಜಣ್ಣ  ಮಾತನಾಡಿ, ಕಳೆದ ಎರಡು ಮೂರು ವರ್ಷಗಳಿಂದೂ ಮಧುಗಿರಿ ತಾಲ್ಲೂಕಿನಲ್ಲಿ  ದನಕರುಗಳಿಗೆ ಸೇರಿದಂತೆ  ಕುಡಿಯುವ ನೀರು, ಮೇವಿನ  ಸಮಸ್ಯೆ ತಲೆದೋರಿತ್ತು.  
    ಇಂತಹ ಸಂದರ್ಭದಲ್ಲಿ ವರುಣನ ಕೃಪಾ ಕಟಾಕ್ಷದಿಂದ ಮಳೆ ಬಂದು ಹಲವಾರು ಕೆರೆ, ಕಟ್ಟೆಗಳಿಗೆ ನೀರು ಅಲ್ಪ ಸ್ವಲ್ಪ ಬಂದಿದೆ.  ಹಳ್ಳ ಕೊಳ್ಳಗಳು ಹರಿದಿರುವುದರಿಂದ ಕುಡಿಯುವ ನೀರಿನ ಅಭಾವ ತಪ್ಪಿದಂತಾಗಿದೆ.  ದನ ಕರುಗಳಿಗೆ ಮೇವಿನ ಕೊರತೆ ನೀಗಿದಂತಾಗಿದೆ. ಆದ್ದರಿಂದ ಇನ್ನು ಮುಂದೆ ಪ್ರತಿಯೊಬ್ಬರು ಒಂದೊಂದು ಗಿಡವನ್ನು ನೆಟ್ಟು ಕಾಡನ್ನು ಬೆಳೆಸಿದ್ದೆ ಆದಲ್ಲಿ ಮಳೆಯ ತೊಂದರೆಯಾಗುವುದಿಲ್ಲ ಎಂದು ತಿಳಿಸಿ, ಮುಂಬರುವ ವಿಧಾನ ಸಭಾ ಚುನಾವಣೆಗೆ ಕೆ.ಎನ್.ರಾಜಣ್ಣ ನವರನ್ನು ಕರೆ ತರುವಂತೆ ಜನರ ಒತ್ತಾಸೆ ಬಗ್ಗೆ ತಮ್ಮೆಲ್ಲರ ಸಹಕಾರವಿದ್ದಲ್ಲಿ ಕೆ.ಎನ್.ಆರ್  ಬರಲಿದ್ದಾರೆಂದು ತಿಳಿಸಿದರು.
   
     ತಾಲ್ಲೂಕು  ಬ್ಲಾಕ್ ಕಾಂಗ್ರೆಸ್ ಅಧ್ಕಕ್ಷ ಎಂ.ಎಸ್.ಮಲ್ಲಿಕಾರ್ಜುಜುನಯ್ಯ  ಮಾತನಾಡಿ, ಮುಂಬರುವ ದಿನಗಳಲ್ಲಿ  ವಿಧಾನಸಭೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಚುನಾವಣೆಗೆ ಸಿದ್ಧರಾಗಬೇಕು. ಮುಂದಿನ ಚುನಾವಣೆಯಲ್ಲಿ ಕೆ.ಎನ್. ರಾಜಣ್ಣನವರನ್ನು ತಾಲ್ಲೂಕಿನ ಶಾಸಕರನ್ನಾಗಿಸಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಬೇಕು. ಮಧುಗಿರಿ ತಾಲ್ಲೂಕು ಮಟ್ಟದ ಕಚೇರಿಗಳಲ್ಲಿ ಹಾಲಿ ಶಾಸಕರ  ಜನಾಂಗದ ಬಹುತೇಕ ಅಧಿಕಾರಿಗಳವರಿದ್ದು, ತಾಲ್ಲೂಕಿನ ಸಾಮಾನ್ಯ ಜನರ ಕೆಲಸ ಕಾರ್ಯಗಳು ಬಹುತೇಕ ಸರಿಯಾಗಿ ಮಾಡುತ್ತಿಲ್ಲವೆಂದು ಆರೋಪಿಸಿದರು.
     ಕಸಬಾ ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಜೆ ರಾಜಣ್ಣ  ಮಾತನಾಡಿ, ಮಾಜಿ ಶಾಸಕ ಕೆ.ಎನ್.ರಾಜಣ್ಣನವರ ಮನೆ ಮುಂದೆ ಪ್ರತಿದಿನ 300 ರಿಂದ 400 ಜನರಿರುತ್ತಾರೆ. ಇವರಲ್ಲಿ ಬಹುತೇಕರು ಡಿ.ಸಿ.ಸಿ ಬ್ಯಾಂಕಿನಿಂದ ಸಾಲ ಪಡೆಯುವವರೆ ಆಗಿರುತ್ತಾರೆ. ಅವರು  ಎಲ್ಲಾ ವರ್ಗದವರಿಗೂ ಸಾಲ ನೀಡುತ್ತಿದ್ದಾರೆ. ಆದಾಗ್ಯೂ ಸಹ ಸದರಿ ಅಧ್ಯಕ್ಷರು ಇ.ಡಿ.ಇಲಾಖೆಯವರ ನೋಟೀಸಿಗೆ ನ್ಯಾಯಾಲಯಕ್ಕೆ ಹೋಗುವ ಪರಿಸ್ಥಿತಿ ಎದುರಾಗಿದೆ. ಮುಂಬರುವ ವಿಧಾನ ಸಭಾ ಚುನಾವೆಯಲ್ಲಿ ಕೆ.ಎನ್. ರಾಜಣ್ಣನವರನ್ನು ಗೆಲ್ಲಿಸಲು ಎಲ್ಲರೂ ಪಣತೊಡುವಂತೆ ತಿಳಿಸಿದರು.
      ಬೇಡತ್ತೂರು ಗ್ರಾಪಂ ಮಾಜಿ ಅಧ್ಯಕ್ಷರುಗಳಾದ ಈಶ್ವರ ಪ್ರಸಾದ್, ತಿಮ್ಮಾರೆಡ್ಡಿ, ನಾರಾಯಣರೆಡ್ಡಿ, ನೀಲಮ್ಮ ಹಾಗೂ ಹಾಲಿ ಗ್ರಾ.ಪಂ ಸದಸ್ಯರುಗಳಾದ ಅಶ್ವತ್ಥಪ್ಪ, ಯೋಗಾನಂದರೆಡ್ಡಿ, ಸುಬ್ಬಮ್ಮ, ವೆಂಕಟೇಶ್, ನಾಗಮಣಿ, ನಾಗರಾಜು, ಹಾಲಿ ಗ್ರಾ.ಪಂ ನ ಉಪಾಧ್ಯಕ್ಷೆ ಹನುಮಕ್ಕ ನರಸಿಂಹಯ್ಯ, ಪಿ.ಡಿ.ಓ ನವೀನ್, ಮಿಡಿಗೇಶಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಸ್.ಎನ್.ರಾಜು, ಹೊಸೆಕೆರೆ ವಿ.ಎಸ್.ಎಸ್.ಎನ್. ಅಧ್ಯಕ್ಷ ಹೆಚ್‍ವಿ ಮಂಜುನಾಥ್, ಮಾಜಿ ಕೆಎಂಎಫ್ ಅಧ್ಯಕ್ಷ ರಾಜೇಂದ್ರ ಪ್ರಸಾದ್, ಗುತ್ತಿಗೆದಾರರಾದ ಕೃಷ್ಣಾರೆಡಿ, ಜನಾರ್ಧನರೆಡ್ಡಿ, ಚಿನ್ನೇನಹಳ್ಳಿ ಗ್ರಾ.ಪಂ ಸದಸ್ಯ ಆರ್ ಪಲ್ಲಪ್ಪ, ಮಿಡಿಗೇಶಿ ಗ್ರಾ, ಸದಸ್ಯ ಆದಿನಾರಾಯಣ, ಬಿ.ಪಿನಾಗರಾಜು, ನೀರಗಂಟಿ ದಿನೇಶ್, ಡಿ.ಸಿ.ಸಿ ಬ್ಯಾಂಕಿನ ನಿರ್ದೇಶಕ ಸೀನಪ್ಪ, ಮಾಜಿ ವಿ.ಎಸ್.ಎಸ್.ಎನ್. ಅಧ್ಯಕ್ಷ ಮಲ್ಲಪ್ಪ, ರೆಡ್ಡಿಹಳ್ಳಿ ಗ್ರಾ,ಪಂ ಸದಸ್ಯ ಕೋನಪ್ಪ ಸೇರಿದಂತೆ ಬೇಡತ್ತೂರು, ಹೊಸಕೆರೆ, ರೆಡ್ಡಿಹಳ್ಳಿ, ಚಿನ್ನೇನಹಳ್ಳಿ ಗ್ರಾ.ಪಂ.ಗೆ ಸೇರಿದ  ಬಹುತೇಕ ರೈತಾಪಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು . ಕಾರ್ಯಕ್ರಮಕ್ಕೆ ಆಗಮಿಸಿದವರೆಲ್ಲರಿಗೂ ಗ್ರಾ.ಪಂ  ಅಧ್ಯಕ್ಷೆ ಪ್ರಮೀಳಮ್ಮ ರವೀಂದ್ರ ರೆಡ್ಡಿರವರು ಲಘು ಉಪಹಾರದ ವ್ಯವಸ್ಥೆ ಕಲ್ಪಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link