ಒಳ್ಳೆಯತನ ಹೆಚ್ಚಿಸಿಕೊಳ್ಳಲು ಸಂಕಲ್ಪ ಮಾಡಿ: ಸ್ವಾಮೀಜಿ

ತುಮಕೂರು
    ತುಮಕೂರು ದಸರಾ ಸಮಿತಿ ನಗರದಲ್ಲಿ ಆಯೋಜಿಸಿದ್ದ ದಸರಾ ಮಹೋತ್ಸವ ಸಡಗರ, ವೈಭವದಿಂದ ನೆರವೇರಿತು.  ಎರಡು ದಿನಗಳ ಕಾರ್ಯಕ್ರಮದಲ್ಲಿ ಸೋನವಾರ ಸಾಂಸ್ಕøತಿಕ  ನಾಡಹಬ್ಬ ಹಾಗೂ ಮಂಗಳವಾರ ವಿಜಯದಶವಿಯಂದು ಸಂಜೆ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಸಾಮೂಹಿಕ ಶಮೀಪೂಜೆಯೊಂದಿಗೆ ದಸರಾವನ್ನು ಸಾಂಪ್ರದಾಯಕವಾಗಿ ಆಚರಿಸಲಾಯಿತು.
29 ವರ್ಷಗಳಿಂದ ತುಮಕೂರಿನಲ್ಲಿ ದಸರಾ ಆಚರಣೆ ನಡೆದು ಬರುತ್ತಿದೆ. ಈ ಬಾರಿ ವಿಜಯದಶಮಿಯಂದು ತಾಲ್ಲೂಕು ದಂಡಾಧಿಕಾರಿ ಆರ್. ಯೋಗಾನಂದ್ ಅವರು ಮಹಾ ಪೂಜೆಯೊಂದಿಗೆ ಶಮಿಪೂಜೆ ನೆರವೇರಿಸಿದರು. 
    ಇದಕ್ಕೂ ಮೊದಲು ಬಿಜಿಎಸ್ ವೃತ್ತದಿಂದ ನಗರದ ವಿವಿಧ ದೇವಸ್ಥಾನಗಳ ಉತ್ಸವ ಮೂರ್ತಿಗಳ ವಿಜೃಂಭಣೆಯ ಮೆರವಣಿಗೆ ನಡೆಯಿತು. ಮೆರವಣಿಗೆ ಕಾಲೇಜು ಮೈದಾನ ತಲುಪಿದ ನಂತರ ಸಂಜೆ ಸಾಮೂಹಿಕ ಶಮಿ ಪೂಜೆ ನೆರವೇರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿದ್ಧಗಂಗಾ ಮಠಾಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿಯವರು ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಹಬ್ಬಗಳಿಗೆ ವಿಶೇಷ ಹಿನ್ನೆಲೆಯ ಮಹತ್ವವಿದೆ. ಎಲ್ಲರಿಗೂ ಒಳಿತಾಗಬೇಕು, ನಮ್ಮ ಅಂತರಂಗವನ್ನು ಶುದ್ಧಗೊಳಿಸಿಕೊಳ್ಳಬೇಕು ಎನ್ನುವ ಹಿನ್ನೆಲೆಯಲ್ಲಿ ಹಬ್ಬಗಳನ್ನು ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.
    ಆತ್ಮಶಕ್ತಿ, ಆಧ್ಯಾತ್ಮಿಕ ಶಕ್ತಿ ಹೆಚ್ಚಿಸಿಕೊಂಡು ನಮ್ಮೊಳಗಿನ ಶತ್ರುವನ್ನು ಗೆಲ್ಲಬೇಕಿರುವುದು ಅತ್ಯಂತ ಮುಖ್ಯವಾಗಿದೆ. ಕೆಟ್ಟದನ್ನು ಕಡಿಮೆ ಮಾಡಿಕೊಳ್ಳುವ, ಒಳ್ಳೆಯದನ್ನು ಹೆಚ್ಚಿಸಿಕೊಳ್ಳುವ ದೃಷ್ಠಿಯಿಂದ ಇಂತಹ ಆಚರಣೆಗಳು ಅಗತ್ಯವಿದೆ ಎಂದು ಸ್ವಾಮೀಜಿ ಹೇಳಿದರು.
       ಕೆಟ್ಟದನ್ನು ದೂರ ಮಾಡುವ ಒಳ್ಳೆಯದನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಈ ಸಂದರ್ಭದಲ್ಲಿ ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಹೇಳಿದರು.ತಾಲ್ಲೂಕು ದಂಡಾಧಿಕಾರಿ ಆರ್. ಯೋಗಾನಂದ್ ಮಾತನಾಡಿ, ದಸರಾ ಹಬ್ಬ ಎಲ್ಲರಿಗೂ ಶುಭ ತರಲಿ, ಉತ್ತಮ ಮಳೆ ಬೆಳೆಯಾಗಿ ನಾಡು ಸುಭಿಕ್ಷವಾಗಿರಲಿ ಎಂದು ಆಶಿಸಿದರು.ತಾವು ತಹಶೀಲ್ದಾರರಾಗಿ ಹತ್ತು ವರ್ಷ ಸೇವೆ ಮಾಡಿದ್ದು, ಇನ್ನೆರಡು ವರ್ಷದಲ್ಲಿ ವೃತ್ತಿ ಮುಗಿಸಿ, ವ್ಯವಸಾಯದಲ್ಲಿ ತೊಡಗಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದರು.
     ಸಾಮಾಜಿಕ ಕಾರ್ಯಕರ್ತೆ ಅಕ್ಷತಾ ಗೋಕಲೆ ಅವರು ವಿಜಯದಶಮಿ ಸಂದೇಶ ನೀಡಿದರು. ಭಾರತೀಯ ಸಂಸ್ಕøತಿ, ಸಂಸ್ಕಾರವನ್ನು ಪೋಷಕರು ಮಕ್ಕಳಿಗೆ ಕಲಿಸಬೇಕು. ದೇಶದ ಶ್ರೇಷ್ಠತೆ ಬಗ್ಗೆ ತಿಳಿಸಿ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದು ಹೇಳಿದರು.
     ಸ್ವಾಮಿ ವಿವೇಕಾನಂದರನ್ನು ಅಮೇರಿಕಾದ ಜನ ನೆನೆಪಿಸಿಕೊಳ್ಳುತ್ತಾರೆ, ಭಾರತೀಯರಲ್ಲಿ ಎಷ್ಟು ಜನ ವಿವೇಕಾನಂದರ ಆದರ್ಶಗಳನ್ನು ಮಕ್ಕಳಿಗೆ ಹೇಳುತ್ತಿದ್ದಾರೆ. ನಮ್ಮ ಪ್ರತಿ ಆಚರಣೆಗಳಲ್ಲೂ ವಿಶೇಷ ಹಿನ್ನೆಲೆ ಇದೆ, ಅದು ಮುಂದಿನ ತಲೆ ಮಾರಿನವರಿಗೆ ತಿಳಿಯಬೇಕು ಎಂದು ಹೇಳಿದರು.
    ಶಾಸಕ ಜಿ. ಬಿ. ಜ್ಯೋತಿಗಣೇಶ್, ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ. ಮೋಹನ್ ಆಳ್ವಾ, ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ. ಎಸ್. ಮಂಜುನಾಥ್, ಅಧ್ಯಕ್ಷ ಕೋರಿ ಮಂಜುನಾಥ್, ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್, ಸಂಸ್ಕಾರ ಭಾರತಿಯ ಪ್ರಾಂತೀಯ ಕಾರ್ಯಾಧ್ಯಕ್ಷ ಎಲ್. ಆರ್. ರಮೇಶ್ ಬಾಬು, ಸಂಚಾಲಕ ಗೋವಿಂದರಾವ್ ಮೊದಲಾದವರು ಭಾಗವಹಿಸಿದ್ದರು. 
    ಇದಕ್ಕೂ ಮೊದಲು ಸಿದ್ದೇಂದ್ರ ಕುಮಾರ್ ಹಿರೇಮಠ ಮತ್ತು ತಂಡದವರು ಸುಮಧುರ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.ಶಮಿಪೂಜೆ ನಂತರ ಸಂಸ್ಕøತಿಕ ಕಾರ್ಯಕ್ರಮಗಳು ಮುಂದುವರೆದವು.  
ವೈಭವದ ಮೆರವಣಿಗೆ
    ಮಧ್ಯಾಹ್ನ ವಿಜಯದಶಮಿಯ ವಿಜಯೋತ್ಸವ ವೈಭವದಿಂದ ನೆರವೇರಿತು. ಬಿಜಿಎಸ್ ವೃತ್ತದಲ್ಲಿ ಗಣೇಶ ಮತ್ತು ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಸಾಹಿತಿ ಮತ್ತು ಸಂಶೋಧಕ ಡಾ. ಬಿ. ನಂಜುಂಡಸ್ವಾಮಿ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್‍ಕುಮಾರ್, ಎಸ್ಪಿ ಡಾ. ಕೆ. ವಂಶಿಕೃಷ್ಣ, ಶಾಸಕ ಜಿ.ಬಿ. ಜ್ಯೋತಿಗಣೇಶ್, ಕೋರಿ ಮಂಜುನಾಥ್, ಗೋವಿಂದರಾವ್, ಬಿ.ಎಸ್. ಮಂಜುನಾಥ್, ಜಿ. ಮಲ್ಲಿಕಾರ್ಜುನಯ್ಯ, ಚಿದಾನಂದ್, ಕೊಪ್ಪಲ್ ನಾಗರಾಜು, ರಮೇಶ್‍ಬಾಬು ಮತ್ತಿತರರು ಭಾಗವಹಿಸಿದ್ದರು.
      ವಿಜಯದಶಮಿ ವಿಜಯೋತ್ಸವದಲ್ಲಿ ನಗರದ ವಿವಿಧ ದೇವಸ್ಥಾನಗಳ ಉತ್ಸವ ಮೂರ್ತಿಗಳು ಪಾಲ್ಗೊಂಡು ಉತ್ಸವದ ವೈಭವ ಹೆಚ್ಚಿಸಿದ್ದವು. ಮಂಗಳ ವಾದ್ಯ, ವಿವಿಧ ಜಾನಪದ ಕಲಾ ತಂಡಗಳ ಆಕರ್ಷಕ ಪ್ರದರ್ಶನದೊಂದಿಗೆ  ಉತ್ಸವ ಪ್ರಮುಖ ರಸ್ತೆಗಳಲ್ಲಿ ಸಾಗಿತು, ಬಿ.ಹೆಚ್. ರಸ್ತೆ, ಎಂ.ಜಿ. ರೋಡ್, ಗುಂಚಿ ಸರ್ಕಲ್, ಹೊರಪೇಟೆ ವೃತ್ತದಿಂದ ಜನರಲ್ ಕಾರ್ಯಪ್ಪ ರಸ್ತೆ ಮುಖೇನ ಉತ್ಸವವು ಶಮಿಪೂಜೆ ನಡೆಯುವ ಸರ್ಕಾರಿ ಜೂನಿಯರ್ ಕಾಲೇಜು ಮೈದಾನಕ್ಕೆ ತಲುಪಿತು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link