ಶರಣ ಸಂಸ್ಕೃತಿ ಉತ್ಸವದಲ್ಲಿ ಜಾನಪದ ಕಲಾಮೇಳ

ಚಿತ್ರದುರ್ಗ;

   ಕೋಟೆನಗರಿ ಚಿತ್ರದುರ್ಗದಲ್ಲಿ ಮುರುಘಾಮಠದ ಶರಣ ಸಂಸ್ಕøತಿ ಉತ್ಸವ ಪ್ರತಿವರ್ಷದಂತೆ ಈ ಬಾರಿಯೂ ಹಲವು ವಿಶೇಷತೆಗಳಿಗೆ ಸಾಕ್ಷಿಯಾಯಿತು. ಕಳೆದ 2ರಿಂದ ನಡೆಯುತ್ತಿರುವ ಉತ್ಸವದ ಪ್ರಯುಕ್ತ ಬುಧವಾರ ಜಾನಪದ ಕಲಾಮೇಳ ವಿಜೃಂಬನೆಯಿಂದ ಜರುಗಿತು

   ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಜರುಗಿದ ಈ ಉತ್ಸವದಲ್ಲಿ ಅದ್ಧೂರಿ ಜನಪದ ಜಾತ್ರೆಯೇ ನಡೆಯಿತು. ಸಹಸ್ರಾರು ಭಕ್ತಸಮೂಹ ಈ ಸನ್ನಿವೇಶವನ್ನು ಕಣ್ತುಂಬಿಕೊಂಡರು.ಮುರುಘಾ ಶರಣರು ಸಹಜ ಶಿವಯೋಗ ಕಾರ್ಯಕ್ರಮವನ್ನು ಅನುಭವಮಂಟಪದಲ್ಲಿ ನಡೆಸಿಕೊಟ್ಟ ನಂತರ ಮುರುಘಾ ಶಾಂತವೀರ ಸ್ವಾಮಿಗಳ ಗದ್ದುಗೆಯ ಮುಖಾಂತರ ಶ್ರೀಮಠದ ಪ್ರಾಂಗಣದಲ್ಲಿ ಸಿಂಗರಿಸಿದ್ದ ಪುಷ್ಪಾಲಂಕೃತ ಸಾರೋಟಿನತ್ತ ಸಾಗಿ ನಾಡಿನ ನಾನಾ ಮಠಗಳ ಸ್ವಾಮಿಗಳು, ಬಸವ ಭಕ್ತರು, ಸಾರ್ವಜನಿಕರು, ಕಲಾವಿದರು, ಜನಪ್ರತಿನಿಧಿಗಳ ಹರ್ಷೋಧ್ಘಾರಗಳ ನಡುವೆ ಸಾರೋಟನ್ನು ಏರಿದರು.

   ಜನಪದ ಕಲಾಮೇಳಕ್ಕೆ ಚಿಕ್ಕಕೆರೂರು ಶ್ರೀ ವಿರಕ್ತಮಠದ ಶ್ರೀ ಮ.ನಿ.ಪ್ರ. ಚಂದ್ರಶೇಖರ ಸ್ವಾಮಿಗಳು ಚಮ್ಮಾಳ ಬಾರಿಸುವ ಮೂಲಕ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಕಾಗಿನೆಲೆ ಶ್ರೀ ಕನಕಗುರುಪೀಠದ ಶ್ರೀ ಜಗದ್ಗುರು ನಿರಂಜನಾನಂದಪುರಿ ಸ್ವಾಮಿಗಳು ಉಪಸ್ಥಿತರಿದ್ದರು.

    ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ವಿವಿಧ ಪ್ರಕಾರದ ನೂರಾರು ಜಾನಪದ ಕಲಾ ತಂಡಗಳು ತಮ್ಮದೇ ಆದ ವಿಶಿಷ್ಟ ಭಂಗಿಯ ಪ್ರದರ್ಶನ ನೀಡುತ್ತಾ ಸಾಗಿದವು.ಹಗಲು ವೇಷ, ದೊಡ್ಡ್ಟಾಟದ ವೇಷ ಭೂಷಣ, ನಾಸಿಕ್ ಡೋಲು, ಪಟಕುಣಿತ, ಪೂಜಾಕುಣಿತ, ಮಹಿಳಾ ಮತ್ತು ಪುರುಷ ವೀರಾಗಾಸೆ, ಝಾಂಜ್ ಮೇಳ, ಜಗ್ಗಲಗಿ ಮೇಳ, ನಗಾರಿ, ಹಲಗೆ ಮಜಾಲ್, ರಾಕ್ಷಸಿ, ಹುಲಿ ಕರಡಿ ವೇಷ,ತಮಟೆ, ದಟ್ಟಿಕುಣಿತ, ಕಹಳೆತಂಡ, ನಂದಿಕೋಲು, ಹುಲಿವೇಷ, ಭೂತನೃತ್ಯ, ಬ್ಯಾಂಡ್‍ವಾದ್ಯ, ಕಿಂದರಿಜೋಗಿ, ಸೋಮನಕುಣಿತ, ಹೀಗೆ ಹಲವು ತಂಡಗಳು ತಮ್ಮ ಕಲಾಪ್ರದರ್ಶನ ನೀಡಿ ಗಮನ ಸೆಳೆದವು

    ಶ್ರೀಗಳೊಂದಿಗೆ ಈ ಮೇಳದಲ್ಲಿ ಧಾರ್ಮಿಕ, ಐತಿಹಾಸಿಕ ಪುಣ್ಯಪುರುಷರ ಸ್ತಬ್ದ ಚಿತ್ರಗಳೊಂದಿಗೆ ಎಸ್.ಜೆ.ಎಂ. ವಿದ್ಯಾಪೀಠದ ಶಾಲಾಕಾಲೇಜುಗಳ ವಿದ್ಯಾರ್ಥಿಗಳು ನಿರ್ಮಾಣ ಮಾಡಿದ ಸಾಮಾಜಿಕ, ಪರಿಸರದ ಮೇಲೆ ಪ್ರಭಾವ ಮತ್ತು ಪರಿಣಾಮ ಬೀರುವ ಸ್ತಬ್ದ ಚಿತ್ರಗಳಲ್ಲಿ ಪರಿಸರ ಸ್ವಚ್ಛತೆ ಜಾಗೃತಿ ಸ್ತಬ್ಧ ಚಿತ್ರಗಳು, ಎಸ್.ಜೆ.ಎಂ.ತಾಂತ್ರಿಕ ಮಹಾವಿದ್ಯಾಲಯದ ಸೋಲಾರ್‍ಪ್ಲವರ್, ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ವಿಂಗ್‍ಕಮಾಂಡರ್ ಅಭಿನಂದನ್, ಮಳೆನೀರು ಕೊಯ್ಲು, ಸಾಮೂಹಿಕ ಕಲ್ಯಾಣ ಮಹೋತ್ಸವ, ಭ್ರೂಣ ಹತ್ಯೆ, ಜಲಶಕ್ತಿ ಅಭಿಯಾನ ಕುರಿತ ಸ್ತಬ್ದ ಚಿತ್ರಗಳು ಜನರನ್ನು ಆಕರ್ಷಿಸಿದವು.

    ಉತ್ಸವ ವೀಕ್ಷಣೆಗೆ ಜನ ಸಾಲುಗಟ್ಟಿ ನಿಂತಿದ್ದರು. ದಣಿದ ಕಲಾವಿದರಿಗೆ ನೀರು, ಪಾನಕ, ಮಜ್ಜಿಗೆ, ಲಘು ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಉತ್ಸವದಲ್ಲಿ ಸಾಗಿ ಬರುತ್ತಿದ್ದ ಶರಣರ ಸಾರೋಟಿನ ಬಳಿ ಬಂದ ಭಕ್ತರು ಫಲಪುಷ್ಪ ಕಾಣಿಕೆಗಳನ್ನು ನೀಡುತ್ತಗೌರವ ಸಲ್ಲಿಸಿ ಶ್ರೀಗಳ ಆಶೀರ್ವಾದ ಪಡೆದರು.

     ಶ್ರೀಗಳ ಸಾರೋಟು ಸರಿಯಾಗಿ 2ಗಂಟೆಗೆ ನಗರದ ಗಾಂಧೀ ವೃತ್ತದ ಬಳಿ ಬಂದಾಗ ಹೆಲಿಕ್ಯಾಪ್ಟರ್ ಮೂಲಕ ಪುಷ್ಪವೃಷ್ಟಿಯ ಮೂಲಕ ಶ್ರೀಗಳಿಗೆ ಗೌರವಸಲ್ಲಿಸಲಾಯಿತು. ನೆರೆದಿದ್ದ ಜನರು ಈ ಸನ್ನಿವೇಶವನ್ನು ಕಂಡು ಜೈಕಾರ ಹಾಕುತ್ತ ಸಂಭ್ರಮಿಸಿದರು.

     ಉತ್ಸವವು ಶ್ರೀಮಠದಿಂದ ಹೊರಟುರಾಷ್ಟ್ರೀಯ ಹೆದ್ದಾರಿ 4, ಬಿ.ಡಿ.ರಸ್ತೆ, ನಗರದ ಪ್ರಮುಖ ರಾಜಬೀದಿಗಳಾದ ಸಂತೆಪೇಟೆ ವೃತ್ತ, ಮೈಸೂರು ಬ್ಯಾಂಕ್ ವೃತ್ತ, ಬಸವಮಂಟಪರಸ್ತೆ, ರಂಗಯ್ಯನ ಬಾಗಿಲು, ದೊಡ್ಡಪೇಟೆ ಮೂಲಕ ಕೋಟೆಯ ಮೇಲುದುರ್ಗಕ್ಕೆ ಸಾಗಿ ಅಂತ್ಯಗೊಂಡಿತು.

     ಮೇಳದಲ್ಲಿ ಶ್ರೀ ಮಾದಾರಚೆನ್ನಯ್ಯಗುರುಪೀಠದ ಶ್ರೀ.ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮಿಗಳು, ಶ್ರೀ.ಕುಂಚಿಟಿಗ ಗುರುಪೀಠದಡಾ.ಬಸವಶಾಂತವೀರಸ್ವಾಮಿಗಳು, ಶ್ರೀ.ಬೋವಿ ಗುರುಪೀಠದಇಮ್ಮಡಿ ಸಿದ್ದರಾಮೇಶ್ವರಸ್ವಾಮಿಗಳು, ಹರಗುರುಚರಮೂರ್ತಿಗಳು, ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಶರಣ ಸಂಸ್ಕøತಿಉತ್ಸವ ಸಮಿತಿ ಕಾರ್ಯಾಧ್ಯಕ್ಷ ಹನುಮಲಿ ಷಣ್ಮುಖಪ್ಪ, ,ಬಿಜೆಪಿ ಜಿಲ್ಲಾಧ್ಯಕ್ಷ ನವೀನ್, ಇನ್ನಿತರರು ಪಾಲ್ಗೊಂಡಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link