“ಕೈ” ಹಿಡಿಯುವರೇ ಸಿಪಿವೈ..!?

ಬೆಂಗಳೂರು:

  ಸದ್ಯ ರಾಜ್ಯ ರಾಜಕೀಯದಲ್ಲಿ ಆಗುತ್ತಿರುವ ಬದಲಾವಣೆಯಿಂದ ಪಕ್ಷಾಂತರದ ಗಾಳಿ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಬೀಸುತ್ತಿರುವುದಂತೂ ನಿಜ ಅಂತೆಯೇ ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಜೆಪಿಯ ಆಪರೇಷನ್ ಕಮಲ ಕಾರ್ಯಾಚರಣೆಗಳಲ್ಲಿ ಎಕ್ಸ್ ಪರ್ಟ್ ಎಂದೇ ಕರೆಸಿಕೊಂಡಿದ್ದ ಚನ್ನಪಟ್ಟಣದ ಮಾಜಿ ಶಾಸಕ ಸಿ.ಪಿ. ಯೋಗೇಶ್ವರ್ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಕರೆ ಮಾಡಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

 ಸದ್ಯ ಮುಖ್ಯಮಂತ್ರಿಗಳ ಅವರ ಬಲಗೈ ಭಂಟನಂತಿದ್ದ  ಯೋಗೇಶ್ವರ್ ಆಪರೇಷನ್ ಕಮಲದ ಮೂಲಕ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಸಕ್ರಿಯ ಪಾತ್ರ ವಹಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೆ ಆದರೂ ಅವರು ತಾವು ಪಕ್ಷದ ಒಳಿತಿಗಾಗಿ ಎಷ್ಟೇ  ಕೆಲಸ ಮಾಡಿದರು ತಮ್ಮನ್ನು ಪಕ್ಷದ  ನಾಯಕರು ನಿರ್ಲಕ್ಷಿಸಿದ್ದಾರೆ ಮತ್ತು ಸೂಕ್ತ ಸ್ಥಾನಮಾನ ಸಿಗಲಿಲ್ಲ ಎಂದು ಬೇಸರಗೊಂಡಿದ್ದಾರೆ ಎನ್ನಲಾಗಿದೆ.

    ಸರ್ಕಾರ ರಚನೆಯಾದರೆ ಪ್ರಮುಖ ಖಾತೆ ನೀಡುವುದಾಗಿ ಸಿಪಿವೈಗೆ ಯಡಿಯೂರಪ್ಪ ವಾಗ್ದಾನ ನೀಡಿದ್ದರಂತೆ. ಆದರೆ, ಯೋಗೇಶ್ವರ್​ಗೆ ಪ್ರಮುಖ ಖಾತೆ ಸಿಗುವುದಿರಲಿ, ಸಚಿವ ಸಂಪುಟದಲ್ಲೇ ಸ್ಥಾನ ಸಿಕ್ಕಿಲ್ಲ. ಇದರಿಂದ ಸಿ.ಪಿ. ಯೋಗೇಶ್ವರ್ ಅತೀವ ನೋವಿನಲ್ಲಿದ್ದಾರೆ ಎಂದು ಅವರ ಆಪ್ತ ವಲಯಗಳು ಹೇಳುತ್ತಿವೆ.

    ಚನ್ನಪಟ್ಟಣದ ಪ್ರಮುಖ ಒಕ್ಕಲಿಗ ಮುಖಂಡರಾಗಿರುವ ಯೋಗೇಶ್ವರ್ ಅವರಿಗೆ ಬಿಜೆಪಿ ಸರ್ಕಾರ ಸಂಪುಟದಲ್ಲಿ ಸ್ಥಾನವೂ ಇಲ್ಲ ವಿಧಾನ ಪರಿಷತ್ ಸದಸ್ಯನನ್ನಾಗಿಯೂ ಮಾಡಿಲ್ಲ,ಈ ಪರಿಸ್ಥತಿಯ ಲಾಭ ಪಡೆಯಲು ಮುಂದಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಯೋಗೇಶ್ವರ್ ಜೊತೆ ಮಾತುಕತೆ ನಡೆಸಿದ್ದಾರೆ, ಮುಂಬರುವ ವಿಧಾನ ಸಭೆ ಉಪ ಚುನಾವಣೆ ಗಮನದಲ್ಲಿರಿಸಿಕೊಂಡು ಸಿದ್ದರಾಮಯ್ಯ ದಾಳ ಉರುಳಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

     ರಾಜ್ಯ ರಾಜಕೀಯದಲ್ಲಿ ಒಕ್ಕಲಿಗ ವಿರೋಧಿ ಎಂಬ ಹಣೆ ಪಟ್ಟಿಯಿಂದ ಹೊರಬರಲು ಯೋಗೇಶ್ವರ್ ಅವರನ್ನು ಮುಂಚೂಣಿಗೆ ತೆರಲು ಕಸರತ್ತು ಆರಂಭಿಸಿದ್ದಾರೆ ಎಂಬ ಉಹಾಪೊಹಗಳ ಹರಿದಾಡುತ್ತಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap